ಶಿಕ್ಷಣ ಎನ್ನುವುದು ನಾಗರಿಕ ಸಮಾಜಕ್ಕೆ ಬುನಾದಿ ಎನ್ನಬಹುದು ಜೊತೆಗೆ ಈಗ ಇದು ಮೂಲಭೂತ ಅಗತ್ಯತೆ ಕೂಡ ಆಗಿದೆ. ರಾಜ್ಯದ ಕಟ್ಟೆ ಕಡೆಯ ಹಳ್ಳಿಯ ಮಗುವಿಗೂ ಕೂಡ ಅಕ್ಷರ ಕಲಿಯುವ ಅನುಕೂಲ ಆಗಬೇಕು ಎನ್ನುವ ಕಾರಣದಿಂದ ಸರ್ಕಾರ ಕಡ್ಡಾಯ ಶಿಕ್ಷಣ ನೀತಿ, ಬಿಸಿ ಊಟ, ಉಚಿತ ಪಠ್ಯಪುಸ್ತಕ ಸಮವಸ್ತ್ರ ವಿತರಣೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.
ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಲಾಗದವರಿಗೆ ದೂರದ ಪ್ರದೇಶಗಳಲ್ಲಿ ವಸತಿ ಶಾಲೆಗಳನ್ನು (KSEIS) ನಿರ್ಮಿಸಿ ಆರ್ಥಿಕ ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಸೌಲಭ್ಯವನ್ನು ಒದಗಿಸಿ ಕೊಡಲಾಗುತ್ತಿದೆ.
ಈ ಸುದ್ದಿ ಓದಿ:- ಟೀಚರ್ ಕೆಲಸ ಬಿಟ್ಟು ಯಳಗ ಕುರಿ ಸಾಕಿ ಸಕ್ಸಸ್ ಆದ ಮಹಿಳೆ, ಒಂದು ಕುರಿಯಿಂದ 3000 ಲಾಭ.!
ರಾಜ್ಯದಲ್ಲಿ ಹಲವಾರು ಈ ರೀತಿಯ ವಸತಿ ಶಾಲೆಗಳಿವೆ. ಇದುವರೆಗೂ ಈ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಬೇಕು. ಪಾಸಾದ ಪ್ರತಿಭಾವಂತರಿಗೆ ಆದ್ಯತೆ ಮೇರೆಗೆ ಸೀಟ್ ನೀಡಲಾಗುತ್ತಿತ್ತು ಆದರೆ ಈಗ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಈ ನಿಯಮವನ್ನು ಸ್ವಲ್ಪ ಸಡಿಲ ಗೊಳಿಸಿ ರಾಜ್ಯದಲ್ಲಿ ಬರೋಬ್ಬರಿ 20,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೂ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಡಲು ಇಲಾಖೆ ನಿರ್ಧರಿಸಿದ್ದು, ನೇರವಾಗಿ ನೀವು ನಿಮ್ಮ ಕುಟುಂಬದ ಮಗುವನ್ನು ಈ ಶಾಲೆಗಳಿಗೆ ಅಡ್ಮಿಶನ್ ಮಾಡಿಸಬಹುದಾಗಿದೆ.
ಈ ಸುದ್ದಿ ಓದಿ:- ಬೋರ್ ವೆಲ್ ನಲ್ಲಿ ನೀರು ಕಡಿಮೆ ಆಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ ಮತ್ತೆ ಮೊದಲಿನಂತೆ ನೀರು ಜಾಸ್ತಿ ಬರುತ್ತೆ.!
ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲ ದಾಖಲೆಗಳನ್ನು ನೀಡಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಹತಾ ಮಾನದಂಡಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿ ಬಗ್ಗೆ ಈ ಲೇಖನದಲ್ಲಿ ವಿವರಣೆ ನೀಡುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* KREIS ವಸತಿ ಶಾಲೆಗಳಲ್ಲಿ ವಿಶೇಷ ವರ್ಗದ ಅಡಿಯಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವಿಶೇಷ ವರ್ಗಕ್ಕೆ ಸೇರಿದವರಾಗಿರಬೇಕು
* ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಯು 5ನೇ ತರಗತಿಯಲ್ಲಿ ಉತ್ತೀರ್ಣನಾಗಿ 2024-25ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಾತಿ ಕೋರಿ ಅರ್ಜಿ ಸಲ್ಲಿಸುತ್ತಿರಬೇಕು
* ಸೂಚಿಸಿರುವ ಎಲ್ಲಾ ದಾಖಲೆಗಳನ್ನು ಕೂಡ ಅರ್ಜಿ ಸಲ್ಲಿಸುವ ಸಮಯದಲ್ಲಿ ಲಗತ್ತಿಸಬೇಕು
ಬೇಕಾಗುವ ದಾಖಲೆಗಳು:-
* ವಿದ್ಯಾರ್ಥಿಯ ಮತ್ತು ಪೋಷಕರ ಆಧಾರ್ ಸಂಖ್ಯೆ
* ಪೋಷಕರ ಮೊಬೈಲ್ ಸಂಖ್ಯೆ
* ವಿಶೇಷ ವರ್ಗದ ಮೀಸಲಾತಿಗಾಗಿ ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣ ಪತ್ರ
* ವಿಶೇಷ ವರ್ಗಗಳಿಗೆ ಸಂಬಂಧಿಸಿದ ಗುರುತಿನ ಚೀಟಿ ಹಾಗೂ ಸರ್ಕಾರದಿಂದ ದೃಢೀಕರಿಸಿ ನೀಡಿರುವ ಪ್ರಮಾಣ ಪತ್ರ
* 5ನೇ ತರಗತಿಯ ಅಂಕಪಟ್ಟಿ
* ಇನ್ನಿತರ ಪ್ರಮುಖ ದಾಖಲೆಗಳು
ಈ ಸುದ್ದಿ ಓದಿ:- ಎಲ್ಲರಿಗೂ ಗುಡ್ ನ್ಯೂಸ್ ಗ್ರಾಮ ಪಂಚಾಯಿತಿಯಿಂದ ಸಿಗಲಿದೆ 2 ಲಕ್ಷ ಅನುದಾನ.!
* ವಿಶೇಷ ವರ್ಗಗಳಿಗೆ ಸಂಬಂಧಿಸಿದ ಗುರುತಿನ ಚೀಟಿ ಹಾಗೂ ಸರ್ಕಾರದಿಂದ ದೃಢೀಕರಿಸಿ ನೀಡಿರುವ ಪ್ರಮಾಣ ಪತ್ರಗಳು ಲಭ್ಯವಿಲ್ಲದಿದ್ದಲ್ಲಿ, ಪೋಷಕರು ಸಂಬಂಧಿತ ಮೀಸಲಾತಿ ಪಡೆಯಲು ಸೂಕ್ತ ದಾಖಲೆಗಳ ಆಧಾರದ ಮೇಲೆ ರಾಜ್ಯ / ಕೇಂದ್ರ ಸರ್ಕಾರದ ಗ್ರೂಪ್ ಎ / ಗ್ರೂಪ್ ಬಿ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಬೇಕು.
ವಿಧಾನ:-
ಪೋಷಕರ ಬಳಿ ಯಾವುದೇ ದಾಖಲೆಗಳು ಲಭ್ಯವಿಲ್ಲದ ಪಕ್ಷದಲ್ಲಿ, ಗೆಜೆಟೆಡ್ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲು https://kreis.karnataka.gov.in ಜಾಲತಾಣದಿಂದ ಪ್ರಮಾಣ ಪತ್ರದ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು. ಪ್ರಿಂಟ್ ತೆಗೆದುಕೊಳ್ಳಿ ನಂತರ ಸಂಪೂರ್ಣವಾಗಿ ನಮೂನೆಯನ್ನು ಭರ್ತಿ ಮಾಡಿ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿ
ಅರ್ಜಿ ಸಲ್ಲಿಸುವ ವಿಧಾನ:-
* ಈ ಮೇಲೆ ತಿಳಿಸಿದ ಎಲ್ಲ ದಾಖಲೆಗಳ ಜೊತೆ ನಿಮ್ಮ ತಾಲೂಕು ಅಥವಾ ಹೋಬಳಿ ಅಥವಾ ಹತ್ತಿರದ ವಸತಿ ಶಾಲೆಗೆ ಭೇಟಿ ನೀಡಿ, ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಪ್ರವೇಶ ಪಡೆಯಬಹುದು.
* 15 ಮೇ, 2025ರಿಂದ ಪ್ರಕ್ರಿಯೆ ಆರಂಭವಾಗುತ್ತಿದೆ.
ಪ್ರವೇಶಾತಿ ಪಡೆಯಬಹುದಾದ ಶಾಲೆಗಳ ಪಟ್ಟಿ:-
* ಮೊರಾರ್ಜಿ ದೇಸಾಯಿ ವಸತಿ ಶಾಲೆ
* ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
* ಏಕಲವ್ಯ ಮಾದರಿ ವಸತಿ ಶಾಲೆ
* ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
* ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ
* ಡಾ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ
* ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ
* ಸಂಗೊಳ್ಳಿ ರಾಯಣ್ಣ ವಸತಿ ಶಾಲೆ
* ಕವಿರನ್ನ ವಸತಿ ಶಾಲೆ
* ಗಾಂಧಿತತ್ವ ವಸತಿ ಶಾಲೆ
* ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳು