ಅಧಿಕಾರಕ್ಕೆ ಬಂದ ಕೂಡಲೇ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರುವ ಮಾನ್ಯ ಮುಖ್ಯಮಂತ್ರಿಗಳು (Chief Minister) ಈ ಯೋಜನೆಗಳ ಹೊರತಾಗಿ ಅನೇಕ ಜನಪ್ರಿಯ ಚಟುವಟಿಕೆಗಳ ಕಡೆಯೂ ಕೂಡ ಗಮನ ಹರಿಸುತಿದ್ದಾರೆ. ಎಲ್ಲಾ ವರ್ಗದವರಿಗೆ ಸಮಸ್ಯೆಗಳನ್ನು ಆಲಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಈಗ ರಾಜ್ಯದಲ್ಲಿ ರೈತರ (farmers) ಪರವಾಗಿ ಸರ್ಕಾರ ನಿಲ್ಲುವ ಭರವಸೆಯನ್ನು ನೀಡಿ ರೈತರಿಗೆ ಸಮಾಧಾನ ತಂದಿದ್ದಾರೆ.
ಬೆಳೆ ಸಾಲ ಮಾಡಿ ಸುಸ್ತಿದಾರರಾಗಿರುವ ರೈತರಿಗೆ OTS (One time Settlement) ಯೋಜನೆಯಿಂದ ಅನುಕೂಲ ಕಲ್ಪಿಸುವ ಕಡೆ ಚಿಂತನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳ ಜೊತೆ ಸಂವಾದ ನಡೆಸಿ ಪರಿಹಾರ ಕಂಡುಕೊಳ್ಳಲು ಸೂಚಿಸುತ್ತಾರೆ. ಬಳ್ಳಾರಿ (Ballary) ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ (Karnataka Grameena Bank) ಸಾಲ ಪಡೆದ ರೈತರು ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ, ಬೆಳೆಗಳಿಗೆ ರೋಗ ಇನ್ನು ಮುಂತಾದ ಕಾರಣಗಳಿಂದಾಗಿ ನ’ಷ್ಟ ಹೊಂದಿದ್ದಾರೆ.
ಮಾತ್ರೆ, ಇನ್ಸುಲಿನ್ ಇಲ್ಲದೆ ಸಕ್ಕರೆ ಕಾಯಿಲೆ ಗುಣಪಡಿಸುವ ವಿಧಾನ. ಶುಗರ್ ಪೇಷಂಟ್ ಗಳು ತಪ್ಪದೆ ಈ ಮಾಹಿತಿಯನ್ನು ನೋಡಿ.!
ಕೃಷಿ ಚಟುವಟಿಕೆಗಾಗಿ ಬ್ಯಾಂಕುಗಳಿಂದ ಸಾಲ (croploan) ಪಡೆದಿದ್ದ ರೈತರುಗಳು ಸಕಾಲಕ್ಕೆ ಸರಿಯಾಗಿ ಅವುಗಳ ಬಡ್ಡಿಯನ್ನು ಹಾಗೂ ಅಸಲನ್ನು ತೀರಿಸಲಾಗದ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಆದರೆ ಇತ್ತ ಬ್ಯಾಂಕ್ ಗಳು ತಮ್ಮ ಸಾಲವನ್ನು ವಾಪಸ್ಸು ರೈತರಿಂದ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಲಿವೆ. ಬ್ಯಾಂಕ್ ಸಿಬ್ಬಂದಿಗಳು ರೈತರಿಗೆ ನೋಟಿಸ್ ಮೇಲೆ ನೋಟಿಸ್ ಕಳಿಸುವ ಮೂಲಕ ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಲೀಗಲ್ ನೋಟಿಸ್ ಗಳ ವೆಚ್ಚವನ್ನೆಲ್ಲ ರೈತರ ಮೇಲೆ ಹಾಕುತ್ತಿದ್ದಾರೆ ಇದರಿಂದ ರೈತರ ನ’ಷ್ಟ’ದ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತಿದೆ. ಬ್ಯಾಂಕ್ ಗಳ ಈ ರೀತಿ ವರ್ತನೆಯ ಕಾರಣದಿಂದಾಗಿ ರೈತರ ಪರಿಸ್ಥಿತಿ ಹೇಗಾಗಿದೆ ಎಂದರೆ 30,000 ಸಾಲವನ್ನು ಮಾಡಿದ್ದ ರೈತನು ಈಗ ಒಟ್ಟಾರೆಯಾಗಿ 2.8 ಲಕ್ಷ ಮರುಪಾವತಿಸ ಬೇಕಾಗಿದೆ. 3,00,000 ಸಾಲ ಮಾಡಿದ ರೈತನ ಸಾಲ 30ಲಕ್ಷ ಬೆಳೆದಿದೆ ಅಷ್ಟೆಲ್ಲ ಹಣವನ್ನು ಕಟ್ಟಬೇಕು ಎಂದು ಬ್ಯಾಂಕ್ ಗಳು ರೈತನಿಗೆ ಕಿ’ರು’ಕು’ಳ ಕೊಡುತ್ತಿವೆ.
ಹಳೆ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ ಇಲ್ಲದಿದ್ದರೆ ದಂಡ ಕಟ್ಟ ಬೇಕಾಗುತ್ತದೆ ಸಾರಿಗೆ ಇಲಾಖೆಯಿಂದ ಖಡಕ್ ಆದೇಶ.!
ಇದರಿಂದ ಅನ್ನದಾತ ಅಕ್ಷರಶಃ ಕಂಗಲಾಗಿ ಹೋಗಿದ್ದಾನೆ. ಇದನ್ನು ವಿರೋಧಿಸಿ ಆ ಭಾಗದ ರೈತರು ಕಳೆದ ಎಂಟು ತಿಂಗಳಿನಿಂದ ಬ್ಯಾಂಕ್ ಗಳ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಇದ್ದರು. ಶಾಸಕ ಬಿ. ಆರ್ ಪಾಟೀಲ್ ಹಾಗೂ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ರೈತ ಮುಖಂಡರು ಗೃಹಪ್ರಛೇರಿ ಕೃಷ್ಣಾ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM.Siddaramaih) ಭೇಟಿಯಾಗಿ ಈ ಸಮಸ್ಯೆ ಪರಿಹಾರಸುವಂತೆ ಮನವಿ ಮಾಡಿಕೊಂಡಿದ್ದರು.
OTS ಮುಖಾಂತರ 50%ರಷ್ಟು ಅಸಲನ್ನು ತೀರಿಸಲು ರೈತರು ಸಿದ್ಧವಿರುವ ಕಾರಣ ಇದರ ಸಂಬಂಧಿತ NABARD ಹಾಗೂ ಪ್ರವರ್ತಕ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲು ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆ ಅಪರ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಈ ಸಭೆಯಲ್ಲಿ ಬ್ಯಾಂಕಿನ ಅಧಿಕಾರಿಗಳು OTS ಬಗ್ಗೆ ಬ್ಯಾಂಕಿನ ಮುಖ್ಯಸ್ಥರು ಒಪ್ಪಿಗೆ ಕೊಡಬೇಕಾಗಿದೆ. ಒಟ್ಟಾಗಿ ಬ್ಯಾಂಕಿನಲ್ಲಿ 6,500 ಕೋಟಿ ಸುಸ್ತಿ ಸಾಲವಿದೆ. ಇದರಲ್ಲಿ ಬೆಳೆ ಸಾಲವೇ 5,000 ಕೋಟಿಗಿಂತ ಹೆಚ್ಚಿದೆ ಎನ್ನುವ ಅಂಕಿಅಂಶಗಳನ್ನು ತಿಳಿಸಿದರು. ಬ್ಯಾಂಕಿನ ಮುಖ್ಯಸ್ಥರ ಅನುಪಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಅಧಿಕಾರಿಗಳು ರೈತರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎನ್ನುವ ಬುದ್ಧಿ ಮಾತು ಹೇಳಿದರು.
ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಂಬಂಧಿಸಿದ ಬ್ಯಾಂಕುಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಪರಿಹಾರ ಸೂತ್ರ ಕಂಡುಕೊಂಡ ನಂತರ ರೈತ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು.