ಇತ್ತೀಚಿನ ದಿನಗಳಲ್ಲಿ ಆಸ್ತಿಯ ಕುರಿತು ಸಾಕಷ್ಟು ಕೇಸ್ ಗಳು (Property cases) ಕೋರ್ಟ್ ಗಳಲ್ಲಿ (Court) ದಾಖಲಾಗುತ್ತಿವೆ. ಈ ಪೈಕಿ ಅಕ್ರಮವಾಗಿ ಮತ್ತೊಬ್ಬರ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ, ಬಲವಂತವಾಗಿ ಮತ್ತೊಬ್ಬರ ಆಸ್ತಿಯನ್ನು ಆಕ್ರಮಿಸಿಕೊಳ್ಳುತ್ತಿರುವ (illegal occupy), ಅವರ ಸ್ವಾಧೀನಕ್ಕೆ ಅಡ್ಡಿ ಪಡಿಸುತ್ತಿರುವಂತಹ ಕೇಸ್ ಗಳು ದಾಖಲಾಗುತ್ತಿವೆ.
ಒಬ್ಬ ವ್ಯಕ್ತಿಯು ತುಂಬಾ ಪವರ್ಫುಲ್ ಆಗಿದ್ದಾಗ ಅಥವಾ ಆತನಿಗೆ ಹೆಚ್ಚು ಹಣ ಬಲ ಇದ್ದಾಗ, ಇಲ್ಲವಾದರೆ ಆತನ ತನ್ನ ಬಳಿ ತನ್ನದೇ ಆದ ಒಂದು ಗ್ಯಾಂಗ್ ಇದ್ದಾಗ ಇವುಗಳನ್ನು ಬಳಸಿ ಆ ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಳ್ಳುತ್ತಾನೆ. ಆ ವ್ಯಕ್ತಿಯನ್ನು ಆತನ ಆಸ್ತಿಯಿಂದ ಹೊರಹಾಕಲು ಪ್ರಯತ್ನಿಸುತ್ತಾನೆ, ಇದನ್ನೇ ಒತ್ತುವರಿ ಎನ್ನುತ್ತೇವೆ. ಈ ರೀತಿ ಆಸ್ತಿಯನ್ನು ಬೇರೆಯವರು ದಬ್ಬಾಳಿಕೆಯಿಂದ ಆಕ್ರಮಿಸಿಕೊಂಡು ನಿಮ್ಮ ಸ್ವಾಧೀನಕ್ಕೆ ತೊಂದರೆ ಕೊಡುತ್ತಿದ್ದರೆ ನೀವು ನ್ಯಾಯಾಲಯದಲ್ಲಿ ದಾವೆ (litigation) ಹೂಡಿ ಅದಕ್ಕೆ ಪರಿಹಾರ ಪಡೆಯಬಹುದು.
ಮನೆ ಅಥವಾ ಜಮೀನಿನ ಆಸ್ತಿ ಪತ್ರ ಕಳೆದು ಹೋದರೆ ಮರಳಿ ಪಡೆಯುವ ವಿಧಾನ ಇಲ್ಲಿದೆ ನೋಡಿ.!
ನಿಮಗೆ ಆಗುತ್ತಿರುವ ಮೋ’ಸ ಹಾಗೂ ಅ’ನ್ಯಾ’ಯದ ವಿರುದ್ಧ ಧ್ವನಿ ಎತ್ತಿ ನೀವು ನೇರವಾಗಿ ಕೋರ್ಟಿನಲ್ಲಿ ಇದಕ್ಕಾಗಿ ಪರಿಹಾರ ಕೇಳಬಹುದು. ಆದರೆ ನಿಮ್ಮ ಯಾವ ಭೂಮಿಯನ್ನು ನಿಮ್ಮಿಂದ ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಿದ್ದೀರಾ ಆ ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು (title deed) ಕೂಡ ನಿಮ್ಮ ಹೆಸರಿನಲ್ಲಿ ಇರಬೇಕಾದದ್ದು ಮುಖ್ಯ.
ಈ ರೀತಿ ಎಲ್ಲ ದಾಖಲೆಗಳು ನಿಮ್ಮ ಹೆಸರಿನಲ್ಲಿಯೇ ಇದ್ದಾಗ ನೀವು ಕಾನೂನಿನ ಸಹಕಾರವನ್ನು ಪಡೆದುಕೊಳ್ಳಬಹುದು. ಇದನ್ನು ತಡೆಯಲು ನೀವು ನಿರ್ಬಂಧಕಾಜ್ಞೆ ತರಬಹುದು ನಿರ್ಬಂಧಕಾಜ್ಞೆ ಎನ್ನುವುದನ್ನು ಕೋರ್ಟ್ ಭಾಷೆಯಲ್ಲಿ ಇಂಜೆಕ್ಷನ್ (injection) ಎಂದು ಕೂಡ ಕರೆಯುತ್ತಾರೆ. ಇದರಲ್ಲಿ ಎರಡು ವಿಧಗಳಿವೆ. ಒಂದು ಪ್ರಾವಿಡರ್ ಇಂಜೆಕ್ಷನ್ (Provider injection) ಹಾಗೂ ಮಾಂಡೇಟರಿ ಇಂಜೆಕ್ಷನ್ (Mandatory injection).
