ಅವಿನಾಶ್ ಮಾಳವಿಕಾ ಮಗನಿಗೆ ಇರುವ ಕಾಯಿಲೆ ಬಗ್ಗೆ ಗೊತ್ತದ್ರೆ ನಿಜಕ್ಕೂ ಆ.ಘಾ.ತ ಆಗುತ್ತೆ. ತನ್ನ ಮಗನ ಪರಿಸ್ಥಿತಿಯನ್ನು ನೆನೆದು ಕಣ್ಣೀರಿಟ್ಟ ಮಾಳವಿಕ. ಈ ವಿಡಿಯೋ ನೋಡಿ

ಸುಮಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆಯನ್ನು ಸಲ್ಲಿಸಿರುವ ಮಾಳವಿಕ ಅವಿನಾಶ್ ಅವರು ಕೆ ಜಿ ಎಫ್ ಚಿತ್ರದಲ್ಲಿನ “ಈವಾಗ ಏನ್ಮಾಡ್ತಾನೆ ನಿಮ್ ಹೀರೋ” ಎನ್ನುವ ಡೈಲಾಗ್ ಮೂಲಕ ಫೇಮಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಆಕ್ಟಿವ್ ಆಗಿ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಬಂಧುಗಳಾಗಿದ್ದಾರೆ. ಮಾಳವಿಕ ಅವಿನಾಶ್ ಅವರು ಭಾರತೀಯ ವಕ್ತಾರರಾಗಿದ್ದು 2013 ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ರಾಜಕೀಯದ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮವನ್ನು ಯಶಸ್ವಿ ಆಗಿ ನಡೆಸಿಕೊಟ್ಟಿದ್ದಲ್ಲದೆ ಕನ್ನಡ ಹಾಗೂ ತಮಿಳು ಚಿತ್ರರಂಗಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯಲ್ಲಿ 3ನೇ ರಾಂಕ್ ಪಡೆದಿರುವ ಇವರು 2001 ರಲ್ಲಿ ನಟ ಅವಿನಾಶ್ ಅವರನ್ನು ವಿವಾಹವಾಗುತ್ತಾರೆ. 90 ರ ದಶಕದಲ್ಲಿ ಜನಪ್ರಿಯ ಧಾರವಾಹಿ ಆಗಿದ್ದ ಮಾಯಮೃಗ ಧಾರವಾಹಿಯಲ್ಲಿ ಅವಿನಾಶ್ ಹಾಗೂ ಮಾಳವಿಕ ಇಬ್ಬರೂ ನಟಿಸಿದ್ದು ಉತ್ತಮ ಧಾರವಾಹಿಯಾಗಿ ಗುರುತಿಸಿಕೊಂಡಿದೆ.

ಕನ್ನಡ ಹಾಗೂ ತಮಿಳು ಎರಡೂ ಭಾಷೆಗಳಲ್ಲಿಯೂ ಅನೇಕ ಚಿತ್ರಗಳಲ್ಲಿ ನಟಿಸಿರುವ ಮಾಳವಿಕ ಅವಿನಾಶ್ ಅವರು ಪ್ರಸ್ತುತ ಜೀ ಕನ್ನಡದಲ್ಲಿ ಪ್ರಸಾರವಾಗುವ ಜೋಡಿ ನಂಬರ್ ಒನ್ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡು ಡ್ಯಾನ್ಸ್ ಕರ್ನಾಟಕ ಡಾನ್ಸ್ ಹಾಗೂ ಈ ಜೋಡಿ ನಂಬರ್ ಒನ್ ಶೋ ಗಳ ಮಹಾಸಂಗಮ ನಡೆದಿದ್ದು ಈ ಸಂದರ್ಭದಲ್ಲಿ ನಡೆದ ಭಾವುಕ ಘಟನೆ ಇದಾಗಿದೆ. ಈ ಮಹಾಸಂಗಮದಲ್ಲಿ ಡಿ ಕೆ ಡಿ ವೇದಿಕೆಯಲ್ಲಿ ಸಹನಾ ಎನ್ನುವ ಹುಡುಗಿ ಬೆಟ್ಟದ ಅಂಚಿದ ಎನ್ನುವ ಕನ್ನಡದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಎಲ್ಲರ ಮನ ಸೆಳೆಯುತ್ತಾಳೆ.

ಈ ಸಹನಾ ಎಂಬ ಹುಡುಗಿಗೆ ಕಿವಿ ಕೇಳಿಸುವುದಿಲ್ಲ ವಿಶೇಷ ಚೇತನಳಾಗಿರುವ ಈ ಹುಡುಗಿಯನ್ನು ನೋಡಿದ ತಕ್ಷಣ ಮಾಳವಿಕ ಅವಿನಾಶ್ ಅವರಿಗೆ ತಮ್ಮ ಮಗನ ನೆನಪಾಗಿ ಕಣ್ಣಂಚಿನಲ್ಲಿ ನೀರು ದುಮ್ಮಿಕ್ಕುತ್ತದೆ. ಇದಕ್ಕೆ ಕಾರಣ ಮಾಳವಿಕ ಅವರ ಪುತ್ರ ಒಬ್ಬ ಬುದ್ಧಿಮಾಂಧ್ಯ ಹುಡುಗನಾಗಿದ್ದು ಆತನ ಪರಿಸ್ಥಿತಿ ನೆನೆದು ಒಮ್ಮೆಲೆ ಭಾವುಕರಾಗುತ್ತಾರೆ. ಅಲ್ಲದೇ ಇದರ ಬಗ್ಗೆ ಮಾತನಾಡಿ ದೇವರ ಸೃಷ್ಟಿಯೇ ಹೀಗೆ ಯಾವುದನ್ನೊ ಕೊಟ್ಟು ಇನ್ನೊಂದನ್ನು ಕಸಿದುಕೊಳ್ಳುತ್ತಾನೆ.

ಯಾವ ಮಕ್ಕಳು ಸಹ ಹೀಗೆ ಹುಟ್ಟಬೇಕು ಎಂದುಕೊಂಡು ಹುಟ್ಟುವುದಿಲ್ಲ ಎಂದು ಭಾವುಕ ನುಡಿಗಳನ್ನು ಆಡುತ್ತಾರೆ. ಮಾಳವಿಕ ಅವಿನಾಶ್ ಮಗನಿಗೆ ಮಾತನಾಡಲು ಬರುವುದಿಲ್ಲ ಹಾಗೂ ನಡೆಯಲು ಕೂಡ ಆಗುವುದಿಲ್ಲ ಎಂದು ಮಾಳವಿಕ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಚಿಕ್ಕ ವಯಸ್ಸಿನಿಂದಲೂ ಡಾಕ್ಟರ್ ರಾಜ್ ಕುಮಾರ್ ಹಾಗೂ ಶಿವಣ್ಣ ಅರ್ಜುನ್ ಜನ್ಯ ಅವರ ಸಂಗೀತ ಎಂದರೆ ತಮ್ಮ ಮಗನಿಗೆ ಇಷ್ಟವೆಂದು ಹೇಳಿ ನನ್ನ ಮಗನಿಗೆ 6-8 ತಿಂಗಳು ಇರುವಾಗ ಅಂದಿನಿಂದಲೂ ಸಂಗೀತದಲ್ಲಿ ಉತ್ತಮ ಅಭಿರುಚಿ ಇದೆ ಹೇಳುತ್ತಾರೆ.

ಇನ್ನು ವೇದಿಕೆ ಮೇಲೆ ಮಾಳವಿಕ ಅವರು ಡಾಕ್ಟರ್ ರಾಜ್ ಕುಮಾರ್ ಹಾಗೂ ಶಿವಣ್ಣ ಅವರ ಹಾಡನ್ನು ತೋರಿಸಿ ಮಗನಿಗೆ ಉಣ ಬಡಿಸುತ್ತಿದ್ದ ವಿಡಿಯೋ ಅನ್ನು ಪ್ರಸಾರ ಮಾಡಿದಾಗ ಎಲ್ಲರೂ ಒಂದು ಕ್ಷಣ ಭಾವುಕರಾಗುತ್ತಾರೆ. ಇದರ ಕುರಿತು ಪ್ರತಿಕ್ರಿಯಿಸಿದ ಅರ್ಜುನ್ ಜನ್ಯ ಅವರು ನಿಮ್ಮ ಪುತ್ರನ ಸಂಗೀತದ ಅಭಿರುಚಿಗೆ ಸರಸ್ವತಿ ಸುಬ್ರಮಣ್ಯರು ಕುಳಿತು ನೋಡುತ್ತಾ ಹರಸುತ್ತಿರುತ್ತಾರೆ ಹೀಗಾಗಿ ನಿಮ್ಮ ಪುತ್ರ ವಿಶೇಷ ಚೇತನನಂತೆ ನನಗೆ ಕಾಣಿಸುತ್ತಿಲ್ಲ ನಾನು ನಿಮ್ಮ ಮಗನ ಬಳಿಯೇ ಬಂದು ಹಾಡುವೆ ಎಂದು ಸಂತೈಸುವ ನುಡಿಗಳನ್ನು ಆಡುತ್ತಾರೆ.

https://www.instagram.com/tv/CiEv2cJqgPb/?igshid=YmMyMTA2M2Y=

Leave a Comment

%d bloggers like this: