ಹಿಂದೆ ಜೀವನ ಬಹಳ ಕಷ್ಟವಾಗಿತ್ತು ಜನರು ಕಷ್ಟಪಟ್ಟು ಬೆವರು ಸುರಿಸು ದುಡಿದು ಹಣ ಸಂಪಾದನೆ ಮಾಡಬೇಕಿತ್ತು. ಹೀಗಿದ್ದು ಕೂಡ ನೂರು ರೂಪಾಯಿ ಗಳಿಸುವುದೇ ಬಹಳ ದೊಡ್ಡ ಶ್ರಮವಾಗುತ್ತಿತ್ತು. ಆದರೆ ಈಗ ಕಾಲ ಬಹಳ ಬದಲಾಗಿದೆ. ಕಾಲಕ್ಕೆ ತಕ್ಕ ಹಾಗೆ ಎಲ್ಲಾ ಕ್ಷೇತ್ರದಲ್ಲೂ ಬದಲಾವಣೆಯಾಗಿದೆ. ಇಂದು ಹಣ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರ ಕೈಗಳಲ್ಲೂ ಸರಾಗವಾಗಿ ಲೆಕ್ಕವೇ ಇಲ್ಲದೆ ಹರಿದಾಡುತ್ತದೆ.
ಈಗಿನ ಕಾಲದಲ್ಲಿ ಹಣ ಗಳಿಸುವುದು, ಉಳಿಸುವುದು, ಬಳಸುವುದು ಎಲ್ಲವೂ ಸುಲಭ. ಆದರೆ ಹಣದ ಬಗ್ಗೆ ಸರಿಯಾದ ಜ್ಞಾನ ಇದ್ದವರು ಮಾತ್ರ ತಮ್ಮ ಹಣವನ್ನು ಬೆಳೆಸುತ್ತಾರೆ. ನೀವು ಕೂಡ ಈ ಬಗ್ಗೆ ಆಸಕ್ತರಾಗಿದ್ದರೆ ಇಂದು ನಾವು ತಿಳಿಸುತ್ತಿರುವ ಈ ಮಾಹಿತಿಯನ್ನು ಕೊನೆವರೆಗೂ ಓದಿ. ಹಣವನ್ನು ದುಡಿಸಿ ಹೇಗೆ ಹಣ ಗಳಿಸಬಹುದು ಎನ್ನುವುದು ತಿಳಿಯುತ್ತದೆ.
ಈ ಸುದ್ದಿ ಓದಿ:- HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!
ಹಣವನ್ನು ವೇಗವಾಗಿ ಬೆಳೆಸುವುದಕ್ಕೆ ಈಗ ಮಾರುಕಟ್ಟೆಯಲ್ಲಿ ನೂರಾರು ದಾರಿ ಇದೆ. ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್, ಸ್ಟಾಕ್ ಮಾರ್ಕೆಟ್ ಇತ್ಯಾದಿಗಳು ದಿನಗಂಟೆ ನಿಮಿಷಗಳ ಲೆಕ್ಕದಲ್ಲಿ ನಿಮ್ಮ ಹಣವನ್ನು ಏರುಪೇರಾಗಿಸುತ್ತಿರುತ್ತವೆ. ಇದರಲ್ಲಿ ಅದೃಷ್ಟ ಇದ್ದವರು ಗೆದ್ದು ಬೀಗಿದರೆ ಸ್ವಲ್ಪ ಗ್ರಾಚಾರ ತಲೆ ಕೆಳಗಾದರೂ ಇರುವ ಹಣವನ್ನು ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ.
ಹಾಗಾಗಿ ಬಡ ಮತ್ತು ಮಧ್ಯಮ ವರ್ಗದವರು ಇದರ ಸಹವಾಸವೇ ಬೇಡ ಎಂದು ಹಣಕ್ಕೆ ಲಾಭ ಬರುವ ಜೊತೆಗೆ ಅಷ್ಟೇ ಭದ್ರತೆ ಇರುವ ದಾರಿಗಳತ್ತ ನೋಡುತ್ತಾರೆ. ಅದಕ್ಕೂ ಕೂಡ ಅವಕಾಶವಿದೆ, ರಾಷ್ಟ್ರೀಕೃತ ಬ್ಯಾಂಕ್ ಗಳು ಈ ರೀತಿ ಬ್ಯಾಂಕ್ ಗಳ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ ನೂರಕ್ಕೆ ನೂರರಷ್ಟು ಸುರಕ್ಷತೆಯನ್ನು ನೀಡಿ ಉತ್ತಮ ಮಟ್ಟದ ಬಡ್ಡಿ ದರವನ್ನು ನೀಡುತ್ತಿವೆ.
ಈ ಸುದ್ದಿ ಓದಿ:- ಸಿಂಗಲ್ ಡೋರ್ ಅಥವಾ ಡಬಲ್ ಡೋರ್ ಯಾವ ರೆಫ್ರಿಜರೇಟರ್ ತೆಗೆದುಕೊಳ್ಳುವುದು ಬೆಸ್ಟ್ ನೋಡಿ.!
