ಅಂತಿಮವಾಗಿ ಇಡೀ ಭಾರತವೇ ಕಾಯುತ್ತಿದ್ದ ಅಮೃತ ಘಳಿಗೆ ಸನ್ನಿಹಿತವಾಗಿದೆ. ಹಿಂದೂಗಳ ಆರಾಧ್ಯ ದೈವವಾದ ಶ್ರೀ ರಾಮನಿಗೆ ಅಯೋಧ್ಯೆ(Ayodhya)ಯಲ್ಲಿ ಭವ್ಯವಾದ ರಾಮ ಮಂದಿರ(Ram Mandir) ನಿರ್ಮಾಣವಾಗುತ್ತಿದ್ದು ಹಲವು ವರ್ಷಗಳ ಕನಸಾಗಿದ್ದ ಪುಣ್ಯ ಕಾರ್ಯಕ್ಕೆ ಕಾಲ ಕೂಡಿ ಬಂದಿದೆ.
ಇದೇ ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯೂ ಕೂಡ ನೆರವೇರುತ್ತಿದ್ದು, ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಈಗಾಗಲೇ ದೇಶದ ಮನೆ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ಖುಷಿಗೆ ಕಾರಣಕರ್ತರಾದ ದಶಕಗಳಿಂದ ಕಾನೂನಿನ ಹೋರಾಟದಲ್ಲಿ ಶ್ರೀ ರಾಮನ ಪರವಾಗಿ ವಾದಿಸುತ್ತಾ ಬಂದ ವಕೀಲರ ಬಗ್ಗೆಯೂ ಈ ಸಮಯದಲ್ಲಿ ನೆನೆಯಲೇಬೇಕು, ಅದಕ್ಕಾಗಿ ಈ ಅಂಕಣದಲ್ಲಿ ಕೆಲ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ.? ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!
ಅಯೋಧ್ಯೆ ಭೂ ವಿವಾದ ಇಂದು ನೆನ್ನೆಯದಲ್ಲ. ಸ್ವತಂತ್ರ ಪೂರ್ವವಾಗಿ ಸುಮಾರು 400 ವರ್ಷಗಳಿಂದಲೂ ನಡೆಯುತ್ತಲೇ ಇತ್ತು, 400 ವರ್ಷಗಳಷ್ಟು ಹಳೆಯದಾದ ಅಯೋಧ್ಯೆ ಪ್ರಕರಣಕ್ಕೆ 2019ರಲ್ಲಿ 40 ದಿನಗಳ ನಿರಂತರ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪಂಚಪೀಠವು ಕೊನೆಯ ದಿನ ರಾಮ ಮಂದಿರದ ಪರವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿ ವಿವಾದಿತ ಜಮೀನಿನ ಮಾಲೀಕತ್ವವನ್ನು ರಾಮ ಜನ್ಮಭೂಮಿ ಟ್ರಸ್ಟ್ಗೆ ಹಸ್ತಾಂತರಿಸಿದರು.
ಇದರಲ್ಲಿ ಶ್ರೀ ರಾಮನು ಸೇರಿದಂತೆ ಅಖಂಡ ಭಾರತದ ರಾಮಭಕ್ತರ ಪರವಾಗಿ ಪರವಾಗಿ ವಕಾಲತ್ತು ವಹಿಸಿದ್ದ ವಕೀಲರದ್ದು ಬಹು ಮುಖ್ಯ ಪಾತ್ರವಾಗಿದೆ. ಇವರಲ್ಲೊಬ್ಬರು ಪ್ರಯಾಗ್ರಾಜ್ ಮೂಲದ ಹರಿಶಂಕರ್ ಜೈನ್ ಅವರು 1978-79ರಲ್ಲಿ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಬೆಂಚ್ನಿಂದ ವಕೀಲ ವೃತ್ತಿಯ ಅಭ್ಯಾಸ ಆರಂಭಿಸಿ ನಂತರ ಅವರು ಸುಪ್ರೀಂ ಕೋರ್ಟ್ಗೆ ಹೋದರು.
ಮೋಸದಿಂದ ಕ್ರಯ ಪತ್ರ / ಮಾರಾಟ ಪತ್ರ ಆಗಿದ್ದರೆ ಮೋಸದ ಕ್ರಯ ಪತ್ರವನ್ನು ಸಾಬೀತುಪಡಿಸುವುದು ಮತ್ತು ರದ್ದುಗೊಳಿಸುವುದು ಹೇಗೆ ನೋಡಿ.!
ಇದುವರೆಗೆ ಅವರು 100 ಕ್ಕೂ ಹೆಚ್ಚು ಪ್ರಕರಣಗಳನ್ನು ಹೋರಾಡಿದ್ದಾರೆ. 1989 ರಲ್ಲಿ ಅಯೋಧ್ಯೆ ವಿವಾದದಲ್ಲಿ ಹಿಂದೂ ಮಹಾಸಭಾದ ವಕೀಲರಾಗಿ ನೇಮಕಗೊಂಡು ರಾಷ್ಟ್ರೀಯ ಮನ್ನಣೆ ಪಡೆದರು. ಇವರು ಮಾತ್ರವಲ್ಲದೆ ಇವರ ಮಗ ವಿಷ್ಣು ಶಂಕರ್ ಜೈನ್ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ, ಕಾಶಿ ವಿಶ್ವನಾಥ್-ಜ್ಞಾನವಾಪಿ ಮಸೀದಿ ಮತ್ತು ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಇಂತಹ ಪ್ರಕರಣಗಳಲ್ಲಿ ಹಿಂದೂ ಪರ ವಕೀಲರಾಗಿದ್ದಾರೆ.
ವಿಶೇಷವೆಂದರೆ ಈ ತಂದೆ-ಮಗ ಇಬ್ಬರೂ ಹಿಂದೂ ಪಕ್ಷದ ಪರವಾಗಿ ಪ್ರಕರಣದ ಹೋರಾಟಕ್ಕೆ ಹಣ ಪಡೆಯದೆ ಸೇವೆ ಹಾಗೂ ಕರ್ತವ್ಯ ಎಂದು ಭಾವಿಸಿ ಶ್ರಮ ಪಡುತ್ತಿದ್ದಾರೆ, ಹಣ ಪಡೆದರೆ ನಮ್ಮ ಉದ್ದೇಶ ವಿಫಲವಾಗುತ್ತದೆ ಎನ್ನುತ್ತಾರೆ ಇವರು. ಮಗ ವಿಷ್ಣು ಶಂಕರ್ ಜೈನ್ ಅಯೋಧ್ಯೆ ವಿವಾದವನ್ನು ಪ್ರತಿಪಾದಿಸುವ ಮೂಲಕವೇ 2016 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ನೋಂದಣಿಯಾದ ಆಸ್ತಿ ಎಷ್ಟು ದಿನದ ಒಳಗೆ ನಿಮ್ಮ ಹೆಸರಿಗೆ ವರ್ಗಾವಣೆ ಆಗುತ್ತೆ.? ಸೈಟ್, ಮನೆ, ಜಮೀನು ಖರೀದಿ ಮಾಡುವವರು ತಪ್ಪದೆ ತಿಳಿದುಕೊಳ್ಳಿ.!
ಇವರೊಂದಿಗೆ ರಾಮ ಮಂದಿರ ಪ್ರಕರಣಕ್ಕೆ ಅನೇಕ ಯೋಧರು ಕೊಡುಗೆ ನೀಡಿದ್ದಾರೆ. ಮಾಜಿ ಅಟಾರ್ನಿ ಜನರಲ್ ಕೆ ಪರಾಶರನ್ ಅವರು ಸುಪ್ರೀಂ ಕೋರ್ಟ್ನಲ್ಲಿ ಅಯೋಧ್ಯೆ ಪ್ರಕರಣದ ಬಗ್ಗೆ ಚರ್ಚೆ ನಡೆಸುತ್ತಿರುವಾಗ ಪೌರಾಣಿಕ ಸಂಗತಿಗಳ ಆಧಾರದ ಮೇಲೆ ದೇವಾಲಯವನ್ನು ನಿರ್ಮಿಸಲು ವಾದ ಮಂಡಿಸಿದ್ದರು.
ಸಿಎಸ್ ವೈದ್ಯನಾಥನ್ ಅವರು ASI ವರದಿಯ ಪ್ರಸ್ತುತತೆ ಮತ್ತು ಸಿಂಧುತ್ವವನ್ನು ಆಧರಿಸಿ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣವನ್ನು ಬಲಪಡಿಸಿದರು. ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಅವರು ಸುಪ್ರೀಂ ಕೋರ್ಟ್ನಲ್ಲಿ ಪುರಾಣ ಪ್ರಕರಣವನ್ನು ಬಲವಾಗಿ ವಾದಿಸಿದ್ದರು. ಹಿಂದೂ ಪರವಾಗಿ ಮಾಜಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ಗೋಪಾಲ್ ಸಿಂಗ್ ವಿಶಾರ್ದ್ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಪೂಜೆ ಮಾಡುವ ಹಕ್ಕನ್ನು ಕೋರಿ ವಾದ ಮಂಡಿಸಿದರು.
ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಸಾಕು 44,995 ಬಡ್ಡಿ ಸಿಗುತ್ತೆ.! ಪೋಸ್ಟ್ ಆಫೀಸ್ ನಾ ವಿಶೇಷ ಯೋಜನೆ ಇದು.!
ಹೀಗೆ ಅನೇಕ ಜನರ ಶ್ರಮವಾಗಿ ಇಂದು ನಮ್ಮೆಲ್ಲರ ಜೀವಿತಾವಧಿಯಲ್ಲಿ ನಮ್ಮೆಲ್ಲರ ತಂದೆಯ ಪುರುಷೋತ್ತಮ ನ ಮೂಲ ಸ್ಥಾನದಲ್ಲಿ ಆತನಿಗೆ ಮಂದಿರ ನಿರ್ಮಾಣವಾಗುತ್ತಿದೆ. ಇದು ಇಡೀ ಭರತ ಭೂಮಿ ಜನಕ್ಕೆ ಬಹಳ ಭಾವಪೂರ್ಣತ್ಮಕವಾದ ಕ್ಷಣವಾಗಿದೆ. ಇದಕ್ಕೆ ಶ್ರಮಿಸಿರುವ ಪ್ರತಿಯೊಬ್ಬರಿಗೂ ಭಗವಂತ ಆಯುಷ್ಯ ಆರೋಗ್ಯ ಕರುಣಿಸಲಿ ಎಂದು ಕೇಳಿಕೊಳ್ಳೋಣ.