ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಹೆಸರು ಬದಲಾಯಿಸಲು ನಾಳೆಯೇ ಕೊನೆ ದಿನ.! ತಿದ್ದುಪಡಿಗೆ ಬೇಕಾಗುವ ದಾಖಲೆಗಳೇನು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ಅನ್ನಭಾಗ್ಯ (Annabhagya) ಯೋಜನೆಯ ಹೆಚ್ಚುವರಿ ಅಕ್ಕಿ ಹಣ ಪಡೆಯಲು ಹಾಗೂ ಗೃಹಲಕ್ಷ್ಮಿ (Gruhalakshmi) ಯೋಜನೆಗೆ 2,000 ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಪಡಿತರಚೀಟಿ (ration card) ಅಗತ್ಯ ದಾಖಲೆಯಾಗಿ ಬೇಕಾಗಿದೆ. ಪಡಿತರ ಚೀಟಿ ಹೊಂದಿಲ್ಲದೆ ಇರುವವರು ಹಾಗೂ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಕುಟುಂಬದ ಹಿರಿಯ ಮಹಿಳೆ ಹೆಸರು ಇಲ್ಲದೆ ಇದ್ದಲ್ಲಿ ಈ ಎರಡು ಯೋಜನೆಯ ಸಹಾಯಧನದಿಂದ ನಾಗರಿಕರು ವಂಚಿತರಾಗುತ್ತಿದ್ದಾರೆ.

ಹಾಗಾಗಿ ಈ ಸಮಸ್ಯೆಗೆ ಸಿಲುಕಿರುವ ಕರ್ನಾಟಕದ ಲಕ್ಷಾಂತರ ಮಂದಿ ಈಗ ರೇಷನ್ ಕಾರ್ಡ್ ತಿದ್ದುಪಡಿಗಾಗಿ (ration card correction) ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇದನ್ನು ಮನಗಂಡ ಆಹಾರ ಇಲಾಖೆಯ ಸಚಿವರು ಶೀಘ್ರದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಆಶ್ವಾಸನೆ ಕೊಟ್ಟಿದ್ದರು. ಅದೇ ರೀತಿಯಾಗಿ ಈಗ ರೇಷನ್ ಕಾರ್ಡ್ ತಿದ್ದುಪಡಿಗೆ, ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥರ ಹೆಸರು ಬದಲಾವಣೆಗೆ ಹಾಗೂ ಹೊಸ ಹೆಸರು ಸೇರ್ಪಡೆ ಮಾಡಲು ಮತ್ತು ಹಳೆ ಹೆಸರನ್ನು ತೆಗೆದುಹಾಕುವುದಕ್ಕೆ ಅನುಮತಿ (Permission) ನೀಡಲಾಗಿದೆ.

ಅಂಚೆ ಇಲಾಖೆಯಲ್ಲಿ ಖಾಲಿ ಇರುವ 30,041 ಹುದ್ದೆಗಳಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಕೆಗೆ ಆಗಸ್ಟ್ 23 ಕೊನೇ ದಿನ. ವೇತನ 29,380/-

ಆದರೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ. ನೀವೇನಾದರೂ ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಈ ರೀತಿ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇಕು ಎಂದರೆ ನಿಮಗೆ ಸರ್ಕಾರ ನಾಲ್ಕು ದಿನಗಳವರೆಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ. 17 ಆಗಸ್ಟ್, 2023 ರಿಂದ 20 ಆಗಸ್ಟ್ 2023ರ ವರೆಗೆ ಮಾತ್ರ ಇದಕ್ಕೆ ಸಮಯ ನಿಗದಿ ಮಾಡಿ ಗಡುವು ಕೊಟ್ಟಿದೆ.

ಆ ಪ್ರಕಾರ ನಾಳೆಯೇ ಕೊನೆಯ ದಿನ ಹಾಗಾಗಿ ಶೀಘ್ರವೇ ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ (Sevakendra) ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೋಗಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯವನ್ನು ಪೂರ್ತಿಗೊಳಿಸಿ ಹಾಗೆಯೇ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕೆಲವು ದಾಖಲೆಗಳನ್ನು ಹೊಂದಿರಲೇಬೇಕು.

ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಕೇವಲ 4 ದಿನಗಳು ಮಾತ್ರ ಅವಕಾಶ, ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

ನೀವು ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕು ಮತ್ತು ಯಾವ ರೀತಿ ಈ ಕಾರ್ಯ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗುವ ಪ್ರಮುಖ ದಾಖಲೆಗಳು:-

● ಮೂಲ ಪಡಿತರ ಚೀಟಿ
● ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಪ್ರತಿ
● ಕುಟುಂಬದ ಸದಸ್ಯರ ಬಯೋಮೆಟ್ರಿಕ್ ಮಾಹಿತಿ
● ಕುಟುಂಬದಲ್ಲಿ ಯಾರಾದರೂ ಸದಸ್ಯರು ಮರಣ ಹೊಂದಿದ್ದರೆ ಅವರ ಹೆಸರು ತೆಗೆದು ಹಾಕಿಸಲು ಅವರ ಮರಣ ಪ್ರಮಾಣ ಪತ್ರ
● ಯಾವುದಾದರೂ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಿಸಬೇಕಾಗಿದ್ದಲ್ಲಿ ಅವರ ಆಧಾರ್ ಕಾರ್ಡ್ ಮತ್ತು ಸ್ವಯಂ ಘೋಷಣೆ ಪತ್ರ, ಬಯೋಮೆಟ್ರಿಕ್ ಮಾಹಿತಿ ಹಾಗೂ ಪೂರಕ ದಾಖಲೆಗಳು ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಬೇಕು.

ಗೃಹಲಕ್ಷ್ಮಿಗೆ ಹಣ ಹಾಕಲು ಡೇಟ್ ಫಿಕ್ಸ್ ಆದ್ರೆ ಈ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 2000 ಹಣ ಪಡೆಯುವ ಭಾಗ್ಯ ಇಲ್ಲ.!

● ಐದು ವರ್ಷದ ಒಳಗಿನ ಮಗುವಿನ ಹೆಸರನ್ನು ಸೇರ್ಪಡೆ ಮಾಡಿಸಬೇಕಾಗಿದ್ದರೆ ಬಯೋಮೆಟ್ರಿಕ್ ಮಾಹಿತಿ ಅಗತ್ಯವಿಲ್ಲ, ಅದರ ಬದಲು ಮಗುವಿನ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್
● ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಹೆಸರು ಬದಲಾವಣೆ ಮಾಡಿಸಬೇಕೆಂದರೆ ಇದಕ್ಕಾಗಿ ಅರ್ಜಿ ನಮೂನೆ ಸಿಗುತ್ತದೆ ಅದನ್ನು ಭರ್ತಿ ಮಾಡಿ ಸಕಾರಣಗಳನ್ನು ಕೊಟ್ಟು ಸಹಿ ಮಾಡಿ ಸಲ್ಲಿಸಬೇಕು.
● ಕುಟುಂಬದ ಯಾವುದಾದರೂ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ

● ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಈ ಮೇಲೆ ಸೂಚಿಸಿದ ಸೇವಾಕೇಂದ್ರಗಳಿಗೆ ಭೇಟಿ ಕೊಟ್ಟರೆ ಅವರು ನಿಮ್ಮ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಕೊಡುತ್ತಾರೆ. ಇದಾದ ಕೆಲವು ದಿನಗಳ ಬಳಿಕ ನಿಮಗೆ ಆಹಾರ ಇಲಾಖೆಯಿಂದ SMS ಬರುತ್ತದೆ. ನಂತರ ನಿಮಗೆ ಅರ್ಜಿ ಸ್ವೀಕೃತಿ ಪತ್ರದಲ್ಲಿ ನೀಡಿದ್ದ ನಂಬರ್ ಬಳಸಿ ನೀವು ಹೊಸ ರೇಷನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ನೇರವಾಗಿ ನೀವು ಅರ್ಜಿ ಸ್ವೀಕೃತಿ ಪತ್ರದ ಜೊತೆಗೆ ಕೆಲ ಪ್ರಮುಖ ದಾಖಲೆಗಳನ್ನು ಆಹಾರ ಇಲಾಖೆ ಸಂಬಂಧ ಪಟ್ಟ ವಿಭಾಗಕ್ಕೆ ಸಲ್ಲಿಸುವ ಮೂಲಕವೂ ಹೊಸ ರೇಷನ್ ಕಾರ್ಡ್ ಪಡೆಯಬಹುದು.

ಎದೆಯಲ್ಲಿ ಈ ಲಕ್ಷಣಗಳು ಇದ್ದರೆ ಖಂಡಿತ ಅದು ಖಂಡಿತ ಬ್ರೆಸ್ಟ್ ಕ್ಯಾನ್ಸರ್, ಇದಕ್ಕೆ ಪರಿಹಾರವೇನು ಗೊತ್ತಾ.? ಡಾ.ಅಂಜನಪ್ಪ ಅವರ ಈ ಸಲಹೆ ಅನುಸರಿಸಿ ಸಾಕು.!

● ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಆದ https://ahara.kar.nic.in/ ಭೇಟಿ ಕೊಟ್ಟು ನಂತರ e-services ಎನ್ನುವ ಆಪ್ಷನ್ ಕ್ಲಿಕ್ ಮಾಡಿ ಅದರಲ್ಲಿ ration card correction ಆಯ್ಕೆಯನ್ನು ಸೆಲೆಕ್ಟ್ ಮಾಡಿ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡ್ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಕೆ ಸಕ್ಸಸ್ ಆದ ನಂತರ reference num. ಪಡೆಯಬಹುದು ನಂತರ ಅದರ ಮೂಲಕ Status ಚೆಕ್ ಮಾಡಿಕೊಂಡು ನಿಮ್ಮ ರೇಷನ್ ಕಾರ್ಡ್ ಅನುಮೋದನೆ ಆದ ತಕ್ಷಣ ಹೊಸ ರೇಷನ್ ಕಾರ್ಡ್ ಪ್ರಿಂಟ್ ಔಟ್ ಪಡೆದುಕೊಳ್ಳಬಹುದು.

Leave a Comment

%d bloggers like this: