ಒಂದು ಎಕರೆಗೆ 45 ಲಕ್ಷ ಲಾಭ ತಂದು ಕೊಟ್ಟ ಕೃಷಿ.! ಸಖತ್ ಲಾಭ ತಂದು ಕೊಡುವ ಸದಾಕಾಲವೂ ಬೇಡಿಕೆ ಇರುವ ಬೆಳೆ ಇದು.!

 

WhatsApp Group Join Now
Telegram Group Join Now

ಕೃಷಿ ಎನ್ನುವುದು ಬಹಳ ಸಮಾಧಾನ ಕೊಡುವ ಒಂದು ಸಂಗತಿಯಾಗಿದೆ. ಯಾಕೆಂದರೆ ಪ್ರತಿನಿತ್ಯವೂ ಕೂಡ ನಾವು ನಮ್ಮ ಜಮೀನಿನಲ್ಲಿ ಒಡನಾಟ ಇಟ್ಟುಕೊಂಡು ಪ್ರಕೃತಿ ಜೊತೆಗೆ ಸಮಯ ಕಳೆಯಬಹುದು. ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಮಾಡಿಕೊಂಡು ಹೇಗೋ ಜೀವನ ನಿರ್ವಹಣೆ ಮಾಡಿಕೊಂಡು ಹೋಗಬಹುದು.

ಅದರಲ್ಲೂ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಪಡೆದು ಐಷಾರಾಮಿ ಬದುಕು ಕೂಡ ಬದುಕಬಹುದು. ಹೀಗಾಗಿ ಕೃಷಿಯಲ್ಲಿರುವ ಮಹತ್ವವನ್ನು ಅರಿತ ಎಷ್ಟೋ ಯುವಜನತೆ ಓದಿ ಉತ್ತಮ ಹುದ್ದೆಯಲ್ಲಿ ಇದ್ದರೂ ಕೂಡ ಅದನ್ನು ತ್ಯಜಿಸಿ ಹಳ್ಳಿಗಳಿಗೆ ಬಂದು ನೆಲೆಸಿ ಆರಾಮಾಗಿ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ನೀವು ಕೂಡ ಆಸಕ್ತರಾಗಿದ್ದರೆ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಮಾಹಿತಿ ನಿಮಗೆ ಇಷ್ಟವಾಗಬಹುದು.

ಈ ಸುದ್ದಿ ಓದಿ:- ಗೋಮಾಳ ಜಮೀನನ್ನು ಸಕ್ರಮ ಮಾಡಿಕೊಳ್ಳುವುದು ಹೇಗೆ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!

ಕನಿಷ್ಠ ಒಂದು ಎಕರೆ ಇದ್ದರೂ ಕೂಡ ಒಂದೇ ಬೆಳೆಗೆ ಎಕರೆಗೆ 45 ಲಕ್ಷ ಲಾಭ ಕೊಡುವಂತಹ ದಾಳಿಂಬೆ ಕೃಷಿಯನ್ನು ಮಾಡಿದರೆ, ಕೃಷಿ ಮಾಡಿ ಲಾಭ ಮಾಡಬೇಕು ಎಂದುಕೊಳ್ಳುವ ಎಲ್ಲರಿಗೂ ಕೂಡ ತಮ್ಮ ಕನಸು ಕೈಗೆಟಕಿದ ಸಮಾಧಾನ ಸಿಗುತ್ತದೆ. ಈಗಾಗಲೇ ಬೆಂಗಳೂರಿನ ಸಮೀಪದ ದೇವನಹಳ್ಳಿ ಭಾಗದಲ್ಲಿ ಬರುವ ಗ್ರಾಮವೊಂದರ ಮಹಿಳೆಯೊಬ್ಬರು ತಾವು ಸಹ ಏನು ತಿಳಿಯದ ಸಮಯದಲ್ಲೂ ದಾಳಿಂಬೆ ಕೃಷಿ ಮಾಡುವ ಧೈರ್ಯ ಮಾಡಿ ಯಶಸ್ವಿ ಆಗಿದ್ದೇನೆ ಎಂದು ಹೇಳುತ್ತಿದ್ದಾರೆ.

ಈ ದಾಳಿಂಬೆ ಕೃಷಿ ಮಾಡುವುದರ ಬಗ್ಗೆ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಳ್ಳುವ ಇವರು ದಾಳಿಂಬೆ ಕೃಷಿಯಲ್ಲಿ ಮಿಶ್ರಬೆಳೆಯಾಗಿ ಮಧ್ಯದಲ್ಲಿ ಹಾಗಲ ಅಥವಾ ಇನ್ಯಾವುದೇ ತರಕಾರಿ ಕೂಡ ಬೆಳೆಯಬಹುದು ಬಹಳ ಬೇಗ ಅವು ಬರುತ್ತವೆ ದಾಳಿಂಬೆ ವರ್ಷಕ್ಕೊಂದು ಬೆಳೆ ಆಗಿರುವುದರಿಂದ ದೊಡ್ಡ ಮಟ್ಟದ ಲಾಭ ಕೊಟ್ಟರೆ ಜೀವನ ನಿರ್ವಹಣೆಗೆ ಈ ಚಿಕ್ಕ ಪುಟ್ಟ ತರಕಾರಿಯಿಂದ ಬರುವ ಆದಾಯ ನಡೆಯುತ್ತದೆ.

ಈ ಸುದ್ದಿ ಓದಿ:- ಕುಕ್ಕರ್ ಬಳಸುವವರು ತಪ್ಪದೆ ನೋಡಿ.! ಯಾವುದೇ ಕಾರಣಕ್ಕೂ ಈ 4 ತಪ್ಪುಗಳನ್ನು ಮಾಡಬೇಡಿ, ಇಲ್ಲ ಅಂದ್ರೆ ಕುಕ್ಕರ್ ಬ್ಲಾ-ಸ್ಟ್ ಆಗುತ್ತದೆ.!

ದಾಳಿಂಬೆ ಕೃಷಿಗೆ ಮೊದಮೊದಲಿಗೆ ಹೆಚ್ಚಿಗೆ ಬಂಡವಾಳ ಹಾಕಬೇಕು ಯಾಕೆಂದರೆ ಸುತ್ತ ನಾವು ಕಾವಲಿಗೆ ಬೇಲಿ ಹಾಕಿಸುವುದರಿಂದ ಹಿಡಿದು ಗಿಡ ತಂದು ಕಸಿಮಾಡಿ ಅದನ್ನು ಒಂದು ವರ್ಷದ ತನಕ ಸಾಕಬೇಕು ಆದರೆ ಒಂದು ಬಾರಿ ಬೆಳೆ ಬಂದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ಕಳೆಯುತ್ತದೆ ಅಷ್ಟು ಚೆನ್ನಾಗಿ ಲಾಭ ಕೊಡುತ್ತದೆ.

ಯಾಕೆಂದರೆ ದಾಳಿಂಬೆ ಒಂದು ಉತ್ತಮ ಪೋಷಕಾಂಶಯುಕ್ತ ಆಹಾರ ಹಾಗಾಗಿ ಬಹಳ ಬೇಡಿಕೆ ಇದೆ ಯಾವಾಗಲೂ ಕನಿಷ್ಠ 150 ರೂಪಾಯಿಗಿಂತ ಖಂಡಿತವಾಗಿ ಹೆಚ್ಚಿನ ರೇಟ್ ಇದ್ದೇ ಇರುತ್ತದೆ. KG ಗೆ ರೂ.100 ಸಿಕ್ಕಿದರು ಸಾಕು ನಿಮ್ಮ ಖರ್ಚು ಕಳೆದು ಕೈ ತುಂಬಾ ಹಣ ಬರುತ್ತದೆ.

ಈ ಸುದ್ದಿ ಓದಿ:- ಅರಣ್ಯ ಇಲಾಖೆಯಲ್ಲಿ ಬೃಹತ್ ಉದ್ಯೋಗವಕಾಶ, 1000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ, ವೇತನ 50,000/- ಆಸಕ್ತರು ಅರ್ಜಿ ಸಲ್ಲಿಸಿ.!

ವರ್ಷದಲ್ಲಿ ಯಾವ ತಿಂಗಳು ಬೇಕಾದರೂ ಇಳುವರಿ ತೆಗೆಯಬಹುದು ಆದರೆ ಮಳೆಗಾಲವನ್ನು ಆರಿಸಿಕೊಳ್ಳುವುದು ಬೇಡ ಎನ್ನುವ ಸಲಹೆ ನೀಡುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ನೀವು ಇದಕ್ಕೆ ಕಟಿಂಗ್ ಮಾಡಬೇಕು ಆಗ ಅದಾದ 180 ದಿನ ಅಂದರೆ ಆರು ತಿಂಗಳಿಗೆ ಫಲ ಕೊಡಲು ಶುರು ಮಾಡುತ್ತದೆ.

ಇಳುವರಿ ಚೆನ್ನಾಗಿ ಆಗಬೇಕು ಎಂದರೆ ಮುಖ್ಯವಾಗಿ ಆ ದಾಳಿಂಬೆ ತೋಟದಲ್ಲಿ ಜೇನು ಇರಬೇಕು ಹಾಗಾಗಿ ಜೇನು ಪೆಟ್ಟಿಗೆ ತಂದು ಜೇನು ಸಾಕಾಣಿಕೆ ಮಾಡಿದರೆ ನಿಮ್ಮ ನಿರೀಕ್ಷೆಗೂ ಮೀರಿ ಹೆಚ್ಚಿನ ಇಳುವರಿ ಪಡೆಯಬಹುದು ಎನ್ನುತ್ತಾರೆ ಇವರು. ಇವರು ಹೇಳಿದ ಪ್ರಕಾರವಾಗಿ ಎಕರೆಗೆ ಮೊದಲ ಬೆಳೆಯಲಿ 45 ಲಕ್ಷ ಲಾಭ ಬಂದಿತ್ತಂತೆ. ಈ ವಿಚಾರವಾಗಿ ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಿ.

ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರ ಇಬ್ಬರು ಮಕ್ಕಳ ಮದುವೆಗೂ ಸಿಗುತ್ತೆ ತಲಾ 50,000 ಸಹಾಯಧನ.!

ವಿಳಾಸ:-
ಪುಷ್ಪ ದೇವರಾಜ್,
ಬೊಮ್ಮಾವರ,
ದೇವನಹಳ್ಳಿ ತಾಲೂಕು,
ಬೆಂಗಳೂರು ಗ್ರಾಮಾಂತರ,
ಮೊಬೈಲ್ ಸಂಖ್ಯೆ 9900240444.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now