ಕೃಷಿ ಕ್ಷೇತ್ರಕ್ಕೂ ಕೂಡ ಆಧುನಿಕ ಸ್ಪರ್ಶ ಸಿಗುತ್ತಿದೆ. ರೈತ ಈ ಹಿಂದೆ ತನ್ನ ಆಹಾರದ ಅವಲಂಬನೆಗಾಗಿ ಕೃಷಿ ಮಾಡುತ್ತಿದ್ದ ಈಗ ನಿಧಾನವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಶುರು ಮಾಡಿದ್ದಾನೆ. ಇಂತಹ ವಾಣಿಜ್ಯ ಬೆಳೆಗಳಲ್ಲಿ ಒಂದಾದ ರಬ್ಬರ್ ಬೆಳೆಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ ಕರ್ನಾಟಕ ಕೇರಳ ಹಾಗೂ ತಮಿಳುನಾಡಿನ ಕೆಲ ಪ್ರದೇಶಗಳ ಮಣ್ಣು ಮತ್ತು ವಾತಾವರಣ ರಬ್ಬರ್ ಬೆಳೆ ಬೆಳೆಯುವುದಕ್ಕೆ ಸೂಕ್ತವಾಗಿದೆ. ರಬ್ಬರ್ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುತ್ತದೆ.
ಈ ರಬ್ಬರ್ ನ್ನು ವಾಹನಗಳ ಟ್ಯೂಬ್, ಟೈಯರ್, ರೆಫ್ರಿಜರೇಟರ್, ಯಂತ್ರಗಳ ಬಿಡಿ ಭಾಗಗಳ ತಯಾರಿಕೆ, ಬಾಲ್ ಇನ್ನೂ ಮುಂತಾದ ಅನೇಕ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ ಹಾಗಾಗಿ ಪ್ರಪಂಚದಾದ್ಯಂತ ಇಷ್ಟು ಬೇಡಿಕೆ ಇರುವ ರಬ್ಬರ್ ಬೆಳೆಯನ್ನು ಬೆಳೆಯುವುದು ಒಂದು ಲಾಭದಾಯಕ ಉದ್ಯಮಿಯು ಕೂಡ ಹೌದು.
ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಡೆಪೋಸಿಟ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ ಗೊತ್ತಾ.?
ಈ ಅಂಕಣದಲ್ಲಿ ಯಾವ ರೀತಿ ರಬ್ಬರ್ ಕೃಷಿ ಲಾಭ ತಂದು ಕೊಡುತ್ತದೆ ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ರಬ್ಬರ್ ಬೆಳೆ ಬೆಳೆಯುವುದರಿಂದ ಖಚಿತವಾಗಿ ಆದಾಯ ಆಗುತ್ತದೆ ಎಂದು ಹೇಳುವ ಅಷ್ಟೊಂದು ಗಟ್ಟಿತನದ ಒಂದು ಅಂಶವೇನೆಂದರೆ ಒಂದು ಬಾರಿ ರಬ್ಬರ್ ಮರ ಹಾಕಿ ಬೆಳೆಸಿದರೆ ಗರಿಷ್ಠ 50 ವರ್ಷಗಳವರೆಗೆ ನಿರಂತರವಾಗಿ ಅದರಿಂದ ಆದಾಯ ಪಡೆಯಬಹುದು.
ಹಾಗಾಗಿ ರಬ್ಬರ್ ಖಂಡಿತವಾಗಿಯೂ ಅತಿ ಹೆಚ್ಚು ಲಾಭ ಕೊಡುವ ಕೃಷಿ. ಲ್ಯಾಟರೈಟ್ ಅಂಶ ಹೊಂದಿರುವ ಆಳವಾದ ಕೆಂಪು ಲೋಮಿ ಮಣ್ಣು ರಬ್ಬರ್ ಕೃಷಿಗೆ ಸೂಕ್ತವಾಗಿದೆ ಈ ರೀತಿಯ ಗುಣವಿರುವ ಮಣ್ಣಿನ ಫಲವತ್ತತೆಯಿಂದ ರಬ್ಬರ್ ಇಳುವರಿ ಹೆಚ್ಚುತ್ತದೆ ಮತ್ತು ರಬ್ಬರ್ ಮರ ಆರೋಗ್ಯವಾಗಿ ಬೆಳೆಯುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ.
ಇದಕ್ಕೆ ನೀವು ವಿಜ್ಞಾನದ ಜ್ಞಾನವನ್ನು ಹೊಂದಿರಲೇಬೇಕು ಇಲ್ಲವಾದರೆ ಒಂದು ಸಣ್ಣ ತಪ್ಪಿನಿಂದ ಆ ತಪ್ಪು ಅತಿ ದೊಡ್ಡದಾಗಿ ಪರಿವರ್ತನೆ ಆಗುತ್ತದೆ. ಈ ಮಣ್ಣಿನ PH ಮೌಲ್ಯವು 4.5-6.0 ನಡುವೆ ಇರಬೇಕು. ಸಸ್ಯವನ್ನು ಕಸಿ ಮಾಡಲು ವರ್ಷದಲ್ಲಿ ಜುಲೈ ತಿಂಗಳು ಒಳ್ಳೆಯ ಸೀಸನ್ ಎಂದು ಹೇಳಲಾಗುತ್ತದೆ. ರಬ್ಬರ್ ಮರವನ್ನು ನೆಡುವ ಮೊದಲು, ಹೊಲವನ್ನು ಆಳವಾಗಿ ಉಳುಮೆ ಮಾಡಿ, ನಂತರ ಕ್ಷೇತ್ರವನ್ನು ನೆಲಸಮ ಮಾಡಬೇಕು.
ಒಂದು ಅಡಿ ಅಗಲ ಮತ್ತು ಒಂದು ಅಡಿ ಆಳದ ಹೊಂಡಗಳನ್ನು ಗದ್ದೆಯಲ್ಲಿ 3 ಮೀಟರ್ ಅಂತರದಲ್ಲಿ ಮಾಡಬೇಕು. ಅದರಲ್ಲಿ ರಬ್ಬರ್ ಗಿಡ ನೆಟ್ಟು ಗುಂಡಿಗೆ ಸಾವಯವ ಗೊಬ್ಬರ ಹಾಕಿ ಮಣ್ಣು ಹಾಕಿ ಮುಚ್ಚಬೇಕು. ರಬ್ಬರ್ ಗಿಡ ಚೆನ್ನಾಗಿ ಬಲಿಷ್ಟವಾಗಿ ಬೆಳೆಯಬೇಕು ಎಂದರೆ ನಿಯಮಿತವಾಗಿ ನಿರಂತರ ನೀರಾವರಿ ಮಾಡಬೇಕು.
ಹೀಗೆ ಕೆಲವು ವರ್ಷದವರೆಗೆ ಅದು ಮರವಾಗಿ ನಮಗೆ ರಬ್ಬರ್ ಅಂಶ ಕಟಾವಿಗೆ ಹಂತಕ್ಕೆ ಸಿಗುವವರೆಗೂ ಕೂಡ ಪೋಷಣೆ ಮಾಡಿಬಿಟ್ಟರೆ ಜೀವಮಾನ ಪೂರ್ತಿ ಆದಾಯವೇ. ಒಂದು ಎಕರೆಯಲ್ಲಿ 150 ರಬ್ಬರ್ ಮರಗಳನ್ನು ನೆಡಬಹುದು. ಈ 150 ಮರವು ವರ್ಷದಲ್ಲಿ ಸರಾಸರಿ 2.75 KG ರಬ್ಬರ್ ಉತ್ಪಾದನೆಯನ್ನು ಮಾಡುತ್ತದೆ. ಇದರೊಂದಿಗೆ ರೈತರು 40 ವರ್ಷಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಲಾಭ ಗಳಿಸಬಹುದು. ಈ ರೀತಿ ಕಡಿಮೆ ಬಂಡವಾಳದಲ್ಲಿ ಕೈತುಂಬ ಹಣ ಸಂಪಾದಿಸುವ ಈ ರಬ್ಬರ್ ಕೃಷಿ ಬಗ್ಗೆ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಶೇರ್ ಮಾಡಿ.