ಈ ರೀತಿಯ ಬ್ಯಾಂಕ್ ಗಳಲ್ಲಿ SBI (State Bank Of Mysore) ಗ್ರಾಹಕರ ನಂಬಿಕೆಯ ಸಾರ್ವಜನಿಕ ವಲಯದ ನಂಬರ್ ಒನ್ ಬ್ಯಾಂಕ್ ಆಗಿದೆ. SBI ಬ್ಯಾಂಕ್ ನೀಡಿರುವ ಠೇವಣಿ ಯೋಜನೆಗಳು ನಿಮಗೆ ಈ ರೀತಿ ಹೂಡಿಕೆ ಮಾಡಿದ ಹಣಕ್ಕೆ ಗರಿಷ್ಠ ಬಡ್ಡಿ ದರದ ಮತ್ತು ಕಡಿಮೆ ತೆರಿಗೆ ದರ ವಿಧಿಸುವಂತಹ ಅವಕಾಶವನ್ನು ಒದಗಿಸುತ್ತಿದೆ.
ಇದನ್ನು 5 ಲಕ್ಷದ ಉದಾಹರಣೆಯೊಂದಿಗೆ ವಿವರಿಸುವುದಾದರೆ ಈ ಸಮಯದಲ್ಲಿ ನೀವೇನಾದರೂ 5 ಲಕ್ಷ ಹೊಂದಿದ್ದು ಅದನ್ನು SBI ನ FD (Fixed Deposit) ಠೇವಣಿ ಇಡುವುದರಿಂದ ಎಷ್ಟು ಲಾಭ ಗಳಿಸಬಹುದು ಎಂದು ಚಿಂತಿಸುತ್ತಿದ್ದರೆ ಅದರ ವಿವರ ಹೀಗಿದೆ. ಪ್ರತಿ ಆರ್ಥಿಕ ವವರ್ಷದ ಆರಂಭದಲ್ಲಿ ಬ್ಯಾಂಕ್ ಗಳು ತಮ್ಮ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಷ್ಕೃತಗೊಳಿಸುತ್ತವೆ.
ಈ ಸುದ್ದಿ ಓದಿ:- LIC ಈ ಸ್ಕೀಮ್ ನಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ ಸಾಕು, ಜೀವನ ಪರ್ಯಂತ ಪ್ರತಿ ತಿಂಗಳು 12,000 ಪಿಂಚಣಿ ಬರುತ್ತೆ.!
ಆ ಪ್ರಕಾರವಾಗಿ 2024-25 ನೇ ಸಾಲಿನ ಆರ್ಥಿಕ ವರ್ಷ ಇದೇ ಏಪ್ರಿಲ್ 1ರಿಂದ ಆರಂಭವಾಗಿದೆ ಸಾಮಾನ್ಯ ನಾಗರಿಕರಿಗೆ ಈ ಸಾಲಿನ Fixed Deposit ಯೋಜನೆಯಡಿ ಬರೋಬ್ಬರಿ 6.5% ವಾರ್ಷಿಕ ಬಡ್ಡಿ ಹಣ ದೊರಕುತ್ತಿದೆ. ಹೂಡಿಕೆದಾರರು ಮೆಚ್ಯುರಿಟಿ ಸಮಯದಲ್ಲಿ ಅಂದರೆ 5 ವರ್ಷಗಳ ಬಳಿಕ 6,90,209 ರೂಪಾಯಿ ಹಣವನ್ನು ಹಿಂಪಡೆಯುತ್ತಾರೆ.
ಹೀಗೆ ನಿಮ್ಮ ಹೂಡಿಕೆ ಮೇಲೆ ಬರೋಬ್ಬರಿ 1,90,209 ರೂಪಾಯಿ ಲಾಭ ದೊರತಂತಾಗುತ್ತದೆ. ಇದೇ ಸಮಯದಲ್ಲಿ ಹಿರಿಯ ನಾಗರಿಕರಿಗಾಗಿ ರಿಯಾಯಿತಿ ಇದೆ. SBI ಬ್ಯಾಂಕ್ ಹಿರಿಯ ನಾಗರಿಕರಿಗೆ 0.10% ಇಂಟರೆಸ್ಟ್ ಹೆಚ್ಚಾಗಿ ನೀಡುತ್ತಿದ್ದು ಐದು ವರ್ಷಗಳ ಕಾಲ ಹಿರಿಯ ನಾಗರಿಕರು FD ಯೋಜನೆಯಲ್ಲಿ 5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ.
ಈ ಸುದ್ದಿ ಓದಿ:- ಜಮೀನು ಖರೀದಿ ಮಾಡುವ ಮುನ್ನ ಈ ದಾಖಲೆ ಚೆಕ್ ಮಾಡುವುದು ಕಡ್ಡಾಯ.! ಹೊಸ ರೂಲ್ಸ್ ತಂದ ಸರ್ಕಾರ
7.50% ವಾರ್ಷಿಕ ಬಡ್ಡಿ ಅನ್ವಯವಾಗಲಿದೆ. 5 ವರ್ಷಕ್ಕೆ ರೂ.7,24,974 ಲಕ್ಷ ಹಣವನ್ನು ಹಿಂಪಡೆಯಬಹುದು, ಈ ಪ್ರಕಾರವಾಗಿ ನಿಮ್ಮ ಹೂಡಿಕೆ ಮೇಲೆ SBI ನಿಂದ ಬರೋಬ್ಬರಿ ರೂ.2,24,974 ಬಡ್ಡಿ ಹಣ ದೊರಕಿದಂತಾಗುತ್ತದೆ.