ಗೃಹಜ್ಯೋತಿ ಯೋಜನೆಯು (Gruhajyothi Scheme) ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಒಂದಾಗಿದ್ದು, ಈ ಗೃಹಜ್ಯೋತಿ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬವು ಕೂಡ 2022-23ನೇ ಸಾಲಿನಲ್ಲಿ ಬಳಸಿದ ಸರಾಸರಿ ವಿದ್ಯುತ್ ಬಳಕೆ ಮೇಲೆ 10% ಹೆಚ್ಚುವರಿ ವಿದ್ಯುತ್ ನ್ನು 200 ಯೂನಿಟ್ ವರೆಗೆ ಉಚಿತವಾಗಿ ಪಡೆಯಬಹುದು ಮತ್ತು 200 ಯೂನಿಟ್ ಗಿಂತ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದರೆ ಮಾತ್ರ ಹೆಚ್ಚುವರಿ ಬಳಕೆಗೆ ವಿದ್ಯುತ್ ಶುಲ್ಕ ಪಾವತಿ ಮಾಡಬೇಕಿದೆ.
ಈಗಾಗಲೇ ರಾಜ್ಯದ 1.62 ಕೋಟಿ ಕುಟುಂಬಗಳು ಈ ಗೃಹಜ್ಯೋತಿ ಯೋಜನೆ ಅನುಕೂಲತೆಯನ್ನು ಪಡೆಯುತ್ತಿವೆ. ಸರ್ಕಾರ ಇತ್ತೀಚಿಗಷ್ಟೇ ಗೃಹ ಜ್ಯೋತಿ ಯೋಜನೆ ಕುರಿತು ಒಂದು ಅಪ್ಡೇಟ್ ಹೊರಡಿಸಿತ್ತು ಇನ್ನು ಮುಂದೆ ವಾರ್ಷಿಕ ಬಳಕೆಯ 10% ಹೆಚ್ಚುವರಿ ನೀಡುವುದಾಗಿ ಘೋಷಿಸಿತ್ತು ಇದರಿಂದ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಅನುಕೂಲತೆ ಮತ್ತು ಉಚಿತವಿದ್ದು ವಿದ್ಯುತ್ ಪೋಲಾಗುತ್ತಿದ್ದಕ್ಕೆ ಕರಿವಾಣ ಹಾಕಿದಂತಾಗಿದೆ.
ತಪ್ಪದೇ ಈ ಸುದ್ದಿ ಓದಿ:- ಕೇಂದ್ರದಿಂದ ಜಾರಿಗೆ ಬಂತು ಭಾರತ್ ರೈಸ್ ಸ್ಕೀಮ್, ಇನ್ಮುಂದೆ ಕೇವಲ 29 ರೂಪಾಯಿಗೆ ಸಿಗಲಿದೆ BT ಅಕ್ಕಿ…
ಈಗ ಮತ್ತೊಮ್ಮೆ ಗೃಹ ಜ್ಯೋತಿ ಯೋಜನೆ ಕುರಿತಂತೆ ಫಲಾನುಭವಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಅದರಲ್ಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಗೃಹಜ್ಯೋತಿ ಫಲಾನುಭವಿಗಳ ಬಹಳ ದಿನದ ಕೋರಿಕೆಗೆ ಈಗ ಸರ್ಕಾರದಿಂದ ಅನುಮತಿ ದೊರೆಯುವ ಮುನ್ಸೂಚನೆ ಸಿಕ್ಕಿದೆ ಎಂದು ಹೇಳಬಹುದು.
ಅದೇನೆಂದರೆ, ಗೃಹ ಜ್ಯೋತಿ ಯೋಜನೆಗೆ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಕೂಡ ಅರ್ಹರಾಗಿದ್ದರು ತಮ್ಮ ಆಧಾರ್ ಮತ್ತು ವಿದ್ಯುತ್ ಖಾತೆ ಲಿಂಕ್ ಮಾಡಿಸಿ ನೋಂದಾಯಿಸಿಕೊಂಡು ತಾವು ವಾಸಿಸುವ ಮನೆಯಲ್ಲಿ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿದ್ದರು. ಆದರೆ ಮನೆ ಖಾಲಿ ಮಾಡುವ ಸಮಯದಲ್ಲಿ ಸಮಸ್ಯೆಯಾಗುತ್ತಿತ್ತು.
ತಪ್ಪದೇ ಈ ಸುದ್ದಿ ಓದಿ:- 135 ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಕೇವಲ ರೂ.100 ಕಟ್ಟಿ ಕರ್ನಾಟಕ ಒನ್ ಪ್ರಾಂಚೈಸಿ ಪಡೆಯಿರಿ.!
ಯಾಕೆಂದರೆ, ಇದನ್ನು de-link ಮಾಡಲು ಅವಕಾಶವಿರಲಿಲ್ಲ ಆದರೆ ಈ ಕುರಿತಾದ ಒಂದು ಅಪ್ಡೇಟ್ ನ್ನು ಸ್ವತಃ ಇಂಧನ ಇಲಾಖೆಯ, ಸರ್ಕಾರದ ಅಪರ ಕಾರ್ಯದರ್ಶಿ ಅಪರ್ಣಾ ಪಾವಟೆ ಆದೇಶವೊಂದನ್ನು ಹೊರಡಿಸಿದ್ದಾರೆ. ಈ ಆದೇಶದಲ್ಲಿ ಗೃಹಜ್ಯೋತಿ ಯೋಜನೆಯ ನೋಂದಣಿ ವ್ಯವಸ್ಥೆಯಾದ ಸೇವಾ ತಂತ್ರಾಂಶದಲ್ಲಿ ಗ್ರಾಹಕರನ್ನು De-Link ಮಾಡುವ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ.
ಗ್ರಾಹಕರು ತಮ್ಮ ಮನೆಯನ್ನು ಬದಲಾಯಿಸಿದಂತಹ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಈಗಾಗಲೇ ಈ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮನೆಯಲ್ಲಿ ಈ ಸೌಲಭ್ಯವನ್ನು ಸ್ಥಗಿತಗೊಳಿಸಿಕೊಂಡು ನಂತರ ಮತ್ತೊಂದು ಮನೆಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು De-Link ಅವಕಾಶ ಬೇಕಾಗಿದೆ ಮತ್ತು ಇದಕ್ಕಾಗಿಯೇ ಅನೇಕರು ಮನವಿ ಸಲ್ಲಿಸಿದ್ದರು.
ತಪ್ಪದೇ ಈ ಸುದ್ದಿ ಓದಿ:- HDFC ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್.! ಪ್ರಮುಖ ಘೋಷಣೆ…
ಆದ್ದರಿಂದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಈ ಸಂಬಂಧ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಈ ಆದೇಶದಂತೆ ಇನ್ನು ಮುಂದೆ ಬಾಡಿಗೆ ಮನೆಯಲ್ಲಿ ವಾಸಿಸುವ ಜನರು ಸೇವಾಸಿಂಧು ಪೋರ್ಟಲ್ ಮೂಲಕವೇ ಮನೆಯನ್ನು ಖಾಲಿ ಮಾಡುವಾಗ ಗೃಹಜ್ಯೋತಿ ಯೋಜನೆ ರದ್ದು ಮಾಡಬಹುದಾಗಿದೆ.
ಅಥವಾ ಆಫ್ಲೈನ್ ನಲ್ಲಿ ಹತ್ತಿರದ ವಿದ್ಯುತ್ ಕಛೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಿ de-link ಮಾಡಿಸಿಕೊಂಡು ನಂತರ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಈ ಅನುಕೂಲತೆ ದೊರೆತರೆ ರಾಜ್ಯದಲ್ಲಿರುವ ಲಕ್ಷಾಂತರ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ಬಡ ಹಾಗೂ ಮಾಧ್ಯಮ ವರ್ಗದ ಜನತೆಗೆ ಖಂಡಿತವಾಗಿಯೂ ಅನುಕೂಲವಾಗಲಿದೆ, ಹಾಗಾಗಿ ಶೀಘ್ರದಲ್ಲಿಯೇ ಜಾರಿಗೆ ತರಲಿ ಎಂದು ನಾವು ಸಹ ಆಶಿಸೋಣ.