ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯು (Gruhalakshmi & Annabhagya Scheme) ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Karnataka Government Gyarantee Scheme) ಕುಟುಂಬದ ಮುಖ್ಯಸ್ಥ ಖಾತೆಗೆ ಹಣ ವರ್ಗಾವಣೆ (Amount transfer to HOF Account through DBT) ಮಾಡುವಂತಹ ಯೋಜನೆಗಳಾಗಿದೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ ಕುಟುಂಬದ ಮುಖ್ಯಸ್ಥೆಯು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ಸಹಾಯಧನವನ್ನು ಪಡೆಯುತ್ತಿದ್ದರೆ ಅನನ ಭಾಗ್ಯ ಯೋಜನೆ ಮೂಲಕ ಪ್ರತಿ ಸದಸ್ಯನ ರೂ.170 ನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಈ ಸುದ್ದಿ ಓದಿ:- ಇಡೀ ದೇಶದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ ದುಬಾರಿ ಡ್ರೈ ಫ್ರೂಟ್, ಈ ಬೆಳೆ ಬೆಳೆದರೆ ರೈತನಿಗೆ ಲಕ್ಷ ಲಕ್ಷ ಆದಾಯ ಗ್ಯಾರಂಟಿ.!
ಕಳೆದ ಜುಲೈ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಹಾಗೂ ಆಗಸ್ಟ್ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಬಿಡುಗಡೆಯಾಗುತ್ತಿದ್ದರು ಇನ್ನೂ ಲಕ್ಷಾಂತರ ಮಹಿಳೆಯರಿಗೆ ಬ್ಯಾಂಕ್ ಖಾತೆ ಸಮಸ್ಯೆ, ದಾಖಲೆಗಳಲ್ಲಿ ಕೊರತೆ, ತಾಂತ್ರಿಕ ಸಮಸ್ಯೆ ಇನ್ನಿತರ ಕಾರಣಗಳಿಂದಾಗಿ ಈ ಯೋಜನೆಗಳ ಹಣ ತಲುಪುತ್ತಿಲ್ಲ.
ಇದಕ್ಕಾಗಿ ಸರ್ಕಾರವೂ ಕೂಡ ಅನೇಕ ಪರಿಹಾರ ಕ್ರಮಗಳನ್ನು ಕೈಗೊಂಡು ಪ್ರತಿ ಫಲಾನುಭವಿಗೂ ಹಣ ತಲುಪುವಂತೆ ಮಾಡಲು ಶ್ರಮಿಸುತ್ತಿದೆ. ನಿಮಗೂ ಕೂಡ ಈ ರೀತಿ ಸಮಸ್ಯೆ ಆಗಿದ್ದರೆ ನಿಮ್ಮ ಅರ್ಜಿ ಸ್ಥಿತಿ ಏನಾಗಿದೆ ನಿಮಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಬರುತ್ತದೆ ಇಲ್ಲವೇ ಹಣ ಬರದೆ ಇದ್ದವರಿಗೆ ಎಲ್ಲಾ ತಿಂಗಳ ಹಣ ಬರುತ್ತದೆಯೇ ಪ್ರತಿ ತಿಂಗಳು ಯಾವ ದಿನಾಂಕದಂದು ಹಣ ಬರುತ್ತದೆ ಎನ್ನುವುದರ ಕುರಿತು ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಒಂದು ಹೆಕ್ಟರ್ ಹೊಲದಲ್ಲಿ ಒಂದು ಗುಂಟೆ ಜಾಗ ನೀಡಿದರೆ ರೈತನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ.!
* ಇದಕ್ಕಾಗಿ ನೀವು ಮೊದಲು ಕರ್ನಾಟಕ ಸರ್ಕಾರದ ಮಾಹಿತಿ ಕಣಜ ವೆಬ್ ಸೈಟ್ ಗೆ ಭೇಟಿ ನೀಡಬೇಕು.
ವೆಬ್ಸೈಟ್ ವಿಳಾಸ: https://mahitikanaja.karnataka.gov.in
* ಸಾಕಷ್ಟು ಸೇವೆಗಳ ವಿವರ ಇರುತ್ತದೆ ಇದರಲ್ಲಿ ಪಡಿತರ ಚೀಟಿ ಪ್ರತ್ಯೇಕ ಎನ್ನುವುದನ್ನು ಸೆಲೆಕ್ಟ್ ಮಾಡಿ.
(ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳು ರೇಷನ್ ಕಾರ್ಡ್ ಆಧಾರಿತ ಸೇವೆಗಳಾಗಿರುವುದರಿಂದ ನಿಮ್ಮ ಕಾರ್ಡ್ ಆಕ್ಟಿವ್ ಆಗಿ ಇದ್ದರೆ ಮಾತ್ರ ಹಣ ಬರುವುದು ಹಾಗಾಗಿ ಇದನ್ನು ಚೆಕ್ ಮಾಡಿ).
* ಸ್ಕ್ರೀನ್ ಮೇಲೆ ನನ್ನ ಪಡಿತರ ಚೀಟಿ ವಿವರಗಳು ಎನ್ನುವ ಇಂಟರ್ಫೇಸ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿ ಪಡಿತರ ಚೀಟಿ ಸಂಖ್ಯೆಯನ್ನು ಕೂಡ ನಮೂದಿಸಿ ಸಬ್ಮಿಟ್ ಮಾಡಿ
* ತಕ್ಷಣ ಸ್ಕ್ರೀನ್ ಮೇಲೆ ನಿಮ್ಮ ರೇಷನ್ ಕಾರ್ಡ್ ಕುರಿತ ಸಂಪೂರ್ಣ ವಿವರ ಬರುತ್ತದೆ.
ಈ ಸುದ್ದಿ ಓದಿ:- ಕೇವಲ 10 ಲಕ್ಷದಲ್ಲಿ ನಿರ್ಮಾಣವಾಗಿರುವ 2BHK ಮನೆ ಹೇಗಿದೆ ನೋಡಿ.! ಕಡಿಮೆ ಬಡ್ಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ಕಟ್ಟಬೇಕು ಅನ್ನುವವರು ನೋಡಿ.!
ಯಾವ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ, ಗ್ರಾಮ, ಯಾವ ಪ್ರಕಾರದ ರೇಷನ್ ಕಾರ್ಡ್, ಯಾವ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುತ್ತಿದ್ದೀರಾ?, ರೇಷನ್ ಕಾರ್ಡ್ ಸ್ಥಿತಿ ಏನಾಗಿದೆ?, ಕುಟುಂಬದ ಸದಸ್ಯರ ವಿವರ, ಕುಟುಂಬದ ಮುಖ್ಯಸ್ಥೆ ಯಾರು ಇತ್ಯಾದಿ ಸಂಪೂರ್ಣ ಮಾಹಿತಿ ಬರುತ್ತದೆ. ಇದರಲ್ಲಿ ರೇಷನ್ ಕಾರ್ಡ್ ಸ್ಥಿತಿ ಸಕ್ರಿಯ ಎಂದು ಇದ್ದರೆ ಮಾತ್ರ ನಿಮ್ಮ ಕಾರ್ಡ್ ಚಾಲ್ತಿಯಲ್ಲಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಅರ್ಥ
* ಈಗ ನೀವು ಬ್ಯಾಕ್ ಹೋಗಿ ಮಾಹಿತಿ ಕಣಜ ವೆಬ್ಸೈಟ್ನ ಮುಖಪುಟವನ್ನು ತಲುಪಿ ಮೊದಲಿನಿಂದ ಆರಂಭಿಸಿ
* ಗ್ಯಾರೆಂಟಿ ಯೋಜನೆಗಳು ಎನ್ನುವ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಮೊದಲಿಗೆ ಗೃಹಲಕ್ಷ್ಮಿ ಯೋಜನೆ ಸ್ಟೇಟಸ್ ಚೆಕ್ ಮಾಡಲು ರೇಷನ್ ಕಾರ್ಡ್ ಸಂಖ್ಯೆ ನಮೂದಿಸುವಂತೆ ಆಪ್ಷನ್ ನೀಡಲಾಗುತ್ತದೆ.
ಈ ಸುದ್ದಿ ಓದಿ:- ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
* ರೇಷನ್ ಕಾರ್ಡ್ ಸಂಖ್ಯೆ ಹಾಕಿ ಸಬ್ಮಿಟ್ ಕೊಡಿ
* ತಕ್ಷಣ ಸ್ಕ್ರೀನ್ ಮೇಲೆ ನೀವು ಅಪ್ಲಿಕೇಶನ್ ಹಾಕಿದ ಡೇಟ್, ನಿಮ್ಮ ಅಪ್ಲಿಕೇಶನ್ ಸ್ಟೇಟಸ್, ಅಪ್ರೂವ್ಡ್ ಡೇಟ್ ಮತ್ತು ಪೇಮೆಂಟ್ ಡೇಟ್ ಅಂಡ್ ಅಮೌಂಟ್ ಆಪ್ಷನ್ ನೋಡುತ್ತೀರಿ
* ಅಪ್ಲಿಕೇಶನ್ ಸ್ಟೇಟಸ್ ಅಪ್ರೂವ್ಡ್ ಎಂದು ಇದ್ದರೆ ನಿಮ್ಮ ಅಪ್ಲಿಕೇಶನ್ ಅಪ್ರೂವ್ಡ್ ಆಗಿರುವ ದಿನಾಂಕ ಕೂಡ ಇರುತ್ತದೆ ಪೇಮೆಂಟ್ ಡೇಟ್ ಅಂಡ್ ಅಮೌಂಟ್ ಗೆಟ್ ಡೀಟೇಲ್ಸ್ ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ಯಾವ ತಿಂಗಳು ಯಾವ ದಿನಾಂಕದಂದು ಎಷ್ಟು ಹಣ ಜಮೆ ಆಗಿದೆ ಎನ್ನುವ ಪೂರ್ತಿ ಡೀಟೇಲ್ಸ್ ಬರುತ್ತದೆ.
* ಇದರಲ್ಲಿ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗಿರುವುದು ಅಥವಾ ಇನ್ಯಾವುದೇ ರೀತಿಯ ಸಮಸ್ಯೆ ಇದ್ದರೆ ಈ ಯೋಜನೆಗಳ ಹಣ ಬರುವುದಿಲ್ಲ ನೀವು ಇದನ್ನು ಸರಿಪಡಿಸಿಕೊಂಡರೆ ಅದರ ಮುಂದಿನ ತಿಂಗಳಿನಿಂದ ನಿಮಗೆ ಹಣ ಬರುತ್ತದೆ.
ಈ ಸುದ್ದಿ ಓದಿ:- ಕೃಷಿ ಹೊಂಡದಲ್ಲಿ ಮುತ್ತು ಬೆಳೆದು 20 ಲಕ್ಷ ಆದಾಯ ಮಾಡಿದ ರೈತ.!
ಒಂದು ವೇಳೆ ಇದರ ಬಗ್ಗೆ ತಿಳಿಯದೆ ಇದ್ದರೆ ಗ್ಯಾರಂಟಿ ಯೋಜನೆಗಳ ಹಣ ಪಡೆಯಲು ಸಮಸ್ಯೆಯಾಗಿರುವವರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪ್ರತಿ ತೆಗೆದುಕೊಂಡು ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಛೇರಿಯಲ್ಲಿರುವ CDPO ಅಧಿಕಾರಿಗಳ ಬಳಿ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಸಲಹೆ ನೀಡಿದೆ.
ಇದರೊಂದಿಗೆ ಪ್ರತಿ ತಿಂಗಳ 20ನೇ ತಾರೀಖಿನಿಂದ ಮುಂದಿನ ತಿಂಗಳ 15ನೇ ತಾರೀಖಿನೊಳಗೆ ಆಯಾ ತಿಂಗಳ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗಳ ಹಣ ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ. ಒಂದು ವೇಳೆ ಎಲ್ಲಾ ಮಾಹಿತಿಗಳು ಸರಿ ಇದ್ದು ತಾಂತ್ರಿಕ ಸಮಸ್ಯೆಗಳಾಗಿ ಹಣ ವರ್ಗಾವಣೆ ಆಗದಿದ್ದರೆ ಒಟ್ಟಿಗೆ ಎಲ್ಲಾ ಕಂತುಗಳ ಹಣವು ಕೂಡ ಖಂಡಿತವಾಗಿ ಬರಲಿದೆ ಎಂದು ಸರ್ಕಾರ ಭರವಸೆ ನೀಡಿದೆ.