ಜಮೀನಿಗೆ ಸಂಬಂಧಪಟ್ಟ ಹಾಗೆ ಅನೇಕ ವಿಚಾರಗಳು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಪ್ರತಿಯೊಬ್ಬ ರೈತನಿಗೂ ಹಾಗೂ ರೈತರಲ್ಲದಿದ್ದರೂ ಈ ಅಗತ್ಯ ಮಾಹಿತಿಯ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕು. ಜಮೀನು ಸರ್ವೆ ಮಾಡಿಸಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡುವುದರ ಬಗ್ಗೆ ಕೇಳಿರುತ್ತೇವೆ ಆದರೆ ಸರ್ವೆ ಯಾವ ಉದ್ದೇಶಕ್ಕಾಗಿ ಮಾಡಿರುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಂಡಿರುವುದಿಲ್ಲ.
ಜಮೀನು ಸರ್ವೆ ಮಾಡಿಸುವುದು ಹಾಗೂ ಸರ್ವೆಯಲ್ಲಿ ಹದ್ದುಬಸ್ತು ಮಾಡಿಸುವುದು ಎರಡು ಒಂದೆಯೇ ಅಥವಾ ಬೇರೆಯೇ ಎನ್ನುವ ಗೊಂದಲ ಅನೇಕರಿಗೆ ಇದೆ. ಈ ಅಂಕಣದಲ್ಲಿ ಇದರ ಕುರಿತಾದ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇನೆ ಒಂದು ಜಮೀನಿಗೆ ಸಂಪೂರ್ಣವಾಗಿ ಅಳತೆ ಮಾಡುವುದನ್ನು ಮತ್ತು ಎಲ್ಲಾ ವಿಧಗಳ ಮೂಲಕ ಅಳತೆ ಮಾಡುವುದನ್ನು ಸರ್ವೇ ಎನ್ನುತ್ತಾರೆ.
ಹೆಣ್ಣು ಮಕ್ಕಳಿಗೆ ಈ ಆಸ್ತಿಯಲ್ಲಿ ಯಾವುದೇ ಪಾಲು ಸಿಗುವುದಿಲ್ಲ.! ಸಿಕ್ಕರು ಇದನ್ನ ಮರೆತರೆ ಸಿಕ್ಕ ಆಸ್ತಿಯು ಕೈ ತಪ್ಪಿ ಹೋಗುತ್ತದೆ ಎಚ್ಚರ.!
ಹಾಗಾದರೆ ಹದ್ದುಬಸ್ತು ಎಂದರೇನು ಎಂದು ಕೇಳಿದರೆ ಗಡಿ ಗುರುತಿಸುವುದು ಎಂದು ಹೇಳಬಹುದು. ಜಮೀನಿನ ಬೌಂಡರಿ ಬದು ಒಡೆದು ಹೋಗಿದ್ದರೆ, ಕಲ್ಲು ಗೂಟಗಳು ಕಾಣೆಯಾಗಿದ್ದರೆ, ಅಕ್ಕ ಪಕ್ಕದ ಜಮೀನಿನವರು ನಿಮ್ಮ ಜಾಗವನ್ನು ಒತ್ತುವರಿ ಮಾಡಿದ್ದರೆ ಜಮಿನಿಗೆ ಬೌಂಡರಿ ಹಾಕಿಸಿಕೊಳ್ಳಲು ಮಾಡುವ ಸರ್ವೆಯನ್ನು ಹದ್ದುಬಸ್ತು ಎನ್ನುತ್ತಾರೆ.
