ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಬದಲಾವಣೆಗಳು ಆಗಿವೆ. ಗ್ಯಾರೆಂಟಿ ಯೋಜನೆಗಳ ಜಾರಿ ಜೊತೆಗೆ ಹಲವು ವಿಷಯಗಳಲ್ಲಿ ಸರ್ಕಾರ ಬದಲಾವಣೆ ತಂದಿದೆ. ಹೊಸ ಸರ್ಕಾರ ಸ್ಥಾಪನೆಯಾಗಿ ನೂರು ದಿನಗಳು ತುಂಬುವುದರ ಒಳಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಗ್ಯಾರೆಂಟಿ ಯೋಜನೆಗಳು ಮತ್ತು ಜನಪ್ರಿಯ ಯೋಜನೆಗಳ ಜಾರಿ (Guarantee Schemes and other Schemes) ಸಂತಸದ ಜೊತೆಗೆ ಬೆಲೆ ಏರಿಕೆ (Price high) ಬಿಸಿ ಕೂಡ ರಾಜ್ಯದ ಜನತೆಗೆ ತಟ್ಟಿದೆ.
ಇತ್ತೀಚೆಗಷ್ಟೇ ನಂದಿನಿ ಹಾಲಿನ ದರ (Nandini Milk rate) ಹೆಚ್ಚಳವಾಗಿತ್ತು, ಈಗ ಮುಂದುವರೆದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಶುಲ್ಕ (Revenue department charges) ಹೆಚ್ಚಳ ಮಾಡುವ ಕಡೆ ಗಮನ ಹರಿಸಿದೆ. ಇದಕ್ಕೆ ಕಾರಣ ಮತ್ತು ಇದರ ಕುರಿತು ಕೆಲ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ.!
ನೂತನ ಸರ್ಕಾರ ಸ್ಥಾಪನೆಯಾದ ಮೇಲೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ವಿಚಾರದಲ್ಲಿ ನಿಯಮಗಳು ಬದಲಾವಣೆ ಆಗಿದೆ. PTCL ಕಾಯ್ದೆ ಜಾರಿಗೆ ಬಂದಿರುವುದು ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ ಸೇರಿದ ಜನರಿಗೆ ಅವರ ಆಸ್ತಿ ಹಕ್ಕಿನ ಕುರಿತು ಒಂದು ಭದ್ರತಿಯನ್ನು ನೀಡಿದಂತಾಗಿದೆ ಎಂದೇ ಹೇಳಬಹುದು.
ಈ ವರ್ಗದ ಜನರಿಂದ ಅಕ್ರಮವಾಗಿ ಜಮೀನುಗಳನ್ನು ಸು’ಲಿ’ಗೆ ಮಾಡಿ ವಶಪಡಿಸಿಕೊಳ್ಳುತ್ತಿದ್ದವರಿಗೆ ಸರ್ಕಾರ ಈ ಮೂಲಕ ಚಾಟಿ ಬೀಸಿದೆ. ಇದರೊಂದಿಗೆ ಮತ್ತೊಬ್ಬರ ಆಸ್ತಿ ದಾಖಲೆಯನ್ನು ತಿರುಚಿ (fake documents) ಮೋ’ಸ ಮಾಡಿ ವ್ಯಾಪಾರ ಮಾಡುತ್ತಿದ್ದ ಜನರಿಗೂ ಕೂಡ ಕಂದಾಯ ಇಲಾಖೆಯ ಹಾಲಿ ಸಚಿವರಾದ ಕೃಷ್ಣ ಭೈರೇಗೌಡ (Minister Krishna Bairegowda) ಅವರು ಹೊಸ ನಿಯಮವನ್ನು ಜಾರಿಗೊಳಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ 2000 ಹಣ ಯಾರಿಗೆಲ್ಲಾ ಬಂದಿಲ್ಲ ನಿಮ್ಮ ಮೊಬೈಲ್ ನಲ್ಲಿ ಹೀಗೆ ಮಾಡಿ ಹಣ ಬರುತ್ತದೆ.!
