ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು (Congress) ಚುನಾವಣೆಗೂ ಪೂರ್ವ ನೀಡಿದ್ದ ವಾಗ್ದಾನದಂತೆ ಬಹು ನಿರೀಕ್ಷಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು (Gruha lakshmi scheme) ಯಶಸ್ವಿಯಾಗಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನವನ್ನು ಮಾಡುತ್ತಿದೆ.
ಅಂಕಿ ಅಂಶಗಳ ಪ್ರಕಾರ ರಾಜ್ಯದ 1.17 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ರೂ.2,000 ಹಣ ಪಡೆಯಲು ಅರ್ಹರಾಗಿದ್ದರು ಇನ್ನು ಅನೇಕರು ಒಂದು ಕಂತಿನ ಹಣ ಕೂಡ ಪಡೆಯಲು ಸಾಧ್ಯವಾಗಿಲ್ಲ. ಡಿಸೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Camp) ನಡೆಸಿ.
ಈ ಸುದ್ದಿ ಓದಿ:- ಆಡು, ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ರೈತರಿಗೆ PMEGP ಯೋಜನೆಯಡಿ 20 ದಿನಗಳಲ್ಲಿ ಸಿಗಲಿದೆ 20 ಲಕ್ಷ ಲೋನ್ 7 ಲಕ್ಷ ಸಬ್ಸಿಡಿ ಸಿಗುತ್ತೆ.!
ಸಮಸ್ಯೆ ಬಗ್ಗೆ ಹರಿಸಿಕೊಡಲು ಪ್ರಯತ್ನಿಸಲಾಗಿದೆ ಮತ್ತು ಈ ಕ್ಯಾಂಪ್ ಉದ್ದೇಶ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳಿಗೂ ಹಣವನ್ನು ತಲುಪಿಸಬೇಕು ಎನ್ನುವುದಾಗಿದೆ. ಈಗ ಯೋಜನೆ ಯಶಸ್ವಿಯಾಗಿ 5 ಕಂತುಗಳನ್ನು ಪೂರೈಸಿ 6ನೇ ಕಂತಿನ ಹಣ ಬಿಡುಗಡೆಯ ಹಂತದಲ್ಲಿದೆ. ಆದರೆ ಈ ಬಾರಿ ಗೃಹಲಕ್ಷ್ಮಿ ಯೋಜನೆ ಕುರಿತು ಒಂದು ಮಹತ್ವವಾದ ವಿಷಯ ಇದೆ.
ಆದೇನೆಂದರೆ, 6ನೇ ತಿಂಗಳ ಹಣ ಬಿಡುಗಡೆಯಾಗುವ ಸಮಯದಲ್ಲಿ 26,000 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದರು ಅವರಿಗೆ ಹಣ ಸಿಗುವುದಿಲ್ಲ. ಆಶ್ಚರ್ಯಕರ ಸಂಗತಿ ಏನೆಂದರೆ, ಈ ಮಹಿಳೆಯರು ಇಲ್ಲಿಯವರೆಗೆ 5 ಕಂತುಗಳ ಹಣ ಪಡೆದಿದ್ದರೂ ಕೂಡ ಅವರಿಗೆ 6ನೇ ಕಂತಿನ ಹಣ ಪಡೆಯಲು ಆಗುವುದಿಲ್ಲ. ಇದರಿಂದ ಸಾಕಷ್ಟು ಮಹಿಳೆಯರು ಕಂಗಲಾಗಿದ್ದಾರೆ.
ಈ ಸುದ್ದಿ ಓದಿ:- 1500 ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ, PUC ಪಾಸ್ ಆದವರು ಅರ್ಜಿ ಸಲ್ಲಿಸಬಹುದು.!
ಆದರೆ ಸರ್ಕಾರ ಇದರ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದು ಒಂದು ಸಮಾಧಾನಕರ ವಿಷಯವನ್ನು ಕೂಡ ತಿಳಿಸಿದೆ. ಈ ರೀತಿ ಅರ್ಹರಾಗಿದ್ದರು ಅವರಿಗೆ 6ನೇ ಕಂತಿನಲ್ಲಿ ಹಣ ತಲುಪದೇ ಇರಲು ಕಾರಣವಿದೆ. ಅದೇನೆಂದರೆ, ಸರ್ಕಾರ ಈ ಹಿಂದೆಯೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಒಂದೇ ಒಂದು ಕಂಡೀಶನ್ ಹೇರಿತ್ತು.
ಯಾವುದೇ ಸರ್ಕಾರಿ ನೌಕರಿ (government job) ಉದ್ಯೋಗದಲ್ಲಿರುವ ಕುಟುಂಬದ ಮಹಿಳೆಯರು ಅಥವಾ ಮನೆಯಲ್ಲಿ ಯಾರೇ ಆದಾಯ ತೆರಿಗೆ ಪಾವತಿ (tax payer) ಮಾಡುವ ಸದಸ್ಯರು ಇದ್ದಲ್ಲಿ ಅಂತಹವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎದ್ದು ಹೇಳಿತ್ತು. ಆದರೆ ಇದನ್ನು ಮೀರಿ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿ:- ಬಾಡಿಗೆ ಅಥವಾ ಲೀಸ್ ಅಗ್ರಿಮೆಂಟ್ ಕೇವಲ 11 ತಿಂಗಳಿಗೆ ಮಾತಗರ ಇರುತ್ತದೆ ಯಾಕೆ ಗೊತ್ತಾ.?
