ಒಂದು ಬೋರ್ವೆಲ್ ನಿಂದ ಇನ್ನೊಂದು ಬೋರ್ವೆಲ್ ಗೆ ಲಿಂಕ್ ಇರುತ್ತದೆ ಎನ್ನುವ ಅನುಮಾನ ಅನೇಕರಿಗೆ ಇರುತ್ತದೆ. ಅದರಲ್ಲೂ ರೈತರಿಗೆ ತಮ್ಮ ಜಮೀನಿನ ಪಕ್ಕದಲ್ಲಿರುವ ರೈತ ಬೋರ್ವೆಲ್ ಕೊರಿಸಿದಾಗ ಈ ಬಗ್ಗೆ ಬಹಳ ಆತಂಕ ಆಗುತ್ತದೆ. ಮನೆ ಬಳಕೆಗೆ ಬಳಸುವ ನೀರಿನ ಸಲುವಾಗಿ ಮನೆ ಬಳಿಯಲ್ಲಿ ಬೋರ್ ಕೊರೆಸಿದಾಗ ಪಕ್ಕದ ಮನೆಯವರು ಅದೇ ರೀತಿ ಬೋರ್ವೆಲ್ ಕಾಂಪೌಂಡ್ ಪಕ್ಕದಲ್ಲಿ ಬೋರ್ವೆಲ್ ಹಾಕಿಸಿದರೆ ಇಂತಹ ಡವ ಡವ ಶುರುವಾಗುತ್ತದೆ.
ಹಾಗಾದರೆ ಇದು ನಿಜವೇ? ಒಂದು ಬೋರ್ವೆಲ್ ಪಾಯಿಂಟ್ ಪಕ್ಕದಲ್ಲಿ ಮತ್ತೊಂದು ಪಾಯಿಂಟ್ ಕೊರೆಸಿದಾಗ ಮೊದಲ ಬೋರ್ ಗೆ ನೀರಿನ ಹರಿವು ನಿಂತು ಹೋಗುತ್ತದೆಯೇ ಅಥವಾ ಇದಕ್ಕಿಂತ ಆಳದಲ್ಲಿ ಕೊರೆಸಿದಾಗ ನೀರು ಕಡಿಮೆ ಆಗುತ್ತದೆಯೇ ಎನ್ನುವ ಅನುಮಾನ ಇದ್ದವರಿಗೆ ಉತ್ತರ ಹೀಗಿದೆ.
ಈ ಸುದ್ದಿ ಓದಿ:- ಒಂದು ಬಾರಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 1 ಲಕ್ಷ ಪಿಂಚಣಿ ಪಡೆಯಬಹುದು LIC ಜೀವನ್ ಉತ್ಸವ್ ಪ್ಲಾನ್
ನಮ್ಮ ರಾಜ್ಯದ ಉದಾಹರಣೆಯೊಂದಿಗೆ ಇದನ್ನು ವಿವರಿಸುವುದಾದರೆ ನಮ್ಮ ರಾಜ್ಯದಲ್ಲಿ ಎಲ್ಲಾ ಭೂ ಪ್ರದೇಶಗಳು ಕೂಡ ಒಂದೇ ತೆರನಾಗಿ ಇಲ್ಲ, ಇಲ್ಲಿ ಅಗ್ನಿಶಿಲೆಗಳಿಂದ ಆಗಿರುವ ಭೂ ಪ್ರದೇಶಗಳು ಕೆಲವು ಭಾಗಗಳಲ್ಲಿ ಇದೆ ಅದೇ ರೀತಿಯಾಗಿ ಜಲಜ ಶಿಲೆಗಳಿಂದ ಅಥವಾ ರೂಪಾಂತರ ಶಿಲೆಗಳಿಂದ ಮಾರ್ಪಾಡಾದ ಭೂ ಪ್ರದೇಶಗಳು ಕೂಡ ಇವೆ.
ಈ ರೀತಿಯಾಗಿ ಆಯಾ ಭೂ ಪ್ರದೇಶದ ಗುಣಲಕ್ಷಣದ ಆಧಾರದ ಮೇಲೆ ಇದು ನಿರ್ಧಾರ ಆಗುತ್ತದೆ. ಇದನ್ನು ಇನ್ನು ಕ್ಲಿಯರ್ ಆಗಿ ವಿವರಿಸುವುದಾದರೆ ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಬಾದಾಮಿ ಐಹೊಳೆ ಈ ಭಾಗಗಳಲ್ಲಿ ಮಾತ್ರ ಜಲಜ ಶಿಲೆಗಳಿಂದ ಮಾರ್ಪಾಡಾದಂತಹ ಭೂ ಪ್ರದೇಶಗಳು ಇವೆ. ಇಂತಹ ಪ್ರದೇಶಗಳಲ್ಲಿ ಮಾತ್ರ ಈ ರೀತಿಯಾಗಿ ಒಂದು ಬೋರ್ ನಿಂದ ಮತ್ತೊಂದು ಬೋರ್ವೆಲ್ ಗೆ ಲಿಂಕ್ ಆಗುವ ಸಾಧ್ಯತೆಗಳು ಇರುತ್ತವೆ ಆದರೆ ಅದು ಕೂಡ ಕೇವಲ 5% ಮಾತ್ರ ಹಾಗಾಗಿ ಸಮಾಧಾನ ಇಟ್ಟುಕೊಳ್ಳಬಹುದು.
ಈ ಸುದ್ದಿ ಓದಿ:- ಕಡಿಮೆ ಹಸುಗಳಿಂದ ದಿನಕ್ಕೆ 300 ಲೀಟರ್ ಹಾಲು, ಕನಿಷ್ಠ ಒಂದು ಲಕ್ಷ ಆದಾಯ ಗ್ಯಾರಂಟಿ.!
ಇದನ್ನು ಹೊರತು ಪಡಿಸಿ ಬೇರೆ ಭಾಗಗಳಲ್ಲಿ ಈ ರೀತಿಯಾಗಿ ಒಂದು ಬೋರ್ ಪಾಯಿಂಟ್ ಗೆ ಮತ್ತೊಂದು ಲಿಂಕ್ ಆಗಿರುತ್ತದೆ ಎನ್ನುವ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.ಯಾಕೆಂದರೆ ಅಂತಹ ಸಾಧ್ಯತೆಗಳು ಬಹಳ ರೇರ್ 100 ಕೇಸ್ ಗಳಲ್ಲಿ ಒಂದು ಕೇಸ್ ಈ ರೀತಿ ಆಗುವ ಸಾಧ್ಯತೆ ಇರುತ್ತದೆ ಅಷ್ಟೇ.
ಆಯಾ ಪ್ರದೇಶಗಳಲ್ಲಿ ಹರಿದು ಹೋಗಿರುವ ನೀರಿನ ಸ್ತರಗಳು, ಸೆಲೆಗಳು ಇದನ್ನು ನಿರ್ಧರಿಸುತ್ತವೆ ಹೊರತು ಈ ರೀತಿಯಾಗಿ ಒಂದರಿಂದ ಮತ್ತೊಂದನ್ನು ಬ್ಲಾಕ್ ಮಾಡಲು ಸಾಧ್ಯವಿಲ್ಲ. ಮೊದ ಮೊದಲು ಕೊಳವೆಬಾವಿ ದೇಶದಲ್ಲಿ ಹೆಚ್ಚು ಪ್ರಚಲಿತವಾದ ಸಂದರ್ಭದಲ್ಲಿ 800 ಮೀಟರ್ ಅಡಿಯಲ್ಲಿ ಒಂದು ಕೊಳವೆಬಾವಿ ಪಕ್ಕ ಮತ್ತೊಂದು ಕೊಳವೆ ಬಾವಿ ಹಾಕುವಂತಿಲ್ಲ ಎನ್ನುವ ನಿಯಮ ಇತ್ತು ಆದರೆ ಎಲ್ಲರೂ ಈ ನಿಯಮಗಳನ್ನು ಮುರಿದಿದ್ದಾರೆ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್ ಇನ್ಮುಂದೆ ಪ್ರತಿ ತಿಂಗಳು ಸಿಲಿಂಡರ್ ಮೇಲೆ 300 ರೂಪಾಯಿ ಉಚಿತವಾಗಿ ಪಡೆಯಬಹುದು
ಹಾಗಾಗಿ ನಮ್ಮ ಬೋರ್ವೆಲ್ ಗೆ ನೀರು ಬಂದ ತಕ್ಷಣ ಪಕ್ಕದ ಬೋರ್ವೆಲ್ ನವರು ಅವರಿಗೂ ಬರುತ್ತದೆ ಎಂದು ಕೊರೆಸುತ್ತಾರೆ ಎನ್ನುವ ಭಯಾತ್ಮಕ ವಾತಾವರಣದಲ್ಲಿ ರೈತರು ಇದ್ದಾಗ ಆ ರೀತಿ ತಲೆ ಕೆಡಿಸಿಕೊಳ್ಳಬೇಡಿ. ಮತ್ತೊಂದು ವಿಚಾರವೇನೆಂದರೆ ,ನಾವು ನೀರನ್ನು ಪಡೆದುಕೊಳ್ಳುವ ಎರಡರಿಂದ ಮೂರರಷ್ಟು ಪರ್ಸೆಂಟ್ ನೀರನ್ನು ಮರುಪೂರ್ಣ ಮಾಡುವವರೆಗೂ ಮತ್ತು ಅಂತರ್ಜಲ ಮಟ್ಟ ಅಧಿಕ ಇದ್ದಾಗ ಯಾವುದೇ ರೀತಿಯ ಸಮಸ್ಯೆಗಳು ಆಗುವುದಿಲ್ಲ.
ಅಂತರ್ಜಲ ಮಟ್ಟ ಕುಸಿದಾಗ ಮಾತ್ರ 1% ಇಂತಹ ಸಮಸ್ಯೆಗಳು ಅಗ್ನಿಶಿಲೆ ಹಾಗೂ ರೂಪಾಂತರ ಶಿಲೆಯಿಂದ ಉಂಟಾಗಿರುವ ಭೂ ಪ್ರದೇಶಗಳಲ್ಲಿ ಇರುತ್ತವೆ. ಈ ವಿಚಾರದ ಬಗ್ಗೆ ಖ್ಯಾತ ಅಂತರ್ಜಲ ಹಾಗೂ ಮಳೆ ನೀರು ಕೊಯ್ಲು ತಜ್ಞರು ಏನು ಹೇಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.