ಹೊಸದಾಗಿ ತೋಟ ಮಾಡುವವರಿಗೆ ಅದ್ಭುತವಾದ ಪ್ಲಾನ್.! ಈ ತೋಟಕ್ಕೆ ಒಂದು ರೂಪಾಯಿನೂ ಖರ್ಚು ಮಾಡಲ್ಲ.!
ಬಂಧುಗಳೇ ಹೊಸದಾಗಿ ಕೃಷಿಗೆ ಬರಬೇಕೆನ್ನುವವರಿಗೆ ಉತ್ತಮವಾದ ಸಲಹೆ ಅಗತ್ಯವಾಗಿರುತ್ತದೆ, ನಗರ ಜೀವನದ ಜಂಜಾಟದಿಂದ ಹೊರಬಂದು ಹಳ್ಳಿಯಲ್ಲಿ ನೈಸರ್ಗಿಕವಾಗಿ ಪ್ರಕೃತಿದತ್ತವಾಗಿ ಸಿಗುವ ಆಹಾರವನ್ನು ಸೇವಿಸುತ್ತಾ ಶುದ್ದ ಆಮ್ಲಜನಕ ಸೇವಿಸುವುದೇ ಸ್ವರ್ಗಕ್ಕೆ ಕಿಚ್ಚು ಎಂಬುದು ಹಲವಾರು ತಜ್ಞರವಾದ. ಈ ಮಾತು ಒಪ್ಪಿಕೊಳ್ಳಲೇಬೇಕಾದದ್ದು. ಹಾಗಾಗಿ ನಗರದಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಾ ಜೀವಿಸುತ್ತಿದ್ದ ವರ್ಗಗಳು ತಮ್ಮ ತಮ್ಮ ಹಳ್ಳಿಗೆ ಬಂದು ತೋಟಗಾರಿಕೆ ಹೈನುಗಾರಿಕೆಯ ಕಡೆ ಮುಖ ಮಾಡಿದ್ದಾರೆ. ನಿಜವಾಗಲೂ ಇದು ಖುಷಿ ಪಡುವ ವಿಚಾರವೇ ಆಗಿದೆ.
ಸಾಮಾನ್ಯವಾಗಿ ತಲೆಗೆ ವಿದ್ಯೆ ಬಾರದಿದ್ದವರಿಗೆ ಹಸು ಕಾಯಿ ಕುರಿ ಕಾಯಿ ಎಂದು ವ್ಯಂಗ್ಯವಾಗಿ ಬೈಯುತ್ತಿದ್ದವರು ಈಗ ವಿದ್ಯಾವಂತರೇ ಹಸುಗಳನ್ನು ಕಾಯುತ್ತಾ ಗದ್ದೆ ತೋಟಗಳನ್ನು ನಿರ್ಮಾಣ ಮಾಡುತ್ತಿದ್ದಾರೆ, ಕೃಷಿಯಲ್ಲಿ ಹಲವಾರು ಆಧುನಿಕ ತಂತ್ರಜ್ಞಾನಗಳನ್ನು ತಂದು ಹೊಸ ಚೈತನ್ಯವನ್ನು ತರುತ್ತಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬಕ್ಕೆ ಬೇಕಾದ ಎಲ್ಲಾ ರೀತಿಯ ಪೌಷ್ಟಿಕಾಂಶ ತುಂಬಿದ ಸಾವಯವ ತರಕಾರಿಗಳನ್ನು ನಾವೇ ಬೆಳೆದುಕೊಳ್ಳಬಹುದು, ಮತ್ತು ಇತರರಿಗೂ ಒಳ್ಳೆಯ ಆಹಾರವನ್ನು ಒಳ್ಳೆಯದರಕ್ಕೆ ಸರಬರಾಜು ಮಾಡಬಹುದು.
ಬಂಧುಗಳೇ ಹೊಸದಾಗಿ ತೋಟ ಮಾಡಲು ಸಾಕಷ್ಟು ಹಣ ಬೇಕು ಎಂಬುದು ಸುಳ್ಳು, ಸರಿಯಾದ ಮಾರ್ಗದರ್ಶನ ತಾಳ್ಮೆ ಶ್ರದ್ದೆ ಇದ್ದರೆ ಭೂಮಿ ತಾಯಿಯು ಎಂದಿಗೂ ಕೈಬಿಡುವುದಿಲ್ಲ. ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ನೈಸರ್ಗಿಕವಾದ ಜೀವಾಮೃತಗಳನ್ನು ಬಳಸಿ ಮಣ್ಣಿನಲ್ಲಿ ಫಲವತ್ತತೆಯನ್ನು ಹೆಚ್ಚಿಸಿ ಬೆಳೆಗಳನ್ನು ಬೆಳೆಯುವುದು ಉತ್ತಮ.
ಎಷ್ಟು ರೀತಿಯ ಗಿಡಗಳು ತೋಟಕ್ಕೆ ಅಗತ್ಯ
ಒಂದು ಎಕರೆ ಜಮೀನನ್ನು ಹೊಂದಿದ್ದರೆ ಮೂವತ್ತಕ್ಕೂ ಹೆಚ್ಚಿನ ರೀತಿಯ ವಿವಿಧ ಬೆಳೆಗಳನ್ನು ಉದಾರಣೆಗೆ ಹಣ್ಣಿನ ಗಿಡಗಳು, ಔಷಧೀಯ ಗಿಡಗಳು, ತೆಂಗು ಮತ್ತು ಅಡಿಕೆ, ಮೆಣಸು, ಹೀಗೆ ಹಲವಾರು ರೀತಿಯ ಸಸ್ಯ ಸಂಪನ್ನವನ್ನು ತೋಟದಲ್ಲಿ ಬೆಳೆಸುವುದರಿಂದ ಮಣ್ಣಿನಲ್ಲಿನ ಸಾವಯವ ಇಂಗಾಲವು ಹೆಚ್ಚಾಗುತ್ತದೆ ಹಾಗೂ ವಿವಿಧ ರೀತಿಯ ಜೀವನಗಳು ಮಣ್ಣಿನಲ್ಲಿ ಉದ್ಭವವಾಗಲು ಮತ್ತು ಬೆಳವಣಿಗೆ ಹೊಂದಲು ಸಹಾಯಕವಾಗುತ್ತದೆ. ಹಾಗಾಗಿ ಕೇವಲ ಒಂದು ಅಥವಾ ಎರಡು ರೀತಿಯ ಬೆಳೆಗಳನ್ನು ಪೂರ್ತಿ ಪ್ರಮಾಣದಲ್ಲಿ ತೋಟಕ್ಕೆ ಹಾಕಬಾರದು.
ತ್ಯಾಜ್ಯ ನಿರ್ವಹಣೆ
ತೋಟದಲ್ಲಿ ಉದ್ಭವವಾದ ತ್ಯಾಜ್ಯಗಳನ್ನು ನಾವು ಸುಡಬಾರದು, ಮಣ್ಣಿನ ಮೇಲ್ಪದರವು ಫಲವತ್ತತೆಯಿಂದ ಸಮೃದ್ಧವಾಗಲು ತೋಟದಲ್ಲಿ ಬಂದ ತ್ಯಾಜ್ಯಗಳನ್ನು ಅಲ್ಲೇ ಕೊಳೆಯುವಂತಾಗಲು ಟ್ರಂಚ್ ಗಳನ್ನು ಸೃಷ್ಟಿಸಬೇಕು. ಯಾವುದೇ ರಾಸಾಯನಿಕಗಳು ಬಳಸದೆ ಸ್ವಾಭಾವಿಕವಾಗಿ ತ್ಯಾಜ್ಯಗಳು ಕೊಳೆಯುವಂತೆ ನೋಡಿಕೊಳ್ಳಬೇಕು. ಇದರಿಂದಾಗಿ ರಾಸಾಯನಿಕಗಳಿಗೆ ತರಬೇಕಾದ ಹಣವು ಉಳಿತಾಯವಾಗುತ್ತದೆ ಮತ್ತು ಮಣ್ಣಿನಲ್ಲಿರುವ ಸಾರವು ಹಾಳಾಗದೆ ದೀರ್ಘಕಾಲಕ್ಕೆ ಉಳಿಯುವಂತೆ ಆಗುತ್ತದೆ.
ತೋಟ ಮಾಡುವಾಗ ಪ್ರತಿಯೊಂದು ಗಿಡದ ಸ್ವಾಭಾವಿಕತೆಯನ್ನು ಅರಿತುಕೊಂಡು ಅವುಗಳನ್ನು ನೀಡಬೇಕಾಗುತ್ತದೆ, ಅವುಗಳು ಬೇಡುವ ಉಷ್ಣತೆಯ ಆಧಾರದ ಮೇಲೆ ಹಾಗೂ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ನೀಡಲೇಬೇಕಾದ ಅಂತರವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಒಂದು ಮರದಿಂದ ಇನ್ನೊಂದು ಮರಕ್ಕೆ ಆಗುವ ತೊಂದರೆಗಳನ್ನು ಈಗಲಿಂದಲೇ ತಪ್ಪಿಸಬಹುದು. ಒಂದು ಗಿಡದಿಂದ ಪಕ್ಕದಲ್ಲಿ ಇನ್ನೊಂದು ಬೆಳೆಗಳನ್ನು ನೀಡುವಾಗ ಅವುಗಳ ಅನ್ಯೋನ್ಯತೆಯ ಅಂಶವನ್ನು ಅರಿತು ತಜ್ಞರಿಂದ ಮಾಹಿತಿಯನ್ನು ಪಡೆದುಕೊಂಡು ಗಿಡಗಳನ್ನು ನೀಡಬೇಕು. ಹೀಗೆ ಈ ಎಲ್ಲಾ ಅಂಶಗಳನ್ನು ಗಮನಿಸಿ ತೋಟವನ್ನು ನಿರ್ವಹಣೆ ಮಾಡಬೇಕು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ.