ಸಾಮಾನ್ಯವಾಗಿ ರೈತರು ಹಳ್ಳಿಗಳಲ್ಲಿ ತಮ್ಮ ಜಮೀನು ಜಂಟಿ ಖಾತೆ ಇದೆ ಎಂದು ಮಾತನಾಡುವುದನ್ನು ನೀವು ಕೇಳಿರಬಹುದು. ಈ ರೀತಿ ಜಂಟಿ ಖಾತೆ ಎಂದರೆ ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ರೈತರ ಹೆಸರುಗಳು ಒಂದೇ ಪಹಣಿಯಲ್ಲಿ (RTC) ಕುಳಿತುಕೊಂಡಿರುತ್ತದೆ. ಈ ರೀತಿ ಒಂದೇ ಸರ್ವೆ ನಂಬರ್ ನಲ್ಲಿ ಬೇರೆ ಬೇರೆ ಹೆಸರಿನಲ್ಲಿ ಜಮೀನುಗಳು ಉಳಿಯುವುದು ಅನೇಕ ತೊಡಕುಗಳನ್ನು ಸೃಷ್ಟಿಸುತ್ತದೆ.
ಇದನ್ನು ಪರಸ್ಪರ ಅನುಮತಿಯಿಂದ ಪ್ರತ್ಯೇಕ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದಿಂದ ರೈತರಿಗೆ ಜನರಿಗೆ ಸಂಬಂಧಪಟ್ಟ ಹಾಗೆ ಸಿಗುವ ಯಾವುದೇ ಸೌಲಭ್ಯಗಳು ಕೂಡ ಸಿಗುವುದಿಲ್ಲ. ರೈತರಿಗೆ ಬೆಳೆ ಪರಿಹಾರ ಹಣ, ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆಯಬಹುದಾದ ಬಡ್ಡಿರಹಿತ ಸಾಲ ಸೌಲಭ್ಯ ಇವುಗಳಿಂದ ಈ ರೀತಿ ಜಂಟಿ ಖಾತೆ ಹೊಂದಿರುವ ರೈತರು ವಂಚಿತರಾಗುತ್ತಾರೆ.
ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಡೆಪೋಸಿಟ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ ಗೊತ್ತಾ.?
ಜಮೀನಿನ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡುವಾಗಲೂ ಕೂಡ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ರೀತಿ ಜಂಟಿ ಖಾತೆ ಎಇದ್ದರೆ ಜಮೀನಿನ ಪರಭಾರೆ ಮಾಡುವುದು ಕಷ್ಟ, ದಾನ ಕ್ರಯ, ವಿಭಾಗ ಮಾಡುವುದು ಮಾತ್ರವಲ್ಲದೆ ಅಡಮಾನಕ್ಕೂ ಕೂಡ ತುಂಬಾ ಸಮಸ್ಯೆಗಳು ಆಗುತ್ತದೆ.
ಹಾಗಾಗಿ ಪ್ರತಿಯೊಬ್ಬ ರೈತನು ಇಂತಹ ಸಮಸ್ಯೆಗಳು ಇದ್ದಾಗ ಅದರ ಪರಿಹಾರಕ್ಕೆ ಇರುವ ಮಾರ್ಗಗಳನ್ನು ತಿಳಿದುಕೊಂಡು ಆದಷ್ಟು ಬೇಗ ತಮ್ಮ ತಮ್ಮ ಹೆಸರಿಗೆ ಖಾತೆಗಳನ್ನು ಮಾಡಿಸಿಕೊಳ್ಳುವುದು ಕ್ಷೇಮ. ಇದಕ್ಕಾಗಿ ಈ ಅಂಕಣದಲ್ಲಿ ರೈತರಿಗೆ ಅನುಕೂಲ ಆಗಲಿ ಎಂದು ಯಾವ ರೀತಿ ಜಂಟಿ ಖಾತೆ ಇರುವುದನ್ನು ಪ್ರತ್ಯೇಕಗೊಳಿಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಈ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ತಿಳಿಯಬೇಕು ಹಾಗಾಗಿ ಈ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆಗೆ ಶೇರ್ ಮಾಡಿ.
ಸಾಲ ಕೊಟ್ಟವರು ಹಾಗೂ ಸಾಲ ಪಡೆದವರು ಈ ವಿಷಯವನ್ನು ತಪ್ಪದೆ ತಿಳಿದುಕೊಂಡಿರಿ.!
