ಇಂದು ಭಾರತದಲ್ಲಿ ಹೃ’ದ’ಯ’ಘಾ’ತ ಸಾ’ವ’ನ್ನು ತರುತ್ತಿರುವ ಗಂಭೀರ ಕಾಯಿಲೆಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ನಮ್ಮ ಕಣ್ಣಿದುರು ಸೆಲೆಬ್ರಿಟಿಗಳು ಹೃ’ದ’ಯ’ಘಾ’ತದಿಂದಲೇ ನಮ್ಮನ್ನು ಅಗಲಿ ಹೋಗಿದ್ದಾರೆ. ಕೆಲವರಿಗೆ ಅನೇಕ ದಿನಗಳಿಂದ ಹೃದಯಕ್ಕೆ ಸಮಸ್ಯೆ ಇರುವ ಕೆಲವು ಲಕ್ಷಣಗಳ ಮುನ್ಸೂಚನೆ ಸಿಕ್ಕಿದರೂ ಅದನ್ನು ಗುರುತಿಸಲಾಗದೆ ವಿಫಲರಾಗಿರುತ್ತಾರೆ.
ಇನ್ನು ಕೆಲವರಿಗೆ ಅಷ್ಟು ಸಮಯ ಇಲ್ಲದೆ ಮೊದಲ ಬಾರಿಗೆ ಎದೆ ಭಾಗದಲ್ಲಿ ನೋವು ಬಂದು ಎರಡನೇ ಅವಕಾಶ ಇಲ್ಲದಂತೆ ಕಣ್ಣು ಮುಚ್ಚಿದ್ದು ಇದೆ ಇಂತಹ ಪ್ರಕರಣಗಳು ನಮ್ಮ ಎದೆಯನ್ನು ಕೂಡ ನಡುಗಿಸುತ್ತವೆ.
ಈ ರೀತಿಯ ಹೃದಯ ಸಂಬಂಧಿತ ಕಾಯಿಲೆಗಳು ಯಾಕೆ ಕಾಣಿಸಿಕೊಳ್ಳುತ್ತವೆ ಇದಕ್ಕೆ ಕಾರಣವೇನು ಮತ್ತು ಪರಿಹಾರ ಹಾಗೂ ಹೃ’ದ’ಯ’ಘಾ’ತ ಆಗುವ ಮುಂಚೆ ಯಾವ ಲಕ್ಷಣಗಳ ಮೂಲಕ ಸಮಸ್ಯೆ ಇರುವುದು ತಿಳಿದು ಬರುತ್ತದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಸಾಮಾನ್ಯವಾಗಿ ಎದೆ ನೋವು ಬಂತೆಂದರೆ ಇದು ಹೃದಯದ ಸಮಸ್ಯೆ ಎಂದುಕೊಳ್ಳುತ್ತಾರೆ. ತಪಾಸಣೆಗೆ ಹೋಗಿ ಇಸಿಜಿ, ಎಕೋ ಎಲ್ಲವನ್ನು ಮಾಡಿಸುತ್ತಾರೆ ಆದರೆ ಸಮಾಧಾನವೇ ಇರುವುದಿಲ್ಲ . ಹೃದಯವು ದೇಹದ ಎಲ್ಲಾ ಅಂಗಾಂಗಗಳಿಗೂ ರಕ್ತವನ್ನು ಸರಬರಾಜು ಮಾಡುತ್ತದೆ ಎಂದು ಎಲ್ಲರಿಗೂ ಗೊತ್ತು.
ಅದೇ ರೀತಿ ಹೃದಯಕ್ಕೂ ಕೂಡ ರಕ್ತದ ಅವಶ್ಯಕತೆ ಇದೆ ಹೃದಯಕ್ಕೆ ರಕ್ತ ಪಂಪು ಮಾಡುವ ರಕ್ತನಾಳಗಳೆಲ್ಲಾ ಬ್ಲಾಕೆಜ್ ಉಂಟಾಗಿರುತ್ತದೆ, ಇದ್ದಕ್ಕಿದ್ದಂತೆ ಒಂದು ದಿನ ರಕ್ತ ಸರಬರಾಜು ಸಂಪೂರ್ಣವಾಗಿ ನಿಂತು ಹೋದಾಗ ಆ ಭಾಗದ ಜೀವಕೋಶಗಳು ಸತ್ತು ಹೋಗುತ್ತವೆ, ಆಗ ಕೆಲವೇ ನಿಮಿಷಗಳಲ್ಲಿ ವಿಪರೀತವಾದ ಎದೆ ನೋವು ಕಾಣಿಸಿಕೊಂಡು ಅವರು ಮ’ರ’ಣ ಹೊಂದುತ್ತಾರೆ.
ಆದರೆ ಎಲ್ಲಾ ಎದೆ ನೋವು ಕೂಡ ಇದನ್ನು ಹೇಳುವುದಿಲ್ಲ ಕೆಲವರಿಗೆ ಗ್ಯಾಸ್ಟ್ರೈಟಿಸ್ ಸಮಸ್ಯೆಯಿಂದ ಎದೆ ನೋವು ಬರುತ್ತದೆ. ಇಂತಹ ಸಮಸ್ಯೆ ಇದ್ದಾಗ ಗಂಟೆಗಳವರೆಗೆ ಅಥವಾ ದಿನಪೂರ್ತಿ ನೋವು ಇರುತ್ತದೆ ಮತ್ತು ಆಗಾಗ ಈ ರೀತಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ.
