ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಒಂದು ತಲೆ ಬಿಸಿ ಉಂಟು ಮಾಡುತ್ತಿದ್ದರೆ ಗೃಹಿಣಿಯರಿಗೆ ಅಡುಗೆ ಮನೆಗೆ ಬೇಕಾದ ಎಲ್ಲಾ ಪದಾರ್ಥಗಳ ಬೆಲೆಯು ಕೂಡ ಗಗನಕ್ಕೆ ಇರುವುದು ಸಹಿಸಲು ಅಸಾಧ್ಯವಾದದ್ದಾಗಿದೆ.
ಬೇಳೆ ಕಾಳುಗಳು, ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ನೊಂದು ಹೋಗಿದ್ದ ಮಧ್ಯಮ ವರ್ಗದವರಿಗೆ ಇತ್ತೀಚೆಗೆ ಟಮೋಟೋ ಬೆಲೆ ಏರಿಕೆ ಆಗಿರುವುದು ಬಾರಿ ಹೊಡೆತ ನೀಡಿದ್ದು. ಇದರ ಬೆಲೆ ಇಳಿಮುಖವಾಗುವಷ್ಟರಲ್ಲಿ ಹಬ್ಬಗಳ ಸಾಲು ಬಂದಿರುವುದರಿಂದ ಈರುಳ್ಳಿ, ತರಕಾರಿ ಪಲ್ಯ, ಹೂವು ಹಣ್ಣುಗಳ ಬೆಲೆ ಏರಿಕೆಯಾಗಿ ಹೋಗಿದೆ.
ಕೋಟಿ ಕೋಟಿ ಬೆಲೆ ಬಾಳುವ ಫ್ಲಾಟ್ ಕೇವಲ 100 ರೂಪಾಯಿಗೆ ವಿತರಣೆ.!
ಈಗ ಈ ಹೊರೆ ಇಳಿಸುವುದಕ್ಕೆ ಕೇಂದ್ರ ಸರ್ಕಾರ ಕೂಡ ನೆರವಾಗುತ್ತಿತ್ತು, ದೇಶದ ಎಲ್ಲಾ ಕುಟುಂಬಗಳಿಗೂ ಅನುಕೂಲವಾಗುವಂತಹ ಘೋಷಣೆಯೊಂದನ್ನು ಮಾಡಿದೆ. ರಕ್ಷಾ ಬಂಧನದ ಹಬ್ಬದ (Rakshabandhan) ಪ್ರಯುಕ್ತ ಕೇಂದ್ರ ಸರ್ಕಾರವು (Central government ) ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ಇಳಿಸಿದೆ.
ಕಳೆದ ತಿಂಗಳಷ್ಟೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಆಗಿತ್ತು, ಈಗ ಸೆಪ್ಟೆಂಬರ್ 1ರಿಂದ ಅನ್ವಯವಾಗುವಂತೆ ಗೃಹಬಳಕೆ ಸಿಲಿಂಡರ್ (Gas Cylinder) ಬೆಳೆಯನ್ನು ಕೂಡ ಬಹಳ ವರ್ಷಗಳ ಬಳಿಕ ಇಳಿಕೆ ಮಾಡಲಾಗಿದೆ. ಈಗಾಗಲೇ ಉಜ್ವಲ ಯೋಜನೆಯಲ್ಲಿ ಗೃಹಬಳಕೆ ಸಿಲಿಂಡರ್ ಕನೆಕ್ಷನ್ ಪಡೆದಿದ್ದ ಕುಟುಂಬಗಳಿಗೆ 200ರೂ. ಸಬ್ಸಿಡಿ ಸಿಗುತ್ತಿತ್ತು.
ಸ್ವಂತ ಮನೆಯ ಕನಸಿದ್ದರೆ ಈ ಪ್ರಯೋಗ ಮಾಡಿ, 2 ತಿಂಗಳ ಒಳಗೆ ನಿಮ್ಮ ಕನಸು ನನಸಾಗುತ್ತದೆ.!
ಈಗ ಹೊಸದಾಗಿ ಘೋಷಣೆ ಮಾಡಿರುವುದರಿಂದ ಉಜ್ವಲ್ ಯೋಜನೆ (PM Ujwal Scheme) ಮಾತ್ರವಲ್ಲದೆ ದೇಶದ ಎಲ್ಲಾ ಅಡುಗೆ ಅನಿಲದ ಗ್ರಾಹಕರು ಕೂಡ ವಾರ್ಷಿಕವಾಗಿ 12 ಸಿಲಿಂಡರ್ ಗೆ ಪ್ರತಿ ಬುಕ್ಕಿಂಗ್ ಮೇಲೆ 200 ರೂ. ರಿಯಾಯಿತಿ ಪಡೆಯಲಿದ್ದಾರೆ. ಈ ಘೋಷಣೆ ಸೇರಿ ಉಜ್ವಲ ಯೋಜನೆಯವರಿಗೆ 400ರೂ. ಇಳಿಕೆ ಆದ ರೀತಿ ಆಯಿತು.
ದೇಶಾದಾದ್ಯಂತ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದು ಅನ್ವಯವಾಗುತ್ತವೆ. ಕೇಂದ್ರ ಸರ್ಕಾರದ ಈ ಘೋಷಣೆ ಮಾತ್ರವಲ್ಲದೆ ಆಯಾ ರಾಜ್ಯ ಸರ್ಕಾರಗಳು ಕೂಡ ತಮ್ಮ ರಾಜ್ಯದ ನಾಗರಿಕರಿಗೆ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಬಗ್ಗೆ ಪ್ರತ್ಯೇಕವಾಗಿ ಘೋಷಣೆ ಮಾಡಿವೆ.
ಅಕ್ಟೋಬರ್ ನಿಂದ ಇಂತಹ ವಾಹನಗಳು ಸೀಜ್, ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ.!
ರಾಜಸ್ಥಾನದಲ್ಲಿ (Rajasthan) 500 ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಅಲ್ಲಿನ ಮುಖ್ಯಮಂತ್ರಿಗಳು ಘೋಷಿಸಿದ್ದನ್ನು ಇಲ್ಲಿ ನೆನೆಯಬಹುದು, ಇದೇ ರೀತಿ ಮಧ್ಯಪ್ರದೇಶದಲ್ಲಿ (Madyapradesh) ಕೂಡ ಚುನಾವಣಾ ಪ್ರಣಾಳಿಕೆಯಲ್ಲಿ ಗ್ಯಾಸ್ ಬೆಲೆ ಇಳಿಸುವ ವಿಚಾರ ಕೂಡ ಸೇರಿದೆ, ಮೊನ್ನೆಯಷ್ಟೇ ಹೈದ್ರಾಬಾದ್ ನಲ್ಲಿ (Hyderabad Rally) ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರು (Sonia Gandhi) ತೆಲಂಗಾಣದಲ್ಲಿ (Telangana Assembly Election-2023) ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ.
ಆರು ಗ್ಯಾರೆಂಟಿ ಯೋಜನೆಗಳನ್ನು (Guarantee Schemes) ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಅದರಲ್ಲಿ ಗ್ಯಾಸ್ ಸಿಲೆಂಡರ್ ನ್ನು 500 ರೂ. ಗೆ ನೀಡುವುದು ಎನ್ನುವುದು ಕೂಡ ಸೇರಿದೆ. ಗೋವಾ (Goa) ಸರ್ಕಾರ ಕೂಡ ಇಂಥದ್ದೊಂದು ಘೋಷಣೆಯನ್ನು ಮಾಡಿದೆ. LPG ಸಿಲಿಂಡರ್ ಮರುಪೂರ್ಣಕ್ಕಾಗಿ ಮುಖ್ಯಮಂತ್ರಿ ಯೋಜನೆ ಎನ್ನುವ ಹೊಸ ಯೋಜನೆಯಡಿ ಅಂತ್ಯೋದಯ ರೇಷನ್ ಕಾರ್ಡ್ (Ration Card) ಹೊಂದಿರುವ ಕುಟುಂಬಗಳಿಗೆ ಸಬ್ಸಿಡಿ ಸೇರಿಸಿ ಬಾರಿ ವಿನಾಯಿತಿ ನೀಡಿದೆ.
ತೆರಿಗೆ ಕಟ್ಟುವವರಿಗೆ ಅಕ್ಟೋಬರ್ ನಿಂದ ಹೊಸ ರೂಲ್ಸ್ ಜಾರಿ.!
ಪ್ರಸ್ತುತವಾಗಿ ಅಲ್ಲಿ 14.2 Kg ಗ್ಯಾಸ್ ಲೀಡರ್ ಬೆಲೆ 902ರೂ. ಇದೆ, ಕೇಂದ್ರದಿಂದ 200ರೂ. ಸಬ್ಸಿಡಿ ಘೋಷಿಸಿರುವುದರಿಂದ ಅಲ್ಲಿನ ರಾಜ್ಯ ಸರ್ಕಾರವು 275 ಇಳಿಸುವುದಾಗಿ ಹೇಳಿದೆ. ಹಾಗಾಗಿ 428 ರೂ. ಗೆ ಅವರು ಗ್ಯಾಸ್ ಸಿಲಿಂಡರ್ ಪಡೆಯಬಹುದಾಗಿದೆ. ಈ ವಿಷಯವನ್ನು ಗೋವಾ ರಾಜಧಾನಿ ಪಣಜಿಯಲ್ಲಿ ಸಿ.ಎಂ ಪ್ರಮೋದ್ ಸಾವಂತ್ (C.M Pramod Savanth) ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ (Minister Shripad Nayak) ಅವರೇ ಘೋಷಿಸಿದ್ದಾರೆ.