ಈಗಿನ ಕಾಲದಲ್ಲಿ ಉದ್ಯೋಗ ಅಥವಾ ವಿದ್ಯಾಭ್ಯಾಸದ ಕಾರಣಕ್ಕಾಗಿ ಗ್ರಾಮಗಳನ್ನು ಬಿಟ್ಟು ಬೇರೆ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಬಂದು ನೆಲೆಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರೀತಿ ಬರುವವರು ವಾಸಕ್ಕಾಗಿ ಬಾಡಿಗೆ ಮನೆಗಳನ್ನೇ ಅನುಸರಿಸುತ್ತಾರೆ. ಬಾಡಿಗೆ ಮನೆಯಲ್ಲಿ ವಾಸಕ್ಕೆ ಹೋಗುವ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು.
ಇದು ಬಾಡಿಗೆದಾರರು ಹಾಗೂ ಮಾಲೀಕರು ಇಬ್ಬರಿಗೂ ಕೂಡ ಜವಾಬ್ದಾರಿಯ ವಿಷಯ ಇಲ್ಲವಾದಲ್ಲಿ ಮುಂದೊಂದು ದಿನ ಕಾನೂನಿನ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ಬಾಡಿಗೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾದ ವಿಷಯ ಮತ್ತು ಯಾಕೆ ಇದು ಯಾವಾಗಲೂ 11 ತಿಂಗಳಿಗೆ ಇರುತ್ತದೆ ಎನ್ನುವ ವಿಷಯದ ಬಗ್ಗೆ ಈ ಅಂಕಣದಲ್ಲಿ ಕೆಲ ಉಪಯುಕ್ತ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ತಂದೆಯ ಹೆಸರಿನಲ್ಲಿ ಇರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡುವುದು ಹೇಗೆ ನೋಡಿ.!
ಪ್ರತಿಯೊಬ್ಬರು ಕೂಡ ಈ ರೆಂಟ್ ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು. ಕೆಲವೊಮ್ಮೆ ನಿಮಗೆ ಲೋನ್ ತೆಗೆದುಕೊಳ್ಳುವಾಗ ಅಥವಾ ಪಡಿತರ ಚೀಟಿ ಅಥವಾ ಮನೆಗೆ ಗ್ಯಾಸ್ ಸಂಪರ್ಕ ಪಡೆದುಕೊಳ್ಳುವುದು ಅಥವಾ ಕೆಲಸಕ್ಕೆ ಸೇರುವಾಗ ವಿಳಾಸದ ಪುರಾವೆಯಾಗಿ ಇನ್ನಿತರ ಸಂದರ್ಭದಲ್ಲಿ ಇದು ಅನುಕೂಲಕ್ಕೆ ಬರುತ್ತದೆ.
ಈ ಬಾಡಿಗೆ ಅಗ್ರಿಮೆಂಟ್ ನಲ್ಲಿ ನೀವು ಬಾಡಿಗೆಗೆ ಹೋದ ದಿನಾಂಕ ಮತ್ತು ಪ್ರತಿ ತಿಂಗಳ ಬಾಡಿಗೆಗೆ ಎಷ್ಟು ನೀರಿನ ಶುಲ್ಕ, ಕರೆಂಟ್ ಬಿಲ್ ಇತ್ಯಾದಿಗಳನ್ನು ಹೇಗೆ ಪಾವತಿಸಬೇಕು ಮತ್ತು ಖಾಲಿ ಮಾಡಿಸುವಾಗ ಮೂರು ತಿಂಗಳ ಮುಂಚೆ ಹೇಳಬೇಕು ಒಂದು ವೇಳೆ ಇವರೇ ಈ 11 ತಿಂಗಳ ಮಧ್ಯದಲ್ಲಿ ಖಾಲಿ ಮಾಡುವುದಾದರೆ ಮೂರು ತಿಂಗಳು ಮುಂಚೆ ಮಾಲೀಕರಿಗೆ ತಿಳಿಸಬೇಕು.
