ಹೊಸ BPL ರೇಷನ್ ಕಾರ್ಡ್ ಪಡೆಯಲು ಸರ್ಕಾರದಿಂದ 6 ಕಂಡಿಷನ್ ಪಾಲಿಸುವುದು ಕಡ್ಡಾಯ, ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್‌

 

WhatsApp Group Join Now
Telegram Group Join Now

ನಮ್ಮ ದೇಶದಲ್ಲಿ ರೇಷನ್ ಕಾರ್ಡ್ (Ration card) ಒಂದು ಕಡ್ಡಾಯ ದಾಖಲೆ. ಪ್ರತಿ ಕುಟುಂಬವೂ ಕೂಡ ಆಹಾರ ಇಲಾಖೆಯಿಂದ (Food department) ರೇಷನ್ ಕಾರ್ಡ್ ಪಡೆದಿರುತ್ತಾರೆ. ಇದರಲ್ಲಿ ಬಡತನ ರೇಖೆಗಿಂತ ಮೇಲಿರುವವರಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಬೇರೆ ಬೇರೆ ರೀತಿಯ ರೇಷನ್ ಕಾರ್ಡ್ ಗಳು ವಿತರಣೆ ಆಗುತ್ತದೆ.

ಅವುಗಳ ಆಧಾರದ ಮೇಲೆ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸಿಗುತ್ತವೆ. ನಮ್ಮ ದೇಶದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ ಕಾರ್ಡ್ ಗಳನ್ನು ನೀಡಿ ಅವುಗಳ ಮೂಲಕ ಉಚಿತ ಪಡಿತರ ಅಥವಾ ಕನಿಷ್ಠ ಬೆಲೆಗೆ ಪಡಿತರ, ವೈದ್ಯಕೀಯ ಶುಲ್ಕಗಳಲ್ಲಿ, ಶೈಕ್ಷಣಿಕ ಶುಲ್ಕಗಳಲ್ಲಿ ರಿಯಾಯಿತಿ ಇನ್ನು ಮುಂತಾದ ಅನುಕೂಲತೆಗಳನ್ನು ನೀಡುತ್ತಿದೆ.

ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ.!

ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಗೃಹಿಣಿಯರಿಗೆ, ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಯಾವ ಯೋಜನೆ ರೂಪಿಸಿದರು ಆ ಸವಲತ್ತುಗಳನ್ನು ಪಡೆಯಲು ಅವರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಗುರುತಿಸಿಕೊಳ್ಳುವುದಕ್ಕೆ ಆಹಾರ ಇಲಾಖೆಯು ಗುರುತಿಸಿ ನೀಡಿದ ಮಾನ್ಯವಾದ BPL ರೇಷನ್ ಕಾರ್ಡ್ ಹೊಂದಿರಬೇಕು.

ಆದರೆ ಇತ್ತೀಚೆಗೆ ರೇಷನ್ ಕಾರ್ಡ್ ಗಳ ಉಪಯೋಗ ಅರಿತು ಉಳ್ಳವರು ಕೂಡ ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಅಥವಾ ನಿಜಾಂಶವನ್ನು ಮರೆಮಾಚಿ ತಾವು ಕೂಡ BPL ರೇಷನ್ ಕಾರ್ಡ್ ಗಳನ್ನು ಪಡೆಯುತ್ತಿದ್ದಾರೆ. ಇದು ಆಹಾರ ಇಲಾಖೆ ಗಮನಕ್ಕೂ ಬಂದಿದೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕಲು ಸರ್ಕಾರ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಂಡಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳು ಜಾರಿ ಆದಮೇಲೆ ರೇಷನ್ ಕಾರ್ಡ್ ಗೆ ವಿಪರೀತವಾದ ಡಿಮ್ಯಾಂಡ್ ಏರ್ಪಟ್ಟಿದೆ.

ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆ ಬರಲು ಇದೇ ಕಾರಣ.! ಹಾರ್ಟ್ ಅಟ್ಯಾಕ್ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಸಂಬಂಧ ಇದೆಯೇ.? ಇಲ್ಲಿದೆ ನೋಡಿ ವೈದ್ಯರು ಬಿಚ್ಚಿಟ್ಟ ಸತ್ಯಾಂಶ.!