ಜಂಟಿ ಖಾತೆಯನ್ನು ಪ್ರತ್ಯೇಕಗೊಳಿಸಲು ಕೆಲವೊಂದು ದಾಖಲೆಗಳು ಬೇಕು:-
* 11E ಸ್ಕೆಚ್
* ಆಧಾರ್ ಕಾರ್ಡ್
* ಗ್ರಾಮಸ್ಥರಿಂದ ಇಬ್ಬರು ಸಾಕ್ಷಿಗಳ ಸಹಿ
* ವಂಶವೃಕ್ಷ
* ಬಹು ಮಾಲೀಕತ್ವ ಇರುವುದರಿಂದ ಅದರಲ್ಲಿರುವ ಎಲ್ಲಾ ಸದಸ್ಯರ ಒಪ್ಪಿಗೆ ಪತ್ರವನ್ನು ಕೂಡ ನೀಡಬೇಕು.
* ಸಂಬಂಧಪಟ್ಟ ಜಮೀನಿನ ಪಹಣಿ
* ಫಾರಂ 10
ಜಂಟಿ ಮಾಲಿಕತ್ವದಿಂದ ಪ್ರತ್ಯೇಕ ಖಾತೆ ಮಾಡಿಸುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಗೊತ್ತಾ?
* ಜಂಟಿ ಖಾತೆಯಿಂದ ಪ್ರತ್ಯೇಕ ಖಾತೆ ಮಾಡಿಕೊಳ್ಳಲು ಎಲ್ಲ ರೈತರು ಒಪ್ಪಿದ ಮೇಲೆ ಮೊದಲು ತಾತ್ಕಾಲ್ ಪೋಡಿ ಗೆ ರೈತನೊಬ್ಬ ಅರ್ಜಿ ಸಲ್ಲಿಸಬೇಕು
* ಭೂ ಮಾಪನ ಇಲಾಖೆ ಅಧಿಕಾರಿಗಳು ಸದರಿ ಜಮೀನಿನ ಅಳತೆ ಮಾಡುತ್ತಾರೆ.
* ಇದಾದ 20 ದಿನಗಳ ನಂತರ 11E ಸ್ಕೆಚ್ ಸಿಗುತ್ತದೆ
* ಈ ರೆವೆನ್ಯೂ ಸ್ಕೆಚ್ ಸಿಕ್ಕ ನಂತರ ಅಗತ್ಯ ದಾಖಲೆಗಳ ಜೊತೆ ವಿಭಾಗ ಮಾಡಿಕೊಂಡು ನೋಂದಣಿ ಮಾಡಿಸಿದ ನಂತರ ಬದು ಭೂಮಿ ಕೇಂದ್ರಕ್ಕೆ ತಲುಪಿದ ಮೇಲೆ ಈ ಜಂಟಿ ಖಾತೆಗಳು ಪ್ರತ್ಯೇಕವಾಗಿ ಆಯಾ ರೈತರ ಹೆಸರಿಗೆ ಆಗುತ್ತದೆ.
* ಈ ಸಂದರ್ಭದಲ್ಲಿ ರೈತರ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ರೈತರ ಇತರ ದಾಖಲೆಗಳಲ್ಲಿ ಹೆಸರುಗಳ ಹೊಂದಾಣಿಕೆ ಇವೆಲ್ಲವೂ ಸರಿಯಾಗಿ ಇದ್ದರೆ ಆದಷ್ಟು ಬೇಗ ಈ ಪ್ರಕ್ರಿಯೆ ನಡೆಯುತ್ತದೆ.
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!
* ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಗೊಂದಲಗಳಿದ್ದರೂ ಅಥವಾ ಏನೇ ಸಲಹೆ ಬೇಕಿದ್ದರೂ ಹತ್ತಿರದಲ್ಲಿರುವ ಗ್ರಾಮ ಪಂಚಾಯಿತಿಗೆ ಅಥವಾ ನಾಡಕಚೇರಿಗೆ ಅಥವಾ ತಹಶೀಲ್ದಾರ್ ಕಚೇರಿಗೆ ಭೇಟಿ ಕೊಟ್ಟು ಸಂಬಂಧಪಟ್ಟ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಬಹುದು.