ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಅಫಿಡವಿಟ್ ಎನ್ನುವ ಈ ಪದವನ್ನು ಕೇಳುತ್ತಾರೆ. ಅವರ ವೈಯಕ್ತಿಕ ಜೀವನದಲ್ಲಿ ಅಥವಾ ಸಾರ್ವಜನಿಕ ಜೀವನದಲ್ಲಿ ಈ ವಿಷಯ ಪ್ರಸ್ತಾಪವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಮತ್ತೊಬ್ಬರ ಮೇಲೆ ನಂಬಿಕೆ ಕಡಿಮೆಯಾಗಿರುವುದರಿಂದ ಪ್ರತಿಯೊಬ್ಬರಿಗೂ ಅಫಿಡವಿಟ್ ಬರೆಯುವ ಸಂದರ್ಭ ಬರುತ್ತದೆ.
ಸರ್ಕಾರಿ ಕಚೇರಿಗಳಲ್ಲಿ, ನ್ಯಾಯಾಲಯದಲ್ಲಿ ಇದರ ಬಳಕೆ ಹೆಚ್ಚು ಹಾಗಾಗಿ ಇದರ ಕುರಿತು ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಅದನ್ನು ಹೇಗೆ ಬರೆಯುತ್ತಾರೆ ಅಫಿಡವಿಟ್ ಎಲ್ಲಿ ಬಳಕೆಗೆ ಬರುತ್ತದೆ ಹಾಗೂ ಯಾವ ಉದ್ದೇಶದಿಂದ ಇದನ್ನು ಬರೆಸಲಾಗುತ್ತದೆ ಈ ಎಲ್ಲಾ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಒಬ್ಬ ವ್ಯಕ್ತಿಯು ತನ್ನ ಹೇಳಿಕೆಯನ್ನು ಘೋಷಣೆ ಮಾಡಿ ಪ್ರಮಾಣಿಕರಿಸಿದರೆ ಅದನ್ನು ಅಫಿಡವಿಟ್ ಎಂದು ಕರೆಯುತ್ತಾರೆ.
ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆಲ್ಲಾ ಬಂದಿಲ್ಲ, ಅವರಿಗೆಲ್ಲಾ ಸಿಹಿ ಸುದ್ದಿ.!
ಹಾಗೆಂದ ಮಾತ್ರಕ್ಕೆ ಆ ವ್ಯಕ್ತಿ ಬರೀ ಬಾಯಿ ಮಾತಿನಿಂದ ಘೋಷಣೆ ಮಾಡಿ ಪ್ರಮಾಣಿಕರಿಸಿದರೆ ಅದು ಮಾನ್ಯವಾಗುವುದಿಲ್ಲ. ತಮ್ಮ ಹೇಳಿಕೆಗಳನ್ನು ಸ್ಟ್ಯಾಂಪ್ ಪೇಪರ್ ಮೇಲೆ ಬರೆದು ನೋಟರಿ ಮಾಡಿಸಬೇಕು ಹಾಗೂ ವಕೀಲರ ಸಹಿ ಮಾಡಿಸಬೇಕು ಅಂತಹ ಸ್ವಯಂ ಘೋಷಣೆ ಪತ್ರಗಳನ್ನು ಮಾತ್ರ ಅಫಿಡವಿಟ್ ಎನ್ನುತ್ತಾರೆ. ಆಡು ಭಾಷೆಯಲ್ಲಿ ಇದನ್ನು ಶಪಥ ಪತ್ರ ಅಥವಾ ಆಣೆ ಮಾಡುವುದು ಎಂದು ಕೂಡ ಕರೆಯುತ್ತಾರೆ.
ಅಫಿಡವಿಟ್ ಅನುಕೂಲತೆಗಳು:-
● ರೈತರಿಗಾದರೆ PM ಕಿಸಾನ್ ನಿಧಿ ಅರ್ಜಿ ಸಲ್ಲಿಸುವಾಗ ಅಥವಾ ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಸಿಗುವ ನೆರವನ್ನು ಪಡೆಯುವಾಗ ಅಥವಾ ಯಾವುದೇ ಸರ್ಕಾರ ಯೋಜನೆಗಳ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವಾಗ ಅಫಿಡವಿಟ್ ಕೇಳುತ್ತಾರೆ.
ATM ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ 90 ಸಾವಿರ ಆದಾಯ ಗಳಿಸಿ.! ಬಂಡವಾಳವಿಲ್ಲದೆ ಲಾಭಗಳಿಸುವ ಮಾರ್ಗ.!
● ನೀವು ನಿಮ್ಮ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ವಂಶವೃಕ್ಷ ಮಾಡಿಸುವಾಗ, ವಾಸಸ್ಥಳ ಧೃಡೀಕರಣ ಪತ್ರ ಮಾಡಿಸುವಾಗ ಅಥವಾ ಕಲ್ಯಾಣ ಕರ್ನಾಟಕ ವಿಭಾಗದವರು 371J ಪ್ರಮಾಣ ಪತ್ರ ತೆಗೆದುಕೊಳ್ಳಲು ಈ ಅಫಿಡವಿಟ್ ಬೇಕು.
● ನ್ಯಾಯಾಲಯಗಳಲ್ಲಿ ವ್ಯಾಜ್ಯಗಳಿದ್ದಾಗ ಈ ಅಫಿಡವಿಟ್ ಖಂಡಿತವಾಗಿ ಕೇಳುತ್ತಾರೆ.
ಹೇಗೆ ಬರೆಯಬೇಕು:-
● ವಂಶಾವಳಿ ಪತ್ರದ ಉದಾಹರಣೆಯೊಂದಿಗೆ ತಿಳಿಸುತ್ತಿದ್ದೇವೆ.
● ಪತ್ರ ಬರೆಯುವ ಮಾದರಿಯಲ್ಲಿಯೇ ಇದನ್ನು ಸಹ ಬರೆಯುವುದು.
● ಪ್ರಮಾಣ ಪತ್ರ ಅಥವಾ ಘೋಷಣೆ ಪತ್ರ ಎಂದು ಟೈಟಲ್ ಬರೆದು ನೀವು ನಿಮ್ಮ ಹೆಸರು ನಿಮ್ಮ ತಂದೆ ಹೆಸರು ನಿಮ್ಮ ವಯಸ್ಸು ಉದ್ಯೋಗ ಸ್ಥಿತಿ ಹಾಗೂ ನಿಮ್ಮ ಗ್ರಾಮ ತಾಲೂಕು ಜಿಲ್ಲೆ ಇತ್ಯಾದಿ ವಿಳಾಸದ ವಿವರವನ್ನು ಕೂಡ ಬರೆದು ವಂಶಾವಳಿ ಪತ್ರದ ವಿವರವನ್ನು ಬರೆಯಬೇಕು. ಕ್ರಮ ಸಂಖ್ಯೆ, ಸದಸ್ಯರ ಸಂಖ್ಯೆ, ಸಂಬಂಧ ಏನಾಗಬೇಕು ಮತ್ತು ವಿವಾಹ ಸ್ಥಿತಿ ಇತ್ಯಾದಿಗಳನ್ನು ಕ್ರಮವಾಗಿ ಬರೆದು ಕುಟುಂಬದಲ್ಲಿ ಆಸ್ತಿ ವಿಭಾಗ ಮಾಡಿಕೊಳ್ಳುತ್ತಿರುವ ಕಾರಣದಿಂದಾಗಿ ಕೊಟ್ಟಿರುವ ಮಾಹಿತಿ ಪ್ರಕಾರವಾಗಿ ವಂಶಾವಳಿ ಪತ್ರ ನೀಡಬೇಕು ಎಂದು ವಿನಂತಿಸಿಕೊಳ್ಳಬೇಕು.
ಹೆಣ್ಣು ಮಕ್ಕಳಿರುವವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 25 ಸಾವಿರ ಆಸಕ್ತರು ಅರ್ಜಿ ಸಲ್ಲಿಸಿ.!
● ಹಾಗೆಯೇ ಕೊನೆಯಲ್ಲಿ ನೀಡಿರುವ ಎಲ್ಲಾ ಮಾಹಿತಿ ಸತ್ಯದಿಂದ ಕೂಡಿರುತ್ತದೆ ಎಂದು ನಾನು ನ್ಯಾಯಾಲಯ ದೇವರ ಮುಂದೆ ಸಾಕ್ಷಿಯಾಗಿ ಪ್ರಮಾಣೀಕರಿಸಿರುವುದು ನಿಜ ಇರುತ್ತದೆ. ಒಂದು ವೇಳೆ ಈ ಮಾಹಿತಿಗಳು ತಪ್ಪೆಂದು ಕಂಡುಬಂದಲ್ಲಿ ನಾನು ಯಾವುದೇ ಕಾಯ್ದೆ ಅನ್ವಯ ಶಿಕ್ಷೆಗೆ ಅರ್ಹನಾಗಿರುತ್ತವೆ ಎಂದು ಹೇಳಿ ಪ್ರಮಾಣಿಕರಿಸಿದ್ದು ನಿಜವಾಗಿರುತ್ತದೆ ಎಂದು ಬರೆದು ಆ ಪತ್ರದ ಎಡಭಾಗದಲ್ಲಿ ಸ್ಥಳ ಹಾಗು ದಿನಾಂಕ ಹಾಗೆ ಬಲಭಾಗದಲ್ಲಿ ನಿಮ್ಮ ಮತ್ತು ನಿಮ್ಮ ತಂದೆಯ ಹೆಸರು ಬರೆದು ಅದರ ಮೇಲೆ ನಿಮ್ಮ ಸಹಿ ಮಾಡಬೇಕು.
● ಈ ರೀತಿಯಾಗಿ ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ರೀತಿಯಾಗಿ ಅಫಿಡವಿಟ್ ಬರೆಯಬೇಕು.
● ಈ ಅಫಿಡವಿಟ್ ಗೆ ವಕೀಲರ ಸಮ್ಮುಖದಲ್ಲಿ ನೋಟರಿ ಮಾಡಿ ಅವರಿಂದ ಸಹಿ ಮಾಡಿಸಬೇಕು.
ಪ್ರಮುಖ ಅಂಶಗಳು:-
● ಬಿಳಿ ಹಾಳೆ ಮೇಲೆ ಕೂಡ ಬರೆಯಬಹುದು ಆದರೆ ಸ್ಟ್ಯಾಂಪ್ ಪೇಪರ್ ಮೇಲೆ ಅಫಿಡವಿಟ್ ಬರೆದಾಗ ಅದಕ್ಕೆ ಕಾನೂನು ರೂಪ ಬರುತ್ತದೆ.
● ಅಫಿಡವಿಟ್ ನಲ್ಲಿ ಸುಳ್ಳು ಮಾಹಿತಿಯನ್ನು ಬರೆಯುವಂತೆಯೇ ಇಲ್ಲ. ಸುಳ್ಳು ಮಾಹಿತಿ ಘೋಷಣೆ ಮಾಡಿದರೆ ಮುಂದೆ ನೀವೇ ಕಷ್ಟದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ.
● ಅಫಿಡವಿಟ್ ಬರೆಯುವಾಗ ನಿಮಗೂ ಘೋಷಣೆ ಬಗ್ಗೆ ಎಚ್ಚರ ಇರಬೇಕು, ಏಕೆಂದರೆ ಒಂದು ಬಾರಿ ಹೇಳಿಕೆ ನೀಡಿದ ಮೇಲೆ ನೀವು ಅದಕ್ಕೆ ಬದ್ಧರಾಗಿರಬೇಕು.
● ಕೆಲವೊಂದು ಸರ್ಕಾರಿ ಕಚೇರಿಗಳಲ್ಲಿ ನಿಗದಿತ ನಮೂನೆಯಲ್ಲೇ ಅಫಿಡವಿಟ್ ಬರೆಯಬೇಕು.