ಈ ಪ್ರಾವಿಡರ್ ಇಂಜೆಕ್ಷನ್ ನಲ್ಲಿ ಇನ್ನು ಎರಡು ವಿಧ ಬರುತ್ತದೆ. ಒಂದು ಟೆಂಪರರಿ ಇಂಜೆಕ್ಷನ್ (temporary injection) ಮತ್ತೊಂದು ಪರ್ಮನೆಂಟ್ ಇಂಜೆಕ್ಷನ್ (Permanent injection) ಇವುಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಕೊಡುತ್ತಿದ್ದೇವೆ ನೋಡಿ ಮೊದಲಿಗೆ ಮಾಂಡಿಟರಿ ಇಂಜೆಕ್ಷನ್ ಬಗ್ಗೆ ಹೇಳುತ್ತಿದ್ದೇವೆ.
ಮಾಂಡಿಟರಿ ಇಂಜೆಕ್ಷನ್ ಇದನ್ನು ಮನಿ ರಿಕವರಿ ಸೂಟ್ (Money recovery suit) ಹಾಗೂ ಪ್ರಾಪರ್ಟಿ ಅಟ್ಯಾಚ್ಮೆಂಟ್ ಕೇಸ್ (Property attachment Cases) ಗಳಲ್ಲಿ ಮಾತ್ರ ನೋಡುತ್ತೇವೆ. ಪ್ರಾವಿಡರ್ ಇಂಜೆಕ್ಷನ್ ನ್ನು ನಿಮ್ಮ ಜಮೀನಿನ ಮೇಲೆ ಮೂರನೇ ವ್ಯಕ್ತಿ ಅಥವಾ ಆ ವ್ಯಕ್ತಿ ಕಡೆಯವರು ಹಕ್ಕು ಸಾಧಿಸುತ್ತಿರುವುದು ನಿಮ್ಮ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದು ಇದನ್ನು ತಡೆಯಲು ಬಳಸಬಹುದು.
ಈ ಮೇಲೆ ತಿಳಿಸಿದಂತೆ ಇದರಲ್ಲಿ ಎರಡು ವಿಧ ಅದೇನೆಂದರೆ ಟೆಂಪರರಿ ಪ್ರಾವಿಡರ್ ಮತ್ತು ಪರ್ಮನೆಂಟ್ ಪ್ರಾವಿಡರ್. ನೀವು ಕೋರ್ಟಿನಲ್ಲಿ ಈ ರೀತಿ ನಿಮ್ಮ ಸ್ವಾಧೀನಕ್ಕೆ ತೊಂದರೆ ಆಗುತ್ತಿದೆ ನಿಮ್ಮ ಜಮೀನನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂದು ದಾವೆ ಹೂಡಿದ ತಕ್ಷಣವೇ ಕೋರ್ಟು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ನೀವು ಮಾಡುತ್ತಿರುವ ಆರೋಪ ಸರಿ ಇದೆಯೇ ಎಂದು ಮನವರಿಕೆ ಆದಮೇಲೆ ಅದನ್ನು ತಡೆಯಲು ಹೊರಡಿಸುವ ಆದೇಶವನ್ನು ಟೆಂಪರರಿ ಇಂಜೆಕ್ಷನ್ ಎಂದು ಹೇಳಲಾಗುತ್ತದೆ.
ಈ ಕಾನೂನು ಹೋರಾಟದಲ್ಲಿ ನೀವು ಗೆದ್ದ ಮೇಲೆ ನಿಮ್ಮ ಪರವಾಗಿ ಒಮ್ಮೆ ಆದೇಶ ಬಂದ ಮೇಲೆ ನಂತರ ಅದನ್ನು ಪರ್ಮನೆಂಟ್ ಇಂಜೆಕ್ಷನ್ ಆಗಿ ಬದಲಾಯಿಸಲಾಗುತ್ತದೆ. ಆನಂತರ ನಿಮ್ಮ ಹೆಸರಿನಲ್ಲಿರುವ ಆ ಆಸ್ತಿಗಳ ಮೇಲೆ ಮೂರನೇಯವರು ಅಧಿಕಾರ ಸಾಧಿಸಲು ಆಗುವುದಿಲ್ಲ. ಈ ವೇಳೆ ಕೋರ್ಟ್ ನೀಡಿದ ಈ ಆದೇಶವನ್ನು ಮೀರಿ ಆ ವ್ಯಕ್ತಿಯು ಮತ್ತೊಮ್ಮೆ ತೊಂದರೆ ನೀಡಲು ಬಂದರೆ ಆಗ ನೀವು ಕಾನೂನಿನ ಹೋರಾಟಕ್ಕೆ ಮುಂದಾಗಬಹುದು. ಮತ್ತೊಮ್ಮೆ ಅರ್ಜಿ ಸಲ್ಲಿಸಿ ಕೋರ್ಟ್ ಗಮನಕ್ಕೆ ತಂದು ಎಕ್ಸಿಕ್ಯೂಷನ್ ಪೆಟಿಷನ್ (execution petition) ಕೂಡ ಸಲ್ಲಿಸಬಹುದು.