ಈ ಸುದ್ದಿ ಓದಿ:- ಇಂದಿನಿಂದ ಬ್ಯಾಂಕ್ ಅಕೌಂಟ್, ಸಿಲಿಂಡರ್, ಫಾಸ್ಟ್ ಟ್ಯಾಗ್ ನಿಯಮದಲ್ಲಿ ಬದಲಾವಣೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಮತ್ತು ಆ ಸಮಯದಲ್ಲಿ ಪೇಂಟ್ ಚಾರ್ಜ್ ಹಾಗೂ ಇಂತಹ ಯಾವುದೇ ವಸ್ತು ಹಾನಿಯಾಗಿದ್ದರೆ ಅದಕ್ಕೆ ಹಣ ಕಡಿತಗೊಳಿಸುವ ಬಗ್ಗೆ ಹಾಗೂ ಮನೆಗೆ ಯಾವ ಸ್ವರೂಪದಲ್ಲಿದೆ ಎಷ್ಟು ಅಳತೆಯಲ್ಲಿದೆ, ಏನೆಲ್ಲಾ ಸೌಲಭ್ಯಗಳು ಮನೆಯಲ್ಲಿ ಇದೆ ಎನ್ನುವುದರ ವಿವರ ಬರೆಯಲಾಗಿರುತ್ತದೆ. ಮನೆ ಮಾಲೀಕರ ಹೆಸರು ಸಹಿ ಹಾಗೂ ಬಾಡಿಗೆದಾರರ ಹೆಸರು ಸಹಿ ಮತ್ತು ಸಾಕ್ಷಿಗಳ ಸಹಿಯು ಕೂಡ ಇದರಲ್ಲಿ ಇರುತ್ತದೆ ಇದನ್ನು 11 ತಿಂಗಳಿಗೆ ಮಾಡಿಸಲಾಗುತ್ತದೆ.
ಯಾಕೆಂದರೆ 1908 ಆಕ್ಟ್ ಪ್ರಕಾರ 11 ತಿಂಗಳಿಗಿಂತ ಹೆಚ್ಚಿನ ಸಮಯಕ್ಕೆ ಮಾಡಲಾಗುವ ಅಗ್ರಿಮೆಂಟ್ ಸ್ಟ್ಯಾಂಪ್ ಡ್ಯೂಟಿ ಚಾರ್ಜಸ್ ಅಪ್ಲೈ ಆಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ 11 ತಿಂಗಳಿಗೆ ಈ ರೆಂಟ್ ಅಗ್ರಿಮೆಂಟ್ ಮಾಡಲಾಗುತ್ತದೆ. ಒಂದು ವೇಳೆ 11 ತಿಂಗಳಿಗಿಂತ ಹೆಚ್ಚಿನ ಸಮಯ ಅದೇ ಮನೆಯಲ್ಲಿ ಇರಲು ಇಚ್ಚಿಸಿದ್ದಲ್ಲಿ ಇದನ್ನು ರಿನೀವಲ್ ಮಾಡಿಕೊಳ್ಳಬಹುದು ಅಥವಾ ಇನ್ನಿತರ ಅಡ್ವಾನ್ಸ್ ಹೆಚ್ಚಾಗುವುದು ಅಥವಾ ಇನ್ನಷ್ಟು ಫೆಸಿಲಿಟಿಗಳು ಹೆಚ್ಚಾದಾಗ ಹೊಸ ಅಗ್ರಿಮೆಂಟ್ ಮಾಡಿಸಿಕೊಳ್ಳಬೇಕು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ & ಅನ್ನಭಾಗ್ಯ ಹಣ ಪಡೆಯಲು NPCI ಮಾಡಿಸುವುದು ಕಡ್ಡಾಯ.! NPIC ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!
ಇದು ಬಾಡಿಗೆದಾರರಿಗೆ ಮಾತ್ರವಲ್ಲದೇ, ಮಾಲೀಕರಿಗೆ ಕೂಡ ಅಗತ್ಯ ಅವಶ್ಯಕತೆ ಇದೆ. ಯಾಕೆಂದರೆ ಯಾವುದೇ ಅಗ್ರಿಮೆಂಟ್ ಮಾಡಿಸದೆ ನೀವು ಅವರ ಬಳಿ ಬಾಡಿಗೆ ಹಣದ ರೂಪದಲ್ಲಿ ತೆಗೆದುಕೊಂಡು ಬರುತ್ತಿದ್ದರೆ 12 ವರ್ಷಗಳು ಮುಗಿದ ಬಳಿಕ ಅವರು ಅದೇ ಮನೆಯಲ್ಲಿ ವಾಸವಿದ್ದರೆ ಅದನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಕ್ಕು ಸ್ವಾಧೀನಕ್ಕೆ ಅರ್ಜಿ ಸಲ್ಲಿಸಬಹುದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ.
ಈ ಸಮಸ್ಯೆ ಆಗಬಾರದು ಎಂದರೆ ಮಾಲೀಕರು ಕೂಡ ತಮ್ಮ ಸಾಕ್ಷಿಗಾಗಿ ರೆಂಟ್ ಅಗ್ರಿಮೆಂಟ್ ದಾಖಲೆ ಮಾಡಿಕೊಳ್ಳಬೇಕು ಮತ್ತು ಮನೆಗೆ ಬಾಡಿಗೆ ಬರುವವರ ಬಗ್ಗೆ ವಿಚಾರಿಸಿ ಅವರ ಆಧಾರ್ ಕಾರ್ಡ್ ಮುಂತಾದ ಜೆರಾಕ್ಸ್ ಗಳನ್ನು ದಾಖಲೆಯಾಗಿ ಪಡೆದುಕೊಂಡು ಮನೆ ಬಾಡಿಗೆಗೆ ಕೊಡುವುದು ಉತ್ತಮ.