ಸಾಮಾನ್ಯವಾಗಿ ಸೈಟ್ ಅಥವಾ ಮನೆ ಖರೀದಿಸುವಾಗ ಅದರ ಬೆಲೆ ಬಗ್ಗೆ ಮತ್ತು ಮುಂದೆ ಅದಕ್ಕೆ ಹೆಚ್ಚುವ ಬೆಲೆ ಬಗ್ಗೆ ಯೋಚನೆ ಮಾಡುತ್ತೇವೆ ಹೊರತು ಈ ಸೈಟ್ ಅಥವಾ ಮನೆ ಖರೀದಿಸಿದ ಮೇಲೆ ಇದಕ್ಕೆ ಸಂಬಂಧಿಸಿದ ಹಾಗೆ ನಮಗೆ ಏನಾದರೂ ಸಮಸ್ಯೆ ಆಗುತ್ತದೆ ಎನ್ನುವ ವಿಚಾರದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ.
ಈ ವಿಚಾರದಲ್ಲಿ ಎಡವಿದರೆ ದಾಖಲೆಗಳು ಸರಿ ಇಲ್ಲದೆ ಇದ್ದರೆ ಕಷ್ಟಪಟ್ಟು ಸಂಪಾದಿಸಿದ ಹಣ ಕೊಟ್ಟು ತೆಗೆದುಕೊಂಡು ಪ್ರಾಪರ್ಟಿ ಕೈತಪ್ಪಿ ಹೋಗಬಹುದು. ಮುಂದೆ ಯಾವ ರೀತಿ ಕಾನೂನು ತೊಡಕುಗಳು ಎದುರಾಗಬಾರದು ಎಂದರೆ ನಾವು ಹೇಳುವ ಈ 12 ದಾಖಲೆಗಳನ್ನು ತಪ್ಪದೇ ಖರೀದಿಗೂ ಮುನ್ನ ಪರಿಶೀಲಿಸಿ ನೋಡಿ.
ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿಗೆ ಸಿಗಲಿದೆ 5 ಲಕ್ಷ.!
1. Mother deed:- ನೀವು ಖರೀದಿ ಮಾಡುತ್ತಿರುವ ಸೈಟ್ ಅಥವಾ ಮನೆ ಮೊದಲಿಗೆ ಯಾರ ಹೆಸರಲ್ಲಿ ಇತ್ತು, ಇದರ ಮೂಲ ವಾರಸುದಾರರು ಯಾವುದು ಎನ್ನುವುದು ಮದರ್ ಡೀಡ್ ನಿಂದ ತಿಳಿಯುತ್ತದೆ. ಮತ್ತೆ ಯಾರಿಂದ ಯಾರಿದು ವರ್ಗಾವಣೆಯಾಗುತ್ತಾ ಬಂತು ಇದನ್ನು chain of deed ಎನ್ನುತ್ತಾರೆ ತಪ್ಪದೇ ಈ ದಾಖಲೆಗಳನ್ನು ಕೇಳಿ ಪಡೆಯಿರಿ ಮತ್ತು ಪರಿಶೀಲಿಸಿ.
2. Mutation Register:- ಡೆವಲಪರ್ ಯಾವ ಜಾಗದಲ್ಲಿ ಲೇಔಟ್ ಮಾಡುತ್ತಿದ್ದಾರೆ ಆ ಜಾಗದ ಪ್ರಸ್ತುತ ಮಾಲೀಕರು ಯಾರು? ಹಕ್ಕು ಬದಲಾವಣೆ ಮಾಡಿದವರು ಯಾರು ಮತ್ತು ಹಕ್ಕು ಬದಲಾವಣೆ ಪಡೆದವರು ಯಾರು? ಇದೆಲ್ಲಾ ಮಾಹಿತಿಯು Mutation Register ನಲ್ಲಿ ಇರುತ್ತದೆ.
