ದೇಶದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದು ಬಡ ಹಾಗೂ ಮಧ್ಯಮ ವರ್ಗದ ಜನತೆಯ ಜೀವನವನ್ನು ದುಬಾರಿಗೊಳಿಸಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇಟ್ಟ ದಿಟ್ಟ ಹೆಜ್ಜೆ ಎಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ (PMUY) ನೀಡುತ್ತಿದ್ದ ಸಬ್ಸಿಡಿಯನ್ನು ಹೆಚ್ಚಿಗೆಗೊಳಿಸಿ ಅದನ್ನು ಇನ್ನೊಂದು ವರ್ಷಗಳವರೆಗೆ ವಿಸ್ತರಿಸಿದ್ದಾರೆ.
ಇದರ ಪ್ರಯುಕ್ತ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಹರಾಗಿರುವ ಮಹಿಳೆಯರು ಪ್ರತಿ ತಿಂಗಳು ರೂ.300 ರಂತೆ, 12 ತಿಂಗಳಿಗೆ ರೂ.3,600 ನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಡೆಯಲಿದ್ದಾರೆ. ಇದಕ್ಕಿರುವ ಕಂಡೀಷನ್ ಗಳು ಏನು ಮತ್ತು ಪಡೆಯುವುದು ಹೇಗೆ ಇತ್ಯಾದಿ ವಿವರದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ.
ಈ ಸುದ್ದಿ ಓದಿ:- ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!
ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಬಗ್ಗೆ ಅನೇಕರಿಗೆ ಗೊತ್ತೇ ಇದೆ. ಮಹಿಳೆಯರಿಗೆ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟು ಅವರ ಆರೋಗ್ಯ ರಕ್ಷಣೆ ಮಾಡುವುದರ ಜೊತೆಗೆ ವಾಯು ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಧ್ಯೇಯ ಇಟ್ಟುಕೊಂಡು 2016ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು (PM Narendra Modi) ಈ ಯೋಜನೆಯನ್ನು ಜಾರಿಗೆ ತಂದರು.
ಬಡತನ ಕೆಳಗಿರುವ ಕುಟುಂಬಗಳ ಮಹಿಳೆಯರು ಅರ್ಜಿ ಸಲ್ಲಿಸಿ ತಮ್ಮ ಕುಟುಂಬಕ್ಕೆ ಈ ಯೋಜನೆ ಮೂಲಕ ಉಚಿತ ಗ್ಯಾಸ್ ಕನೆಕ್ಷನ್ ಪಡೆಯುವುದರ ಜೊತೆಗೆ ಒಂದು ಗ್ಯಾಸ್ ಸ್ಟವ್, ಸಿಲಿಂಡರೊ, ರೆಗುಲೇಟರ್ ಹಾಗೂ ಗ್ಯಾಸ್ ಲೈಟರ್ ಈ ರೀತಿ ಅಡುಗೆ ಅನಿಲ ಉಪಯೋಗಿಸಿ ಅಡುಗೆ ಮಾಡಲು ಬೇಕಾದ ಸೌಕರ್ಯವನ್ನು ಉಚಿತವಾಗಿ ಪಡೆದುಕೊಳ್ಳಲು ಕೇಂದ್ರ ಸರ್ಕಾರ ನೆರವು ನೀಡಿದೆ.
ಈ ಸುದ್ದಿ ಓದಿ:- ಈ ಲಿಸ್ಟ್ ನಲ್ಲಿ ಇರುವ ಮಹಿಳೆಯರಿಗೆ ಒಂದೇ ತಿಂಗಳಿಗೆ 2 ಬಾರಿ ಗೃಹಲಕ್ಷ್ಮಿ ಯೋಜನೆ 4000 ಹಣ ಬಂದಿದೆ.! ನೀವು ಚೆಕ್ ಮಾಡಿ
ಇಂದು ದೇಶದ ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ ಆರಂಭದಲ್ಲಿ ಕೆಲ ದಿನಗಳು ಸಬ್ಸಿಡಿ (Subsidy) ನೀಡುತ್ತಿದ್ದರಾದರೂ ಕೊರೋನ ಅವಧಿ ನಡುವೆ ಇದು ಸ್ಥಗಿತಗೊಂಡಿತು. 2022 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತೆ ಉಜ್ವಲ್ ಯೋಜನೆಯಡಿ ನೀಡುತ್ತಿದ್ದ ಕೊಡುಗೆಯನ್ನು ಮರು ಆರಂಭಿಸಿದರು.
