ಇನ್ಮುಂದೆ ಬ್ಯಾಂಕ್ ನಲ್ಲಿ ಇದಕ್ಕಿಂತ ಹೆಚ್ಚು ಹಣ ಡ್ರಾ ಮಾಡಿದ್ರೆ ತೆರಿಗೆ ಕಟ್ಟಬೇಕಾಗುತ್ತದೆ.! RBI ಹೊಸ ರೂಲ್ಸ್

 

WhatsApp Group Join Now
Telegram Group Join Now

ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಕೂಡ ಈಗ ಬ್ಯಾಂಕ್ ಖಾತೆಗಳು ಅತ್ಯವಶ್ಯಕ ದಾಖಲೆಗಳಾಗಿವೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯಲು, ಉದ್ಯೋಗಕ್ಕೆ ಹೋಗುವವರಿಗೆ ಸಂಬಳ ಪಡೆಯಲು ಮತ್ತು ವ್ಯಾಪಾರ ವ್ಯವಹಾರ ಮಾಡುವವರು ತಮ್ಮ ಹಣವನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಪಿಂಚಣಿ ಪಡೆಯಲು ಹೀಗೆ ಪ್ರತಿಯೊಬ್ಬರೂ ಕೂಡ ಸರ್ಕಾರಿ ಸೌಲಭ್ಯ ಪಡೆಯುವ ಕಾರಣದಿಂದ ಅಥವಾ ತಮ್ಮ ವೈಯಕ್ತಿಕ ಅವಶ್ಯಕತೆಗಳಿಗಾಗಿ ಬ್ಯಾಂಕ್ ಖಾತೆ ಪಡೆಯುತ್ತಾರೆ.

ಈ ವಿಚಾರವಾಗಿ ಒಂದು ಸಾಮಾನ್ಯ ಸಾಮ್ಯತೆ ಎಂದರೆ ಉಳಿತಾಯ ಖಾತೆಯಲ್ಲಿ ನಾವು ಹಣವನ್ನು ಸೇಫ್ ಆಗಿ ಇಡಬಹುದು ಎಂದು ಈ ರೀತಿ ಪಡೆಯಬಹುದು ಎನ್ನುವುದು ಇದರ ಮತ್ತೊಂದು ಪ್ಲಸ್ ಪಾಯಿಂಟ್. ಆದರೆ ನೀವು ಬ್ಯಾಂಕಿಂಗ್ ವಿಷಯದಲ್ಲಿ ಆಗಾಗ್ಗೆ ಬದಲಾಗಿರುವ ಕೆಲ ನಿಯಮವನ್ನು ತಿಳಿದುಕೊಂಡಿರಲೇಬೇಕು. ಅದೇನೆಂದರೆ, RBI ನಿಗದಿಪಡಿಸಿರುವ ಈ ಮಿತಿಯನ್ನು ಮೀರಿ ನೀವು ನಿಮ್ಮದೇ ಉಳಿತಾಯ ಖಾತೆಯಿಂದ ಹಣ ತೆಗೆದರೆ ಇನ್ನು ಮುಂದೆ ಟ್ಯಾಕ್ಸ್ ಕಟ್ ಆಗುತ್ತದೆ.

ಈ ಸುದ್ದಿ ಓದಿ:- ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ.!

ನೀವು ನಿಮ್ಮ ಉಳಿತಾಯ ಖಾತೆಗೆ ATM ಕಾರ್ಡ್ ಪಡೆದಿದ್ದರು ಒಂದು ದಿನಕ್ಕೆ ಇಂತಿಷ್ಟೇ ಹಣ ತೆಗೆಯಬಹುದು ಎನ್ನುವ ಮಿತಿ ಇದೆ. RBI ನಿಯಮ ಜನವರಿ 1, 2022ರ ನಂತರ ATM ಗಳಲ್ಲಿ ಹಣ ಹಿಂಪಡೆಯುವುದಕ್ಕೆ ಮಿತಿ ಹೇರಲಾಗಿದೆ. ಈ ಹೊಸ ನಿಯಮದ ಪ್ರಕಾರ ನಿಮ್ಮ ಬ್ಯಾಂಕ್ ಶಾಖೆಗಳ ATM ಮಿಷನ್ ಗಳಲ್ಲಿ ಐದು ಬಾರಿ ಉಚಿತವಾಗಿ ಟ್ರಾನ್ಸಾಕ್ಷನ್ ಮಾಡಲು ಅವಕಾಶ ಮತ್ತು ಇತರೆ ಬ್ಯಾಂಕ್ ATM ಗಳಲ್ಲಿ 3 ಬಾರಿ ಮಾತ್ರ ಉಚಿತವಾಗಿ ಟ್ರಾನ್ಸಾಕ್ಷನ್ ಮಾಡಲು ಅವಕಾಶವಿದೆ.

ಇದನ್ನು ಮೀರಿ ಹಣ ಡ್ರಾ ಮಾಡಿದಾಗ ಪ್ರತಿಯೊಂದು ಟ್ರಾನ್ಷನ್ ಗೆ ರೂ.21 ಶುಲ್ಕ ವಿಧಿಸಲಾಗುತ್ತದೆ ಮತ್ತು ಇದರೊಂದಿಗೆ ಒಂದು ವರ್ಷದಲ್ಲಿ ಇಂತಿಷ್ಟೇ ಹಣವನ್ನು ಮಾತ್ರ ವಿನಾಯಿತಿಯಲ್ಲಿ ಹಿಂಪಡೆಯಬಹುದು ಇಲ್ಲವಾದಲ್ಲಿ TDS ಕೂಡ ಕಟ್ಟಬೇಕಾಗುತ್ತದೆ ಎನ್ನುವ ನಿಯಮ ಕೂಡ ಇದೆ. ಆದರೆ ಇದು ಎಲ್ಲರಿಗೂ ಒಂದೇ ತೆರನಾಗಿಲ್ಲ ಆ ಬಗ್ಗೆ ಸ್ಪಷ್ಟತೆ ಹೀಗಿದೆ ನೋಡಿ.

ಈ ಸುದ್ದಿ ಓದಿ:- ಅಣ್ಣನ ಆಸ್ತಿಯಲ್ಲಿ ತಮ್ಮ, ತಮ್ಮನ ಆಸ್ತಿಯಲ್ಲಿ ಅಣ್ಣ ಪಾಲು ಕೇಳಬಹುದೇ.? ಯಾವ ಸಂದರ್ಭದಲ್ಲಿ ಯಾವ ರೀತಿಯ ಆಸ್ತಿಗಳಲ್ಲಿ ಪಾಲು ಕೇಳಬಹುದು ನೋಡಿ.!

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 194N ಪ್ರಕಾರವಾಗಿ ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ 20 ಲಕ್ಷದವರೆಗೆ ತನ್ನ ಉಳಿತಾಯ ಖಾತೆಯಲ್ಲಿ ಹಣ ಹಿಂಪಡೆಯಬಹುದು ಅದಕ್ಕಿಂತ ಹೆಚ್ಚಿನ ಹಣವನ್ನು ವ್ಯವಹರಿಸುವುದಾದರೆ ಆತ TDS ಪಾವತಿಸಬೇಕಾಗುತ್ತದೆ. ಈ ನಿಯಮವು ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ಪಾವತಿಸದೇ ಇದ್ದವರಿಗೆ ಅನ್ಭಯವಾಗುತ್ತದೆ.

ಒಂದು ವೇಳೆ ನೀವೇನಾದರೂ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಈ ನಿಯಮದಡಿ ವಿನಾಯಿತಿ ಇರುತ್ತದೆ. ITR ಸಲ್ಲಿಸುವವರು TDS ಪಾವತಿಸದೆ ತಮ್ಮ ಯಾವುದೇ ಬ್ಯಾಂಕಿನ ಉಳಿತಾಯ ಖಾತೆ ಅಥವಾ ಅಂಚೆ ಕಚೇರಿ ಉಳಿತಾಯ ಖಾತೆ ಅಥವಾ ಸಹಕಾರಿ ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ಈ ಮಿತಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಬಹುದು, ಈ ಮಿತಿಯು 1 ಕೋಟಿವರೆಗೂ ಕೂಡ ಅನ್ವಯಿಸುತ್ತದೆ.

ಈ ಸುದ್ದಿ ಓದಿ:- ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?

ನೀವು ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ಪಾವತಿಸದೆ ಇದ್ದಲ್ಲಿ ನಿಮಗೆ 20 ಲಕ್ಷಕ್ಕಿಂತ ಹೆಚ್ಚಿನ ಹಣ ಹಿಂಪಡೆದುಕೊಂಡಾಗ 2% TDS ಮತ್ತು 20 ಲಕ್ಷದಿಂದ ಒಂದು ಕೋಟಿವರೆಗಿನ ವಹಿವಾಟಿಗೆ 5% TDS ಪಾವತಿಸಬೇಕಾಗುತ್ತದೆ. ಇದು ಬಹಳ ಅವಶ್ಯಕ ಮಾಹಿತಿಯಾಗಿದ್ದು ಅನೇಕರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಅವರಿಗೂ ವಿಷಯ ತಿಳಿಯುವಂತೆ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now