ಸರ್ವೆ ಮತ್ತು ಹದ್ದುಬಸ್ತಿಗೆ ಇರುವ ಕೆಲವು ಕಾಮನ್ ವ್ಯತ್ಯಾಸಗಳು ಏನೆಂದರೆ, ಸರ್ವೆ ಮಾಡುವಾಗ 11E, ತತ್ಕಾಲ್ ಪೋಡಿ ಸರ್ವೆ, ಪೋಡಿ ಸರ್ವೆ ಇವುಗಳನ್ನು ಮಾಡುತ್ತಾರೆ. ಆದರೆ ಹದ್ದುಬಸ್ತು ಸರ್ವೆಯಲ್ಲಿ ಜಮೀನಿನ ಬೌಂಡರಿ ಹಾಕಿ ವರದಿ ನೀಡುತ್ತಾರೆ. ಸರ್ವೆ ಮಾಡಿಸಲು ಅರ್ಜಿ ಹಾಕುವಾಗ ಜಮೀನು ಮಾರುವವರ ಅಥವಾ ಕೊಂಡುಕೊಳ್ಳುವವರ ಆಧಾರ್ ಕಾರ್ಡ್, ಜಮೀನಿನ ಪಹಣಿ ಜೊತೆಗೆ, 11ಬಿ ನಮೂನೆ ಫಾರಂ ಭರ್ತಿ ಮಾಡಿ ಸಲ್ಲಿಸಬೇಕು.
ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗುವುದಿಲ್ಲ.! ಹಾಗಾದ್ರೆ ಯಾವ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇರುತ್ತೆ.? ತಂದೆ ಇಲ್ಲದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇರಲ್ವಾ?…
ಹದ್ದುಬಸ್ತು ಮಾಡಿಸಲು ಅರ್ಜಿ ಸಲ್ಲಿಸುವಾಗ ಮಾಲೀಕನ ಆಧಾರ್ ಕಾರ್ಡ್, ಜಮೀನಿನ ಪಹಣಿ ಮತ್ತು ಜಮೀನಿನ ಸುತ್ತ ನಾಲ್ಕು ಕಡೆ ಇರುವ ಆ ಜಮೀನಿನ ಮಾಲೀಕರ ಹೆಸರುಗಳು ಹಾಗೂ ಅವರ ವಿಳಾಸವನ್ನು ನೀಡಬೇಕು 11 E ಸ್ಕೆಚ್ ಮತ್ತು ಪೋಡಿ ಸರ್ವೆಗಳಲ್ಲಿ ಸಂಬಂಧಪಟ್ಟವರು ಹಾಜರಿದ್ದರೆ ಸಾಕು.
ಆದರೆ ಹದ್ದುಬಸ್ತಿಗಾಗಿ ಸರ್ವೇ ಮಾಡುವಾಗ ಸಂಬಂಧ ಪಟ್ಟವರು ಮತ್ತು ಅಕ್ಕಪಕ್ಕದ ಜಮೀನಿನ ಮಾಲೀಕರಿಗೆ ನೋಟಿಸ್ ಕೊಟ್ಟು ವಿಷಯ ತಿಳಿಸಲಾಗುತ್ತದೆ ಮತ್ತು ಗೊತ್ತುಪಡಿಸಿದ ದಿನದಂದು ಅವರ ಸಮ್ಮುಖದಲ್ಲಿಯೇ ಈ ಕಾರ್ಯ ನಡೆಯುತ್ತದೆ. ಸಾಮಾನ್ಯವಾದ ಸರ್ವೆಗಳಲ್ಲಿ ಹೊಸ ಪ್ರತ್ಯೇಕ ನಕ್ಷೆ ತಯಾರಿಸಿ ಅದಕ್ಕೆ ಆಕಾರ್, ಟಿಪ್ಪಣಿ, ಫಾರಂ 10 ತಯಾರಿಸುತ್ತಾರೆ.
ನಮಗೆ ಬರಬೇಕಾದ ಆಸ್ತಿಯನ್ನು ವಿಲ್ ಮೂಲಕ ನಮ್ಮ ರಕ್ತ ಸಂಬಂಧಿಕರಿಗೆ ಅಥವಾ ಬೇರೆಯವರಿಗೆ ವಿಲೇ ಮಾಡಿದ್ರೆ ಆ ಆಸ್ತಿ ಪಡೆಯೋದು ಹೇಗೆ ನೋಡಿ.!