ಮೇ 2022 ರಲ್ಲಿ ರೂ.200 ಗಳ ಸಬ್ಸಿಡಿ ಘೋಷಿಸಿದ್ದರು, ಮತ್ತೆ ಅಕ್ಟೋಬರ್ ತಿಂಗಳಿನಲ್ಲಿ ಇದನ್ನು ರೂ.300 ಕ್ಕೆ ಏರಿಕೆ ಮಾಡಲಾಯಿತು. ಈಗ ಒಂದು ವರ್ಷಗಳ ಅವಧಿಗೆ ಇದ್ದ ಅವಕಾಶವನ್ನು 2024 ರ ಮಹಿಳಾ ದಿನಾಚರಣೆ ಅಂಗವಾಗಿ ಮತ್ತೊಂದು ವರ್ಷಗಳಿಗೆ ಅಂದರೆ ಮಾರ್ಚ್ 2025 ರವರೆಗೂ ವಿಸ್ತರಿಸಲಾಗಿದೆ.
ಈ ಸುದ್ದಿ ಓದಿ:- ಕೇವಲ 12,500 ಹೂಡಿಕೆ ಮಾಡಿ ಸಾಕು 1 ಕೋಟಿ ಸಿಗುತ್ತೆ ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್ ಇದು.!
ಹೀಗಾಗಿ ಮಹಿಳೆಯರು ವಾರ್ಷಿಕವಾಗಿ 12 ಬುಕಿಂಗ್ ವರೆಗೆ ರೂ.300 ರೂಪಾಯಿಗಳನ್ನು ಸಬ್ಸಿಡಿ ಪಡೆಯಬಹುದು ಆದರೆ ಇದಕ್ಕೆ ಕಂಡಿಷನ್ ಗಳು ಇವೆ. ಅದೇನೆಂದರೆ, ಫಲಾನುಭವಿಯು ತನ್ನ ಗ್ಯಾಸ್ ಕನೆಕ್ಷನ್ ಗೆ ಇ-ಕೆವೈಸಿ (e-KYC) ಮಾಡಿಸಬೇಕು. ಜೊತೆಗೆ DBT ಮೂಲಕ ಹಣ ವರ್ಗಾವಣೆಯಾಗಲು ಬ್ಯಾಂಕ್ ಖಾತೆ ಆಕ್ಟಿವ್ ಆಗಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮಾರ್ಪಿಂಗ್ ಆಗಿರುವುದು ಮುಖ್ಯವಾಗುತ್ತದೆ.
ಜೊತೆಗೆ ಕಳೆದ 10 ವರ್ಷಗಳಿಂದ ಒಮ್ಮೆ ಕೂಡ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಎಂದರೆ ಉಚಿತವಾಗಿ ಜುಲೈ 14ರ ಒಳಗೆ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳುವುದು ಕೂಡ ಮುಖ್ಯ ಆಗುತ್ತದೆ. ಇಲ್ಲವಾದಲ್ಲಿ ಹಣ ಪಡೆಯಲು ಸಮಸ್ಯೆ ಆಗುತ್ತದೆ.
ಈ ಸುದ್ದಿ ಓದಿ:- HDFC ಬ್ಯಾಂಕಿನಿಂದ ಬಂಪರ್ ಆಫರ್, ಕೇವಲ 10 ನಿಮಿಷದಲ್ಲಿ ಸಿಗಲಿದೆ 10 ಲಕ್ಷದವರೆಗೆ ಸಾಲ.!
ಹಾಗಾಗಿ ಇವುಗಳ ಬಗ್ಗೆ ಗಮನ ಹರಿಸಿ ಅರ್ಹ ಫಲಾನುಭವಿಗಳು ತಪ್ಪದೆ ಸರ್ಕಾರದಿಂದ ಸಿಗುತ್ತಿರುವ ಈ ಸೌಲಭ್ಯವನ್ನು ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.