2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ (Karnataka State) ಉಂಟಾದ ಭೀಕರ ಬರಗಾಲ (Drought) ರೈತರನ್ನು ತತ್ತರಿಸುವಂತೆ ಮಾಡಿದೆ. ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ರೈತನಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ.
ವ್ಯವಸಾಯ ನೆಲಕಚ್ಚಿರುವುದರಿಂದ ಅಪಾರ ಬೆಳೆ ಹಾನಿ (Croploss) ಆಗಿರುವುದರಿಂದ ರೈತ ಸಾಲದ ಹೊರೆಯನ್ನು ಹೆಚ್ಚಿಸಿಕೊಂಡಿದ್ದಾನೆ ಅಲ್ಲದೇ ದಿನನಿತ್ಯದ ಖರ್ಚುವೆಚ್ಚಕ್ಕೂ ಸಮಸ್ಯೆ ಪಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬೆಳೆ ಪರಿಹಾರದ ಹಣ ಸಿಕ್ಕರೆ ಸಾಕಷ್ಟು ಅನುಕೂಲವಾಗುತ್ತದೆ.
ಜಮೀನಿನ ಜಂಟಿ ಖಾತೆ ಪ್ರತ್ಯೇಕ ಮಾಡುವುದು ಹೇಗೆ.? ಜಮೀನು ಇರುವವರು ಈ ಮಾಹಿತಿ ತಿಳಿದುಕೊಳ್ಳಿ.!
ಹಾಗಾಗಿ ಪ್ರತಿಪಕ್ಷಗಳು ಸೇರಿದಂತೆ ರೈತರ ಗುಂಪು ಬೆಳೆ ಪರಿಹಾರದ ಹಣ ನೀಡುವಂತೆ ಆಕ್ಷೇಪಿಸುತ್ತಿವೆ. ಅಂತಿಮವಾಗಿ ಸರ್ಕಾರದ ವತಿಯಿಂದ ಬೆಳೆ ಪರಿಹಾರ ಹಣ ಪಡೆಯಲು ಅರ್ಹರಾಗಿರುವ ರೈತರ ಪಟ್ಟಿ ಬಿಡುಗಡೆ ಆಗಿದೆ. ಕೇಂದ್ರ ಸರ್ಕಾರದಿದಂದ ಬರ ನಿರ್ವಹಣೆಗಾಗಿ NDRF ಅನುದಾನವನ್ನು ನಿರೀಕ್ಷಿಸಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಹಲವಾರು ಬಾರಿ ಸಂಪರ್ಕಿಸಿತ್ತು.
ಅಂತಿಮವಾಗಿ ಕೇಂದ್ರ ಸರ್ಕಾರದ ಗೃಹ ಕಾರ್ಯಾಲಯವು ದಿನಾಂಕ 17-07-2023ರಲ್ಲಿ ಆಜ್ಞೆಯೊಂದನ್ನು ಹೊರಡಿಸಿ SDRF ಮಾರ್ಗಸೂಚಿಯನ್ವಯ 33% ಕ್ಕಿಂತ ಹೆಚ್ಚಿನ ಬೆಳೆ ಹಾನಿಗೆ ಆಗಿರುವ ಪ್ರದೇಶಗಳಲ್ಲಿ ಅರ್ಹ ರೈತನಿಗೆ ಗರಿಷ್ಠ 2 ಹೆಕ್ಟೇರ್ ಗೆ ಸೀಮಿತಗೊಳಿಸಿ ಇನ್ ಪುಡ್ ಸಬ್ಸಿಡಿ(Subsidy)ಯನ್ನು ನಿಗದಿಪಡಿಸಿದೆ.
ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಡೆಪೋಸಿಟ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ ಗೊತ್ತಾ.?
ಬೆಳೆಹಾನಿ ಪರಿಹಾರದ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಮಳೆಯಾಶ್ರಿತ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ ಗಳಿಗೆ ರೂ.8,500 ಹಾಗೂ ನೀರಾವರಿ ಬೆಳೆಗೆ ರೂ.17,000 ಮತ್ತು ಬಹು ವಾರ್ಷಿಕ ಬೆಳೆ ನಷ್ಟ ಪರಿಹಾರಕ್ಕೆ ರೂ.22,500 ಪರಿಹಾರವನ್ನು ನಿಗದಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಒಟ್ಟು 105 ಕೋಟಿಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಕರಿಗೆ ಬಿಡುಗಡೆ ಕೂಡ ಮಾಡಿದೆ. ಆದರೆ ಸರ್ಕಾರವು ಪರಿಹಾರದ ಹಣವನ್ನು ಪಡೆಯಲು ಯಾವ ರೈತರು FID ಮಾಡಿಸಿರುತ್ತಾರೆ ಅಂತಹ ರೈತರಿಗೆ ಮಾತ್ರ ಈ ಹಣ ತಲುಪಲು ಸಾಧ್ಯ.
ಸಾಲ ಕೊಟ್ಟವರು ಹಾಗೂ ಸಾಲ ಪಡೆದವರು ಈ ವಿಷಯವನ್ನು ತಪ್ಪದೆ ತಿಳಿದುಕೊಂಡಿರಿ.!
ಈ ಬಗ್ಗೆ ತಿಂಗಳ ಹಿಂದೆ ಸರ್ಕಾರವು ಕಟ್ಟುನಿಟ್ಟದ ಸೂಚನೆ ಕೊಟ್ಟಿತ್ತು ಮತ್ತು ಇದಕ್ಕೆ ಸಂಬಂಧಿಸಿದ ಪ್ರಕಟಣೆಯನ್ನು ಕೂಡ ಹೊರಡಿಸತ್ತು. ಆ ಪ್ರಕಾರವಾಗಿ ಯಾವ ರೈತರು ತಮ್ಮ ಆಧಾರ್ ಕಾರ್ಡ್, ಎಲ್ಲಾ ಸರ್ವೆ ನಂಬರ್ ಇರುವ ಪಹಣಿ ಮತ್ತು ಬ್ಯಾಂಕ್ ಪಾಸ್ ಬುಕ್ ವಿವರ ಕೊಟ್ಟು ಫ್ರೂಟ್ಸ್ (FRUITS) ಫಲಿತಾಂಶದಲ್ಲಿ ನೋಂದಾಯಿಸಿಕೊಂಡು FID ಪಡೆದಿರುತ್ತಾರೆ.
ಅಂತಹ ರೈತರಿಗೆ ಮಾತ್ರ ಬೆಳೆ ಪರಿಹಾರ ಹಣ ಸಿಗುತ್ತಿದೆ. ಸರ್ಕಾರದಿಂದ ಬೆಳೆ ಹಾನಿ ಪರಿಹಾರದ ಪಟ್ಟಿ ಬಿಡುಗಡೆ ಆಗಿದೆ. ನಿಮ್ಮ ಮೊಬೈಲ್ ನಲ್ಲಿ ನಾವು ಹೇಳುವ ವಿಧಾನ ಮೂಲಕ ನಿಮ್ಮ ಹೆಸರು ಇದೆಯೇ ಇಲ್ಲವೇ ಚೆಕ್ ಮಾಡಿಕೊಳ್ಳಿ.
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!
ಮೊದಲಿಗೆ https://parihara.karnataka.gov.in/Service87/ ಈ ವೆಬ್ ಸೈಟ್ ಗೆ ಭೇಟಿ ಕೊಡಿ
* ನಂತರ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೊಬಳಿ, ಗ್ರಾಮ, ವರ್ಷ, ಹಂಗಾಮು ಹಾಗೂ ಬೆಳೆಹಾನಿ ಕಾರಣ select ಮಾಡಿ,Get report ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* ಈ ಹಿಂದೆಯೂ ನೀವು ಪರಿಹಾರದ ಹಣವನ್ನು ಪಡೆದಿದ್ದರೆ ನಿಮಗೆ ಇಲ್ಲಿಯವರೆಗೂ ಜಮಾ ಆದ ಬೆಳೆಹಾನಿ (bele hani parihara) ಜಮಾ ಮಾಹಿತಿ ದೊರೆಯಲಿದೆ.
* ವೀವ್ ಸ್ಟೇಟಸ್ (view status) ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮ್ಮ ಹೆಸರು , ಬ್ಯಾಂಕಿನ ಹೆಸರು , ಮೊತ್ತ , ವಿಳಾಸ ಮತ್ತು ಮುಂತಾದವುಗಳನ್ನು ಚೆಕ್ ಮಾಡಬಹುದು. ನೀವೇನಾದರೂ ಈ ಹಿಂದೆಯೂ ಕೂಡ ಬೆಳೆ ಹಾನಿ ಪರಿಹಾರ ಹಣ ಪಡೆದಿದ್ದರೆ ಈ ಸಾಲಿನ ಹಣ ಕೂಡ ಅದೇ ಖಾತೆಗೆ ಬರಲಿದೆ.