ಆದರೆ ಹದ್ದುಬಸ್ತುವಿನಲ್ಲಿ ಇದನ್ನು ಮಾಡುವುದಿಲ್ಲ ನಿಮ್ಮ ಮೂಲ ದಾಖಲೆ ಮತ್ತು ಟಿಪ್ಪಣಿ ಪ್ರಕಾರ ಭೂಮಿ ಅಳತೆ ಮಾಡಿ ಗಡಿ ಗುರುತಿಸಿ, ಸಹಿ ಮಾಡಿ ವರದಿ ನೀಡುತ್ತಾರೆ. ಭೂಮಿಯನ್ನು ಮಾರಾಟ ಮಾಡುವಾಗ ಕುಟುಂಬ ಸದಸ್ಯರ ನಡುವೆ ಜಮೀನು ವಿಭಾಗ ಆಗುವಾಗ 11E ಸ್ಕೆಚ್ ಮತ್ತು ಪೋಡಿ ಆಧಾರದ ಮೇಲೆ ಸರ್ವೆ ಮಾಡಿಕೊಳ್ಳಬಹುದು.
ಆದರೆ ಜಮೀನು ಒತ್ತುವರೆ ಆಗಿದ್ದಾಗ ಗಡಿನಾಶ ಆಗಿದ್ದಾಗ ಮಾತ್ರ ಹದ್ದುಬಸ್ತು ಸರ್ವೇ ಮಾಡಿಸಲಾಗುತ್ತದೆ. ಜಮೀನು ವಿಭಾಗ ಮತ್ತು ಹಕ್ಕು ಬದಲಾವಣೆ ಇದ್ದಾಗ ಸರ್ವೇ ಮಾಡುವುದರಿಂದ ನೋಂದಣಿ ಮತ್ತು ಮ್ಯೂಟೇಷನ್ ಇರುತ್ತದೆ. ಆದರೆ ಹದ್ದುಬಸ್ತು ಸರ್ವೆಯಲ್ಲಿ ಹೀಗಿರುವುದಿಲ್ಲ, ಪಕ್ಕದವರು ಒತ್ತುವರಿ ಮಾಡಿಕೊಂಡಿದ್ದರೆ ಅದರ ವಿಸ್ತೀರ್ಣ ನಕ್ಷೆ ಮತ್ತು ಎಲ್ಲಾ ಮಾಲೀಕರ ಸಾಕ್ಷಿ ಹಾಗೂ ಸಹಿ ತೆಗೆದುಕೊಳ್ಳಲಾಗುತ್ತದೆ ಅಷ್ಟೇ.
ಈ ಕುರಿತಾಗಿ ಕೆಲ ಪ್ರಮುಖ ಅಂಶಗಳು :-
* ಹದ್ದುಬಸ್ತು ಸರ್ವೆ ಮಾಡಿಸಿ ಒತ್ತುವರಿ ಆಗಿರುವ ಬಗ್ಗೆ ತಿಳಿಸಿದರು ಪಕ್ಕದ ಜಮೀನಿನ ಮಾಲೀಕನು ಸ್ಥಳ ಬಿಡದೆ ಇದ್ದಾಗ ನ್ಯಾಯಾಲಯದಲ್ಲಿ ನ್ಯಾಯಪಡುವ ಸಲುವಾಗಿ ಈ ವರದಿ ಬಳಸಬಹುದು
* ಒಂದೇ RTCಯಲ್ಲಿ ಹೆಚ್ಚು ಸರ್ವೆ ನಂಬರ್ ಗಳು ಇದ್ದಾಗ ಮೊದಲು ತಾತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಿ ನಂತರ ಹದ್ದುಬಸ್ತಿಗಾಗಿ ಅರ್ಜಿ ಹಾಕಬೇಕಾಗುತ್ತದೆ.
* ಪೋಡಿ ಮತ್ತು 11E ಸರ್ವೆ ಮಾಡುವಾಗ ಜಮೀನಿನ ಮುಖ್ಯ ಗುರುತಿನಿಂದ ಪ್ರಾರಂಭಿಸುತ್ತಾರೆ. ಪೂರ್ಣ ಸರ್ವೆ ಹದ್ದುಬಸ್ತು ಕಂಡುಹಿಡಿಲು ಶಿಮೆ ಅಂದರೆ ಎರಡು ಗ್ರಾಮಗಳ ನಡುವೆ ಇರುವ ಬಾರ್ಡರ್ ನಿಂದ ಆರಂಭಿಸುತ್ತಾರೆ.
* ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿಗಾಗಿ ಭೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಿ ಮಾಹಿತಿ ಪಡೆಯಿರಿ.