ಆಸ್ತಿ ರಿಜಿಸ್ಟ್ರೇಷನ್ ಆದ ಮೇಲೂ ಕೂಡ ಮತ್ತೊಬ್ಬರ ಆಸ್ತಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಅಥವಾ ಮೋ’ಸ ಮಾಡಿ ಮಾರಾಟ ಮಾಡಿದ್ದಾರೆ ಎಂದು ಕಂಡು ಬಂದರೆ ತಕ್ಷಣವೇ ರಿಜಿಸ್ಟ್ರೇಷನ್ ರದ್ದುಪಡಿಸಲಾಗುವುದು (Registration Cancel) ಎಂದು ಹೇಳಿರುವುದು ಆಸ್ತಿ ಪರಾಭಾರೆ ವಿಚಾರದಲ್ಲಿ ಮಹತ್ವದ ಆದೇಶ ಎಂದೇ ಹೇಳಬಹುದು.
ಈಗ ರಾಜಸ್ವ ಸಂಗ್ರಹದ ಕಡೆ ಗಮನ ಕೊಟ್ಟಿರುವ ಸರ್ಕಾರವು ಕಂದಾಯ ಇಲಾಖೆಯಲ್ಲಿ ಶುಲ್ಕ ಪರಿಷ್ಕರಣೆಗೆ ಮುಂದಾಗಿದೆ. ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಹೆಚ್ಚಳ ಮಾಡುವುದರ ಬಗ್ಗೆ ಈ ಹಿಂದಿನ ಸೂಚನೆ ನೀಡಿದ ಸರ್ಕಾರವು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಹೊಸ ಶುಲ್ಕ ನಿಗದಿಪಡಿಸಿದೆ. ಪ್ರತಿ ವರ್ಷವೂ ಕೂಡ ಈ ರೀತಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸಬೇಕು. ಆದರೆ ಕಳೆದ ಐದು ವರ್ಷಗಳಿಂದ ಕೋವಿಡ್ ಮತ್ತು ಮತ್ತಿತರ ಕಾರಣಗಳಿಂದಾಗಿ ಈ ರೀತಿ ಶುಲ್ಕ ಹೆಚ್ಚಿಸಲು ಆಗಿರಲಿಲ್ಲ.
ರೇಷನ್ ಕಾರ್ಡ್ ಇದ್ದವರಿಗೆ ಕೇವಲ 428 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್.!
ಹಾಗಾಗಿ ಈ ನಿರ್ಧಾರ ಕೈಗೊಂಡಿರುವಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಮತ್ತೊಂದು ಮಹತ್ವದ ವಿಷಯ ಏನೆಂದರೆ, ಎಲ್ಲೆಡೆ ಕೂಡ ಈ ರೀತಿ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಸಮಾನವಾಗಿ ಇಲ್ಲ ಹಾಗಾಗಿ ಅವುಗಳನ್ನು ನೋಡಿಕೊಂಡು ತೀರ ಕಡಿಮೆ ಇರುವ ಕಡೆ ಹೆಚ್ಚಳ ಮಾಡಲಾಗುವುದು.
ಜೊತೆಗೆ ಇತ್ತೀಚೆಗೆ ಡೆವಲಪ್ ಆಗಿರುವ ಪ್ರದೇಶಗಳಲ್ಲಿಯೂ ಹಿಂದೆ ಇದ್ದ ಶುಲ್ಕ ಕಡಿಮೆ ಇರುವುದರಿಂದ ಅದನ್ನು ಪರಿಷ್ಕರಿಸಿ ನಿಗಧಿ ಮಾಡಲಾಗುವುದು, ಈಗಾಗಲೇ ಮಾರುಕಟ್ಟೆಗಿಂತ ಹೆಚ್ಚಿಗಿರುವ ಕಡೆ ಹಾಗೆ ಬಿಡುವುದಾಗಿ ಚರ್ಚೆಯಾಗಿದೆ ಎನ್ನಲಾಗುತ್ತಿದೆ. ಬಲವಾದ ಮೂಲಗಳ ಮಾಹಿತಿ ಪ್ರಕಾರ ಈಗಿರುವ ಶುಲ್ಕಕಿಂತ 30% ರಿಂದ 40% ಹೆಚ್ಚಳವಾಗಲಿದೆ ಎಂದು ಸಹಾ ಊಹಿಸಲಾಗಿದೆ. ಹಾಗಾಗಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರಿಗೆ ಇದರಿಂದ ಸ್ವಲ್ಪ ಹೊರೆ ಹೆಚ್ಚಾಗಲಿದೆ ಎಂದೇ ಹೇಳಬಹುದು.
ಕೋಟಿ ಕೋಟಿ ಬೆಲೆ ಬಾಳುವ ಫ್ಲಾಟ್ ಕೇವಲ 100 ರೂಪಾಯಿಗೆ ವಿತರಣೆ.!