ಸುಮಾರು 80,000 ಮಹಿಳೆಯರು ಈ ರೀತಿ ಅರ್ಹತೆ ಮಾನದಂಡ ಮೀರಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ಅಂತಹ ಅರ್ಜಿಗಳನ್ನು ಗುರುತಿಸಿ ಅವುಗಳನ್ನು ವಜಾ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ದುರದೃಷ್ಟವಶಾತ್ ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆಯಿಂದ ಎಡವಟ್ಟಾಗಿ 26,000 ಮಹಿಳೆಯರು ಅರ್ಹರಾಗಿದ್ದರು ಕೂಡ ಅವರ ಹೆಸರು ಈ ಪಟ್ಟಿಯಲ್ಲಿ ಸೇರಿಬಿಟ್ಟಿದೆ.
ಹಾಗಾಗಿ 6ನೇ ಕಂತಿನ ಹಣ ಪಡೆಯುವ ಸಮಯದಲ್ಲಿ ಇಂತಹ ಮಹಿಳೆಯರಿಗೆ ಹಣ ಬರುವುದಿಲ್ಲ. ಈ ವಿಚಾರ ಸರ್ಕಾರದ ಗಮನಕ್ಕೂ ಬಂದಿರುವುದರಿಂದ ಶೀಘ್ರವಾಗಿ ಈ ಸಮಸ್ಯೆ ಪರಿಹಾರ ಮಾಡುವುದರ ಬಗ್ಗೆ ಸರ್ಕಾರ ಭರವಸೆ ನೀಡಿದೆ ಮತ್ತು 6ನೇ ಕಂತಿನಲ್ಲಿ ಅರ್ಹರಾಗಿದ್ದರು. ಈ ಒಂದು ಕಾರಣದಿಂದ ಹಣ ಪಡೆಯಲಾಗದ ಮಹಿಳೆಯರಿಗೆ 7ನೇ ಕಂತಿನ ಹಣ ಪಡೆಯುವ ಸಮಯದಲ್ಲಿ ಎರಡು ಕಂತಿನ ಹಣವನ್ನು ಒಟ್ಟಿಗೆ ನೀಡುವ ಭರವಸೆಯನ್ನು ನೀಡಿದೆ.
ಈ ಸುದ್ದಿ ಓದಿ:- ತಂದೆಯ ಹೆಸರಿನಲ್ಲಿ ಇರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡುವುದು ಹೇಗೆ ನೋಡಿ.!
ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ಚೆಕ್ ಮಾಡುವುದರಿಂದ ನಿಮ್ಮ ಹೆಸರು ಕೂಡ ಈ ಪಟ್ಟಿಯಲ್ಲಿ ಇದೆಯೇ ಎಂದು ತಿಳಿದುಕೊಳ್ಳಬಹುದು ಅದಕ್ಕಾಗಿ ಈ ವಿಧಾನವನ್ನು ಅನುಸರಿಸಿ:-
* https://mahitikanaja.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಮಾಹಿತಿ ಕಣಜ ವೆಬ್ಸೈಟ್ ಗೆ ಹೋಗುತ್ತೀರಿ
* ಗೃಹಲಕ್ಷ್ಮಿ ಯೋಜನೆಯನ್ನು ಸರ್ಚ್ ಮಾಡಿ ನಿಮ್ಮ ರೇಷನ್ ಕಾರ್ಡ್ (Ration Card) ಸಂಖ್ಯೆಯನ್ನು ಹಾಕಿ ಸ್ಟೇಟಸ್ (Status) ಚೆಕ್ ಮಾಡಿ.
* Status ನಲ್ಲಿ Approved ಎಂದು ಇದ್ದರೆ ಯಾವುದೇ ಸಮಸ್ಯೆ ಇಲ್ಲ GST Payers ಎಂದು ತೋರಿಸುತ್ತಿದ್ದರೆ ಅದರ ಅರ್ಥ ನೀವು ಆದಾಯ ಪಾವತಿದಾರರಾಗಿದ್ದೀರಿ ಎಂದು, ನೀವು ಆದಾಯ ಪಾವತಿದಾರರಾಗದೇ ಇದ್ದರೂ ಈ ರೀತಿ ತೋರಿಸುತ್ತಿದ್ದರೆ ಮುಂದಿನ ತಿಂಗಳಿನಲ್ಲಿ ಸಮಸ್ಯೆ ಬಗ್ಗೆ ಹರಿಯುತ್ತದೆ. ಒಂದು ವೇಳೆ ಇದು ಸರಿ ಹೋಗದೆ ಇದ್ದಲ್ಲಿ ನಿಮ್ಮ ತಾಲೂಕಿನ CDPO ಅಧಿಕಾರಿಯನ್ನು ಭೇಟಿ ಮಾಡಿ.