ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ (Students) ಕೂಡ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ, ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ಅಡಚಣೆ ಕಾರಣದಿಂದಾಗಿ ವಿದ್ಯಾಭ್ಯಾಸಕ್ಕೆ ತೊಡಕಬಾರದು ಎನ್ನುವ ಕಾರಣಕ್ಕಾಗಿ ಅವರ ವಿದ್ಯಾಭ್ಯಾಸಕ್ಕೆ ಸರ್ಕಾರವು ಸ್ಕಾಲರ್ಶಿಪ್ ನೀಡುವ (Scholarship) ಮೂಲಕ ಸಹಾಯ ಮಾಡುತ್ತಿದೆ.
ಸರ್ಕಾರ ಜೊತೆಗೆ ಖಾಸಗಿ ಕಂಪನಿಗಳು, NGO ಗಳು ಕೂಡ ವಿದ್ಯಾರ್ಥಿ ವೇತನಗಳನ್ನು ನೀಡುತ್ತವೆ. ಕಾರ್ಮಿಕರ ಮಕ್ಕಳು, ರೈತರ ಮಕ್ಕಳು ಹೀಗೆ ಪ್ರತ್ಯೇಕ ವರ್ಗದಲ್ಲಿ ಅರ್ಜಿ ಸಲ್ಲಿಸಿ ಅನೇಕರು ವಿದ್ಯಾರ್ಥಿ ವೇತನ ಪಡೆಯುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಪ್ರೈಸ್ ಮನಿ ಎನ್ನುವ ಯೋಜನೆ ಮೂಲಕ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ಇಂಥವರಿಗೆ ಗೃಹಲಕ್ಷ್ಮಿ ಹಣ ಬರಲ್ಲ.! 1 ಲಕ್ಷ APL, BPL, ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗಳು ತಿರಸ್ಕೃತ.!
ಈ ಯೋಜನೆಗೆ ಮೆಟ್ರಿಕ್ (metric) ನಂತರದ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಇದರ ಕುರಿತು ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದ ಮತ್ತು 2023-24ನೇ ಸಾಲಿನಲ್ಲಿ PUC, ಪದವಿ ಡಿಪ್ಲೋಮೋ ಅಥವಾ ಉನ್ನತ ಶಿಕ್ಷಣದ ಕೋರ್ಸ್ ಗಳನ್ನು ಮಾಡುತ್ತಿರುವಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಕೋರ್ಸ್ ಗಳಿಗೆ ಸಂಬಂಧಪಟ್ಟ ಹಾಗೆ ವಿದ್ಯಾರ್ಥಿ ವೇತನವು ದೊರೆಯಲಿತ್ತು, ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡುವ ಮೂಲಕ ಕೆಲ ಪ್ರಮುಖ ದಾಖಲೆಗಳ ಜೊತೆ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಈ ಯೋಜನೆಗೆ ಬೇಕಾಗುವ ದಾಖಲೆಗಳೇನು? ಇತರ ಮಾನದಂಡಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ ಇತ್ಯಾದಿ ಮಾಹಿತಿಗಳನ್ನು ತಿಳಿದುಕೊಳ್ಳಲು ಅಂಕಣವನ್ನು ಪೂರ್ತಿಯಾಗಿ ಓದಿ.
ವ್ಯಕ್ತಿ ಮ-ರಣದ ನಂತರ ಅವರ ಖಾತೆಯಲ್ಲಿ ಇರುವ ಹಣ ಯಾರಿಗೆ ಸೇರುತ್ತೆ.?
ಯೋಜನೆಯ ಹೆಸರು:- sw.prize money ಯೋಜನೆ
ಯಾರು ಅರ್ಹರು:-
● ಹಿಂದಿನ ವರ್ಷದ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲಿಯೇ ಮೊದಲ ವರ್ಗದಲ್ಲಿ ಪಾಸಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು.
● ಆ ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲೂ ಕೂಡ ಮುಂದಿನ ಶಿಕ್ಷಣಕ್ಕೆ ದಾಖಲಾಗಿರಬೇಕು, ಅದಕ್ಕೆ ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಒದಗಿಸಬೇಕು, ಅವರ ತರಗತಿ ಮೇಲೆ ಅವರಿಗೆ ಪ್ರೈಸ್ ಮನಿ ನಿರ್ಧಾರ ಆಗುತ್ತದೆ.
● ಜೊತೆಗೆ ಈ ವರ್ಷದಲ್ಲಿ ಸರ್ಕಾರದಿಂದ ನೀಡಲಾಗುವುದು ಇನ್ಯಾವುದೇ ವಿದ್ಯಾರ್ಥಿ ವೇತನದ ಅನುಕೂಲತೆಯನ್ನು ಪಡೆದಿರಬಾರದು.
ಬೇಕಾಗುವ ದಾಖಲೆಗಳು:-
● ವಿದ್ಯಾರ್ಥಿಯ ಆಧಾರ್ ಕಾರ್ಡ್
● ಬ್ಯಾಂಕ್ ಖಾತೆ ವಿವರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
● ಇತ್ತೀಚಿನ ಭಾವಚಿತ್ರ
● ಕಳೆದ ವರ್ಷದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ನಿವಾಸ ಧೃಡೀಕರಣ ಪತ್ರ
● 2023-24 ನೇ ಸಾಲಿನಲ್ಲಿ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಬಗ್ಗೆ ಗುರುತಿನ ಚೀಟಿ.
ಕನ್ನಡ ಬಂದರೆ ಸಾಕು ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಅವಕಾಶ, ತಪ್ಪದೇ ಅರ್ಜಿ ಸಲ್ಲಿಸಿ.!
ಅರ್ಜಿ ಸಲ್ಲಿಸುವ ವಿಧಾನ:-
● sw.kar.nic.in ವೆಬ್ ಸೈಟ್ ಗೆ ಭೇಟಿ ನೀಡಿ ಯೋಜನೆ ಕುರಿತ ಸಂಪೂರ್ಣ ಮಾಹಿತಿಯು ಕೂಡ ಅದರಲ್ಲಿ ಇರುತ್ತದೆ .
● ಅರ್ಜಿ ಸ್ಥಿತಿ ಚೆಕ್ ಮಾಡುವ ಆಪ್ಷನ್ ಸಹ ಇರುತ್ತದೆ, ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ಪ್ರಕ್ರಿಯೆ ಪೂರ್ತಿ ಗೊಳಿಸಬಹುದು.
ಪ್ರಯೋಜನಗಳು:-
● ದ್ವಿತೀಯ PUC, ಡಿಪ್ಲೋಮೋ ವಿದ್ಯಾರ್ಥಿಗಳಿಗೆ 20,000ರೂ.
● ಪದವಿ ವಿದ್ಯಾರ್ಥಿಗಳಿಗೆ 25,000ರೂ.
● ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 30000ರೂ.
● ಅಗ್ರಿಕಲ್ಚರ್ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಗಳಿಗೆ 35,000ರೂ.