3. RTC – Records of Rights:- ತಪ್ಪದೇ ಈ ದಾಖಲೆಯನ್ನು ಕೂಡ ನೋಡಬೇಕು ಇದರಲ್ಲಿ ಸ್ವಾಧೀನದಾರರು ಯಾರು? ಯಾರು ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ಅವರ ಹೆಸರಿನಲ್ಲಿಗೆ ಇದೆಯೇ ಅಥವಾ ಬೇರೆ ಹೆಸರಿನಲ್ಲಿ ಇರುವುದನ್ನು ಇವರು ವ್ಯವಸಾಯ ಮಾಡುತ್ತಿದ್ದಾರೆಯೇ ಎನ್ನುವ ಸ್ಪಷ್ಟ ಮಾಹಿತಿ ಸಿಗುತ್ತದೆ.
ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಬೇಸರದ ಸುದ್ದಿ.! ಹೋಂ ಲೋನ್, ಗೋಲ್ಡ್ ಲೋನ್, ಎಜುಕೇಶನ್ ಲೋನ್, ಪರ್ಸನಲ್ ಲೋನ್, EMI ಇನ್ನಿತರ ಸಾಲ ಮಾಡಿದವರು ನೋಡಿ.!
4. DC Conversion Order:- ಒಂದು ವೇಳೆ ಈಗ ಲೇಔಟ್ ಆಗಿರುವ ಭೂಮಿಗೂ ಹಿಂದೆ ವ್ಯವಸಾಯ ಭೂಮಿಯಾಗಿದ್ದರೆ ವ್ಯವಸಾಯೇತರವಾಗಿ ಅದನ್ನು ನಿವೇಶನ ಉದ್ದೇಶಕ್ಕಾಗಿ ಬಳಸಬಹುದು ಎಂದು Deputy Commisioner ಅನುಮತಿ ನೀಡಿರುವ ಆರ್ಡರ್ ಕೂಡ ನೋಡಿ ನೀವು ದೃಢಪಡಿಸಿಕೊಳ್ಳಬೇಕು. ಒಂದು ವೇಳೆ ಅನುಮತಿ ಇಲ್ಲದೆ ಭೂಮಿ ಲೇಔಟ್ ಮಾಡಿದರೆ ಅದು illegal ಮತ್ತು Unauthorised ಎನಿಸಿಕೊಳ್ಳುತ್ತದೆ, ಮುಂದೆ ಅದನ್ನು ಕೊಂಡುಕೊಳ್ಳುವವರಿಗೂ ಸಮಸ್ಯೆಯಾಗಬಹುದು.
5. Local plan approval from Local Planning Aurhority:- ಯಾವುದೇ ಲೇಔಟ್ ಮಾಡಬೇಕಿದ್ದರೆ ಸ್ಥಳೀಯ ಪ್ರಾಧಿಕಾರಗಳಿಂದ ಪರ್ಮಿಷನ್ ಪಡೆದುಕೊಂಡಿರಬೇಕು ಇದಕ್ಕೆ ಸಂಬಂಧಿಸಿದ ಈ ದಾಖಲೆಯನ್ನು ನೀವು ನೋಡಬೇಕು. ಲೇಔಟ್ ನಲ್ಲಿ ರಸ್ತೆ, ಉದ್ಯಾನವನ ಇವುಗಳಿಗೆ ಸಂಬಂಧಿಸಿದ ಯೋಜನೆ ವಿವರ ಇದರಲ್ಲಿ ಇರುತ್ತದೆ. ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯುತ್ತಿದ್ದರೆ ಇದು ಕೂಡ ಅಕ್ರಮ ಎನಿಸಿಕೊಳ್ಳುತ್ತದೆ
6. NOC from special land acquisition office:- KEB, KPCTL, BESCOM, KIADB NOC ಸಿಕ್ಕಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು ಮತ್ತು ಸರ್ಕಾರದ ವಿವಿಧ ಕಚೇರಿಗಳಿಂದ ಈ NOC ಪಡೆದುಕೊಳ್ಳಬೇಕಾಗುತ್ತದೆ. ತಾವು ಲೇಔಟ್ ಮಾಡುತ್ತಿರುವ ಈ ಭೂಮಿಯು ಸರ್ಕಾರದ ಯಾವುದೇ ಯೋಜನೆಗೂ ಮಂಜೂರಾಗಿಲ್ಲ ಎನ್ನುವುದನ್ನು ಇದು ದೃಢಪಡಿಸುತ್ತದೆ.
ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ.!
7. Joint Venture Agriment:- ಈ ರೀತಿ ಏನಾದರೂ ಅಗ್ರಿಮೆಂಟ್ ಗಳು ಆಗಿದ್ದರೆ ಅವುಗಳನ್ನು ಪರಿಶೀಲಿಸಿ ಯಾಕೆಂದರೆ ಈಗ ರೆಡಿ ಆಗುತ್ತಿರುವ ಲೇಔಟ್ ಗಳು ಡೆವೆಲಪರ್ ಹೆಸರಿನಲ್ಲಿ ಇದೆಯೋ ಅಥವಾ ಅಗ್ರಿಮೆಂಟ್ ಮಾಡಿಕೊಂಡಿರುವ ರೈತರ ಹೆಸರಿನಲ್ಲಿ ಇದಿಯೋ ಎನ್ನುವ ನಿಖರ ಮಾಹಿತಿಯು ತಿಳಿಯುತ್ತದೆ
8. Park release order:- ಲೇಔಟ್ ಗಳಲ್ಲಿ ಸೈಟ್ ಖರೀದಿಸುತ್ತಿರುವವರು ತಪ್ಪದೆ ಇವುಗಳನ್ನು ಪರಿಶೀಲನೆ ಮಾಡಬೇಕು
9. Relinquishment deed:- ಇದು ಕೂಡ ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಪಡೆದುಕೊಂಡಿರಬೇಕು ಈ ದಾಖಲೆ ಪರಿಶೀಲಿಸಬೇಕು
10. Site Release deed:- ಆ ಲೇಔಟ್ ನಲ್ಲಿ ಎಷ್ಟು ಸೈಟ್ ಗಳು ಆಗಿವೆ, ಯಾವುದು ಯಾವ ಡೈಮೆನ್ಷನ್ ಲಿ ಇದೆ ಎನ್ನುವ ನಿಖರ ಮಾಹಿತಿ ಇದರಲ್ಲಿರುತ್ತದೆ. ಇದು ಕೂಡ ಯೋಜನಾಧಿಕಾರದಿಂದ ಪಡೆದುಕೊಂಡಿರುವ ದಾಖಲೆಯಾಗಿರುತ್ತದೆ.
ಈ ವಾಹನಗಳ ಫಾಸ್ಟ್ ಟ್ಯಾಗ್ ಬಂದ್ ಆಗಲಿದೆ ಕೆಂದ್ರ ಸರ್ಕಾರದ ಆದೇಶ.!
11. ಖಾತಾ ಬದಲಾವಣೆ:- ಮಾರಾಟಗಾರರ ಹೆಸರಿನಲ್ಲಿ ಪ್ರತ್ಯೇಕವಾಗಿ ಖಾತೆ ಬದಲಾವಣೆ ಆಗಿದೆಯೇ ಎನ್ನುವುದನ್ನು ಪರಿಶೀಲಿಸಿ
12. Rera Approved Certificate:- Real estate regulatory Authority of Karnataka ಇವರಿಂದ ಅಪ್ರೂವಲ್ ಪಡೆದುಕೊಂಡಿರುವ ಸರ್ಟಿಫಿಕೇಟ್ ನೋಡಬೇಕು. ಈ ಮೇಲೆ ತಿಳಿಸಿದ ಎಲ್ಲಾ ನಿಯಮಗಳು ಕಾನೂನು ಬದ್ಧವಾಗಿ ಇದ್ದರೆ ಮಾತ್ರ ಈ approved ಸಿಗುವುದು.