ಇದರ ಜೊತೆಗೆ ವಾಂತಿ ಬಂದ ರೀತಿ ಆಗುವುದು ತಲೆನೋವು ಬರುವುದು ಇಂತಹ ಲಕ್ಷಣಗಳು ಕೂಡ ಇರುತ್ತವೆ, ಆಗ ಮಾತ್ರೆ ತೆಗೆದುಕೊಂಡರೆ ಸರಿ ಹೋಗುತ್ತದೆ. ಆದರೆ ಪ್ರತಿ ಬಾರಿಯೂ ಹೀಗೆ ಆದರೆ ನಿರ್ಲಕ್ಷ ಮಾಡುವಂತೆ ಇಲ್ಲ.
ಹೃ’ದ’ಯಾ’ಘಾ’ತ ಕ್ಕೆ ಸಂಬಂಧಿಸಿದ ಎದೆ ನೋವು ಆಗಿದ್ದರೆ ಸಮಯಾವಕಾಶ ಕೊಡದೆ ಸಾ’ವು ಬರಬಹುದು. ಇದು ಎಷ್ಟು ಗಾಢವಾದ ನೋವಾಗಿರುತ್ತದೆ ಎಂದರೆ ಎದೆ ಮೇಲೆ ಒಂದು ದೊಡ್ಡ ಬಂಡೆ ಕಲ್ಲನ್ನು ಹಾಕಿದ ರೀತಿ ನೋವು ಕೊಡುತ್ತದೆ ಎಂದು ಅನುಭವಿಸಿದವರು ಹೇಳುತ್ತಾರೆ.
ಹಾಗಾಗಿ ಹೃದಯಕ್ಕೆ ಸಮಸ್ಯೆ ಇದೆ ಎನ್ನುವುದನ್ನು ಸೂಚಿಸುವ ಲಕ್ಷಣಗಳಿಂದ ತಿಳಿದುಕೊಂಡು ಎಚ್ಚೆತ್ತುಕೊಳ್ಳಬೇಕು. ಬಿಪಿ, ಶುಗರ್, ಕೊಲೆಸ್ಟ್ರಾಲ್ ಇವುಗಳು ಈ ರೀತಿ ರಕ್ತನಾಳಗಳಲ್ಲಿ ಬ್ಲಾಕ್ ಉಂಟಾಗಲು ಮುಖ್ಯ ಕಾರಣ. ಹಾಗಾಗಿ ಇವುಗಳನ್ನು ನಿಯಮಿತವಾದ ಡಯಟ್ ಹಾಗೂ ವ್ಯಾಯಾಮ ಮಾಡುವ ಮೂಲಕ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು ಮತ್ತು ಅತಿ ಹೆಚ್ಚು ಟೆನ್ಶನ್ ಮಾಡಿಕೊಳ್ಳದೆ ಆರಾಮಾಗಿ ಖುಷಿ ಖುಷಿಯಾಗಿ ಇರಬೇಕು.
ಮೆಟ್ಟಿಲು ಹತ್ತುವಾಗ ಇಳಿಯುವಾಗ ಅಥವಾ ಸ್ವಲ್ಪ ದೂರ ನಡೆದರೂ ಅಥವಾ ಎರಡು ಮೂರು ಬಾರಿ ಉಸಿರಾಡಿದ ಮೇಲೆ ಮತ್ತು ದೀರ್ಘವಾಗಿ ಉಸಿರಾಡಬೇಕು ಎನಿಸಿದರೆ ಇಂತಹ ಲಕ್ಷಣಗಳು ಹೃದಯಕ್ಕೆ ಸಮಸ್ಯೆ ಇದೆ ಎನ್ನುವುದನ್ನು ಸೂಚಿಸುತ್ತದೆ.
ಪ್ರತಿನಿತ್ಯವೂ ತಪ್ಪದೇ ಕನಿಷ್ಠ 30 ನಿಮಿಷಗಳ ವಾಕಿಂಗ್ ಮಾಡುವುದು ಹೃದಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳಲ್ಲಿ ಊದುಕೊಳ್ಳುವಿಕೆ, ಉಗುರುಗಳಲ್ಲಿ ನೀಲಿ ಕಟ್ಟುವಿಕೆ, ಉಗುರುಗಳ ಶೇಪ್ ಬದಲಾಗುವುದು, ಎಡ ಭಾಗದಲ್ಲಿ ಕುತ್ತಿಗೆ ಎಡಭಾಗದ ತೋಳು ಕೈ ನೋವು ಬರುವುದು ಇವುಗಳು ಕೂಡ ಹೃದಯಕ್ಕೆ ಸಮಸ್ಯೆ ಇದೆ ಎನ್ನುವುದನ್ನು ಸೂಚಿಸುತ್ತದೆ.
ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಆರೋಗ್ಯವಾಗಿಯೇ ಇದ್ದರೂ ಕೂಡ 40 ವರ್ಷಗಳು ತುಂಬಿದ ಮೇಲೆ ವರ್ಷಕ್ಕೆ ಒಮ್ಮೆಯಾದರೂ ತಪಾಸಣೆಗೆ ಒಳಗಾಗಲೇಬೇಕು. ಈ ವಿಚಾರದ ಕುರಿತಾಗಿ ಇನ್ನಷ್ಟು ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.