ಮನೆ ಕಟ್ಟಿಸುವಾಗ ರೂಮ್ ಗಳ ಸೈಜ್ ಎಷ್ಟಿರಬೇಕು.? ಮನೆ ಕಟ್ಟುವವರು ಈಗಲೇ ಈ ವಿಚಾರ ತಿಳಿದುಕೊಂಡರೆ ಪಶ್ಚಾತಾಪ ಪಡುವುದು ತಪ್ಪುತ್ತೆ‌.!

ಮನೆ ಕಟ್ಟಿಸುವುದು ಜೀವನದಲ್ಲಿ ಬಹಳ ಪ್ರಮುಖವಾದ ವಿಚಾರ ಸಾಲ ಮಾಡಿ ಅಥವಾ ಇದುವರೆಗೂ ಕೂಡಿಟ್ಟ ಹಣವನ್ನು ಬಳಸಿ ಮನೆ ಕಟ್ಟಿರುತ್ತೇವೆ. ನಾವು ನಮ್ಮ ಪರಿವಾರದ ಜೊತೆ ಸಂತೋಷವಾಗಿ ಅದರಲ್ಲಿ ಬದುಕಬೇಕು ಎನ್ನುವುದು ನಮ್ಮ ಮಹಾದಾಸೆ ಆಗಿರುತ್ತದೆ.

WhatsApp Group Join Now
Telegram Group Join Now

ಹೀಗೆ ಮಕ್ಕಳ ಹಿತ ದೃಷ್ಟಿಯಿಂದ ಮಾಡುವ ಮನೆ ವಾಸ್ತು ಪ್ರಕಾರವಾಗಿರಬೇಕು ಮತ್ತು ಸದ್ಯದ ಸಂದರ್ಭದಲ್ಲಿ ನಮಗೆ ಬಜೆಟ್ ವಿಚಾರದಲ್ಲಿ ಸಮಾಧಾನಕರವಾಗಿರಬೇಕು ಎನ್ನುವ ಎರಡು ಮುಖ್ಯ ಅಂಶಗಳ ಬಗ್ಗೆ ಎಲ್ಲರ ಗಮನ ಇರುತ್ತದೆ.

ಇದರ ಜೊತೆಗೆ ಇಂದು ಮನೆ ಕಟ್ಟಿದ ಮೇಲೆ ನಾಳೆ ದಿನ ನಮಗೆ ಕಿಚನ್ ದೊಡ್ಡದು ಮಾಡಿದೆವು ಇಷ್ಟು ಅವಶ್ಯಕತೆ ಇರಲಿಲ್ಲ, ಪಾರ್ಕಿಂಗ್ ಜಾಗ ಚಿಕ್ಕದಾಯಿತು ಕಾರ್ ನಿಲ್ಲಿಸಲು ಆಗುತ್ತಿಲ್ಲ, ಬೆಡ್ರೂಮ್ ಗಳನ್ನು ಒಂದು ದೊಡ್ಡದು ಒಂದು ಚಿಕ್ಕದು ಮಾಡಿದೆವು ಈಗ ಮಕ್ಕಳಿಗೆ ಆಗುತ್ತಿಲ್ಲ ಈ ರೀತಿಯ ಅನುಮಾನಗಳಾಗಲಿ ಬೇಸರಗಳಾಗಲಿ ಬರಬಾರದು.

 ಈ ಸುದ್ದಿ ಓದಿ:- ಕೇವಲ 2 ಘಂಟೆ ಕೆಲಸ ಮಾಡಿದರೆ ಸಾಕು, 80 ಸಾವಿರ ಸುಲಭವಾಗಿ ಸಂಪಾದನೆ ಮಾಡಬಹುದು.!

ಹಾಗಾಗಿ ಮನೆ ಕಟ್ಟುವಾಗಲೇ ಯಾವುದಕ್ಕೆ ಎಷ್ಟು ಸ್ಪೇಸ್ ಕೊಟ್ಟರೆ ಸರಿ ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದರ ಬಗ್ಗೆಯೇ ಈ ಲೇಖನದಲ್ಲಿ 30*40 ಸೈಟ್ 2BHK ಮನೆ ಲೆಕ್ಕಾಚಾರದಲ್ಲಿ ಯಾವುದು ಎಷ್ಟಿರಬೇಕು ಎನ್ನುವುದನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಮನೆ ಮಾಡುವಾಗ ಕೆಲವು ವಿಚಾರಗಳನ್ನು ವಾಸ್ತುಪ್ರಕಾರವಾಗಿ ಕೂಡ ಅನುಸರಿಸಲೇಬೇಕಾಗುತ್ತದೆ.

ಉದಾಹರಣೆಗೆ ಮನೆ ಮುಖ್ಯ ದ್ವಾರವು ಉಳಿದ ದ್ವಾರಗಳಿಗಿಂತ ದೊಡ್ಡದಾಗಿರಬೇಕು ಮಾಸ್ಟರ್ ಬೆಡ್ ರೂಮ್ ದೊಡ್ಡದಾಗಿರಬೇಕು ಇವು ವಾಸ್ತುವಿನಲ್ಲೂ ಕೂಡ ಇದೆ. ಇದನ್ನೆಲ್ಲ ಅನುಸರಿಸಿ ಯಾವುದು ಹೇಗಿದ್ದರೆ ಉತ್ತಮ ಎನ್ನುವುದನ್ನು ಕರ್ನಾಟಕದಲ್ಲಿ ಹೆಸರಾಂತ ಕನ್ಸ್ಟ್ರಕ್ಷನ್ ಕಂಪನಿಯ ಸಲಹೆ ಮೇರೆಗೆ ಪಟ್ಟಿಯನ್ನು ಹಂಚಿಕೊಳ್ಳುತ್ತಿದ್ದೇವೆ ನೀವು ಮನೆ ಕಟ್ಟುವಾಗ ಇವುಗಳನ್ನು ಪಾಲಿಸಿ ಹಾಗೆಯೇ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೂ ತಿಳಿಸಿ.

* ಈ ಮೇಲೆ ತಿಳಿಸಿದಂತೆ ಮನೆಯ ಪೂಜಾ ಕೊಠಡಿ ಅಥವಾ ಬೆಡ್ರೂಮ್ ಬಾಗಿಲು ಅಥವಾ ಯುಟಿಲಿಟಿ ಬಾಗಿಲು ಯಾವುದೇ ಆಗಲಿ ಮೂರು ಅಡಿ ಇದ್ದರೆ ಮುಖ್ಯ ದ್ವಾರವು ಮೂರವರೆಯಿಂದ ನಾಲ್ಕು ಅಡಿ ಇರಬೇಕು, ಟಾಯ್ಲೆಟ್ ಡೋರ್ ಎರಡೂವರೆ ಅಡಿ ಇಟ್ಟರು ನಡೆಯುತ್ತದೆ.

 ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ 3 ಸಿಹಿ ಸುದ್ದಿ.!

* ಮಾಸ್ಟರ್ ಬೆಡ್ರೂಮ್ 12*14 ಅಳತೆಯಲ್ಲಿ ಇರಲೇಬೇಕು, ಈ ಹಿಂದೆ 8*10 ಇದ್ದರೆ ಮಾಡಿಕೊಳ್ಳಲಾಗುತ್ತಿತ್ತು ಆದರೆ ಈಗ ಜನರೇಶನ್ ಚೇಂಜ್ ಆಗಿದೆ ಬೆಡ್ರೂಮ್ ದೊಡ್ಡದಿದ್ದರೆ ಅವರಿಗೆ ಕಂಫರ್ಟೆಬಲ್ ಮತ್ತು ಈಗ ಬರುತ್ತಿರುವ ಕಾಟ್ ಸೈಜ್ ಸಹಿತ ದೊಡ್ಡದಾಗಿರುವುದರಿಂದ ಈ ಅಳತೆಯಲ್ಲಿ ಮಾಸ್ಟರ್ ಬೆಡ್ರೂಮ್ ಇದ್ದರೆ ಉತ್ತಮ ಉಳಿದ ಬೆಡ್ರೂಮ್ ಗಳು ಕೂಡ ವಾರ್ಡ್ರೋಬ್ ಏರಿಯ ಬಿಟ್ಟು 10*12 ಇರಬೇಕು.

* ಕಿಚನ್ ಜನರಲ್ ಆಗಿ ಕಡಿಮೆ ಎಂದರು 8*8 ಮೆಜರ್ಮೆಂಟ್ ನಲ್ಲಿ ಇರಬೇಕು, ಒಂದು ವೇಳೆ ಜಾಗ ಇಲ್ಲವೇ ಇಲ್ಲ ಎಂದರೆ 6*8ಪ್ಲಾನ್ ಮಾಡಿದರೂ ಆಗುತ್ತದೆ. ಅದಕ್ಕಿಂತ ಕಡಿಮೆ ಇದ್ದರೆ ಪ್ರಯೋಜನವಿಲ್ಲ ಯಾಕೆಂದರೆ ಕಂಫರ್ಟೆಬಲ್ ಆಗಿ ಇರುವುದಿಲ್ಲ.

* ಯುಟಿಲಿಟಿ 3*6 ಅಥವಾ 8 ಫೀಟ್ ಅಳತೆಯಲ್ಲಿ ಇರಬೇಕು
* ಪೂಜೆಯ ಮನೆಯು ಚಿಕ್ಕದು ಎಂದರು ಕೂಡ 3*4 ಅಳತೆಯಲ್ಲಿ ಇರಬೇಕು, ಜಾಗ ತೋಟದಿದ್ದರೆ ಅಥವಾ ದೊಡ್ಡದಾಗಿ ಮಾಡಲು ಬಯಸಿದರೆ 4*5, 5*6 ಮಾಡಿಸಿದರೆ ಲಕ್ಷಣವಾಗಿರುತ್ತದೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಪಡೆಯಲು ಬಯಸಿದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now