ಅನ್ನಭಾಗ್ಯ (Annabhagya) ಮತ್ತು ಗೃಹಲಕ್ಷ್ಮಿ(Gruhalakshmi) ಯೋಜನೆಗೆ ಫಲಾನುಭವಿಗಳಾಗಲು ಕುಟುಂಬದ ಯಜಮಾನಿಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ರೇಷನ್ ಕಾರ್ಡ್ ಹೊಂದಿರಬೇಕು ಎಂದು ನಿಯಮ ಬದಲಾಯಿಸಲಾಗಿದೆ. ಇದೇ ಸಮಯದಲ್ಲಿ ಸರ್ಕಾರ ರೇಷನ್ ಕಾರ್ಡ್ಗಳ ಸರ್ವೆ (BPL Ration card survey) ಕಾರ್ಯ ಕೂಡ ಶುರು ಮಾಡಿದ್ದು.

2016ರಲ್ಲಿ BPL ರೇಷನ್ ಕಾರ್ಡ್ ಹೊಂದಲು ಯಾವೆಲ್ಲಾ ಮನದಂಡಗಳನ್ನು (2016 rules Eligible Criteria) ಸರ್ಕಾರ ನಿರ್ಧಾರಪಡಿಸಿತ್ತು, ಅವುಗಳ ಮೂಲಕವೇ ಪರಿಶೀಲನೆ ಮಾಡಿ ಅನರ್ಹರಾಗಿದ್ದರು BPL ಕಾರ್ಡ್ಗಳನ್ನು ಪಡೆದಿದ್ದರೆ ಆ ಕಾರ್ಡುಗಳನ್ನು ರದ್ದು (Cancel) ಪಡಿಸಲು ಮುಂದಾಗಿದೆ. ನೀವೇನಾದರೂ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರು ನಿಮಗೂ ಇದೇ ನಿಯಮಗಳ ಅನುಸಾರವಾಗಿ ರೇಷನ್ ಕಾರ್ಡ್ ವಿತರಣೆ ಆಗುತ್ತದೆ.

ಸಾರ್ವಜನಿಕರಿಗೆ ಕೆಡಿಮೆ ಬೆಲೆಗೆ ಸೈಟ್ ಮಾರಟ C.M ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ.! ಯಾವ ಜಿಲ್ಲೆಯ ಜನರಿಗೆ ಈ ಭಾಗ್ಯ ಸಿಗಲಿದೆ.! ಅರ್ಜಿ ಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಆಹಾರ ಇಲಾಖೆಯ ಮೂಲಗಳ ಮಾಹಿತಿ ಪ್ರಕಾರ ಈಗ ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳು BPL ರೇಷನ್ ಕಾರ್ಡ್ ಹೊಂದಿದ್ದು ಈ ಸರ್ವೇ ಕಾರ್ಯ ಶುರು ಆದಮೇಲೆ ಇದರಲ್ಲಿ 35 ಲಕ್ಷ ರೇಷನ್ ಕಾರ್ಡ್ ಗಳು ರದ್ದಾಗಬಹುದು ಎಂದು ಊಹಿಸಲಾಗಿದೆ.

ಸರ್ಕಾರದ ಆ ಆರು ಕಂಡಿಶನ್ಗಳು:-

● ವಾರ್ಷಿಕ ಆದಾಯ 1.2 ಲಕ್ಷ ಹೊಂದಿರುವ ಕುಟುಂಬಗಳು
● 3 ಹೆಕ್ಟರಿಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಕುಟುಂಬಗಳು
● ವೈಟ್ ಬೋರ್ಡ್ ಕಾರ್ ಹೊಂದಿರುವ ಕುಟುಂಬಗಳು
● ಕುಟುಂಬಸ್ಥರಲ್ಲಿ ಯಾರಾದರೂ ಸರ್ಕಾರಿ ನೌಕರಿಯಲ್ಲಿದ್ದರೆ
● ನಗರ ಪ್ರದೇಶಗಳಲ್ಲಿ 1000 Sq.ft ಗಿಂತ ಹೆಚ್ಚಿನ ವಿಸ್ತೀರ್ಣದ ಮನೆ ಹೊಂದಿದ್ದರೆ
● ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಐಟಿ ರಿಟರ್ನ್ ಸಲ್ಲಿಸುವ ಕುಟುಂಬಗಳು BPL ಕಾರ್ಡ್ ಹೊಂದಿದ್ದರೆ ನಿಮ್ಮ ಕಾರ್ಡ್ ಗಳು ರದ್ದಾಗಲಿವೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now