ಕಳೆದ ಒಂದು ದಶಕದಿಂದ ATM ಕಾರ್ಡ್ ಗಳು ನಮ್ಮೆಲ್ಲರ ಜೀವನದ ಬಹು ಮುಖ್ಯ ಭಾಗವಾಗಿ ಹೋಗಿದೆ. ATM ಕಾರ್ಡ್ ಗಳ ಮೂಲಕ ನಾವು ಸರಾಗವಾಗಿ ನಮ್ಮ ಖಾತೆಗಳಲ್ಲಿರುವ ಹಣವನ್ನು ವಿಥ್ ಡ್ರಾ ಮಾಡಬಹುದು. ಹಣವನ್ನು ಜೇಬಿನಲ್ಲಿ ತುಂಬಿಕೊಂಡು ಓಡಾಡಬೇಕಾಗಿದ್ದ ಪರಿಸ್ಥಿತಿಯನ್ನು ATM ಕಾರ್ಡ್ ತಪ್ಪಿಸಿ ನಮ್ಮೆಲ್ಲರ ಮನಸ್ಸಿನಲ್ಲಿ ಬಹುದೊಡ್ಡ ಸ್ಥಾನ ಗಿಟ್ಟಿಸಿಕೊಂಡಿದೆ.
ಈಗ ನಿಧಾನವಾಗಿ ದೇಶ ಕ್ಯಾಸ್ಟ್ ಲೆಸ್ (Cashless) ವ್ಯವಹಾರಕ್ಕೆ ಹೊಂದಿಕೊಳ್ಳುತ್ತಿದೆ. ಸಣ್ಣದಿನಸಿ ಅಂಗಡಿಯಿಂದ ಹಿಡಿದು ಹೆಸರಾಂತ ಶಾಪಿಂಗ್ ಕಾಂಪ್ಲೆಕ್ಸ್ ಗಳಲ್ಲಿ ಕೂಡ ನಾವು UPI ಆಧಾರಿತ ಆಪ್ ಗಳ ಮೂಲಕ ಹಣ ವಹಿವಾಟು ಮಾಡಬಹುದು. ATM ನಂತೆಯ UPI ಕೂಡ ಬಹುದೊಡ್ಡ ಪಾತ್ರ ವಹಿಸುತ್ತಿದ್ದು ಹೆಚ್ಚಿನ ವೈಶಿಷ್ಟ್ಯದ ಮೂಲಕ ಇನ್ನಷ್ಟು ಹತ್ತಿರವಾಗಿದೆ ಎಂದರೂ ತಪ್ಪಾಗಲಾರದು. ಈಗ ಇದಕ್ಕೆ ಮತ್ತೊಂದು ಗರಿ ಏರುತ್ತಿದೆ.
LIC ಇಂದ ಗ್ರಾಹಕರಿಗೆ ಬಂಪರ್ ಆಫರ್, ಲ್ಯಾಪ್ಸ್ ಆದ LIC ನವೀಕರಣಕ್ಕೆ ಸುವರ್ಣಾವಕಾಶ.!
ಇನ್ನು ಮುಂದೆ ATM ಮಿಷನ್ ಗಳಲ್ಲಿ ATM ಕಾರ್ಡ್ ಇಲ್ಲದೆ ನಾವು UPI ಆಪ್ ಗಳಿಂದ QR Code ಸ್ಕ್ಯಾನ್ ಮಾಡುವ ಮೂಲಕವೇ ಹಣವನ್ನು ಪಡೆಯಬಹುದು.ಮಂಗಳವಾರ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ (FinTech) ಫೆಸ್ಟ್‌ನಲ್ಲಿ ATM ಕಾರ್ಡ್ ಬಳಕೆ ಮಾಡದೆ ಹಣವನ್ನು ಡ್ರಾ ಮಾಡಬಹುದಾದ ಯುಪಿಐ ಎಟಿಎಂ (UPI ATM) ಅವಕಾಶದ ಬಗ್ಗೆ ಮೊದಲ ಬಾರಿಗೆ ಪ್ರದರ್ಶನ ಮಾಡಲಾಯಿತು.
ಭಾರತದ ಮೊದಲ UPI ATM ಇದಾಗಿದ್ದು, ಈ ವಿಶೇಷ ATM ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Corporation of India) ಮತ್ತು NCR ಕಾರ್ಪೊರೇಷನ್ ಅಭಿವೃದ್ಧಿ ಪಡಿಸಿ ನಡೆಸುತ್ತಿದೆ. ಫಿನಾಟೆಕ್ ಖ್ಯಾತಿಯ ರವಿಸುತಂಜನಿಯವರು (Ravisuthanjani) ಯವರು ಕಾರ್ಯಕ್ರಮದಲ್ಲಿ UPI ಆಪ್ ಮೂಲಕ ATM ಮಿಷನ್ ನಲ್ಲಿ ಹಣ ಪಡೆಯಬಹುದು ಎನ್ನುವುದನ್ನು ತೋರಿಸಿದ್ದಾರೆ.
ರವಿಸುತಂಜನಿಯವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಗುರುವಾರ ಕೇಂದ್ರ ಸಚಿವ ಪೀಯೂಷ್ ಗೋಯಲ್ (Piyush Goyal) ತಮ್ಮ ಎಕ್ಸ್ ಪೇಜ್ ನಲ್ಲಿ ಇದಕ್ಕೆ ಸಂಬಂಧಪಟ್ಟ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ ರವಿಸುತಂಜನಿ ಮೊದಲು ATM ಸ್ಕ್ರೀನ್ ಮೇಲೆ ತೋರಿಸಿರುವ UPI ಕಾರ್ಡ್‌ಲೆಸ್ ಕ್ಯಾಶ್ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತಾರೆ.
ನಂತರ ತಾವು ಪಡೆಯಲು ಬಯಸುವ ಹಣದ ಮೊತ್ತವನ್ನು ನಮೂದಿಸುತ್ತಾರೆ. ಈ ವೇಳೆ ATM ಸ್ಕ್ರೀನ್ ಮೇಲೆಯೇ QR Code ಗೋಚರಿಸುತ್ತದೆ. ಬಳಿಕ ಅವರು ಭೀಮ್ ಆ್ಯಪ್ ಅನ್ನು ಬಳಸಿಕೊಂಡು ಸ್ಕ್ಯಾನ್ ಮಾಡುತ್ತಾರೆ. ನಂತರ ತಮ್ಮ UPI ಪಿನ್ ಎಂಟ್ರಿ ಮಾಡಿ ಹಣ ಪಡೆಯುತ್ತಾರೆ. UPI ATM ನ್ನು ಸಾಮಾನ್ಯ ATM ನಂತೆಯೇ ಬಳಸಬಹುದು ಆದರೆ ಒಂದು ದಿನಕ್ಕೆ ಇಂತಿಷ್ಟೇ ಮಿತಿ ಎಂದು ನಿಗದಿ ಪಡಿಸಿ ಉಚಿತ ಬಳಕೆಯ ಮಿತಿಯನ್ನು ಮೀರಿ ಹಣ ಪಡೆದುಕೊಂಡಾಗ ಶುಲ್ಕ ಹೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸದ್ ಭೀಮ್ UPI ಅಪ್ಲಿಕೇಶನ್‌ನಲ್ಲಿ (Bhim UPI) ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಎಂ ಇತರ ಅಪ್ಲಿಕೇಶನ್‌ಗಳಲ್ಲಿ ಬಳಕೆಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಸೇವೆ ಇನ್ನು ಕೂಡಾ ಸಾರ್ವಜನಿಕವಾಗಿ ನಿಯೋಜಿಸಲಾಗಿಲ್ಲ. ಮುಂದೆ ಹಂತ ಹಂತವಾಗಿ ಹೊರತರುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿ ಈ ಹೊಸ ಫೀಚರ್ ಅನ್ನು ‘ಗೇಮ್ ಚೇಂಜರ್’ ಎಂದು ಕರೆದು, ತಾವೆಲ್ಲ ಇದಕ್ಕಾಗಿ ಕಾತುರದಿಂದ ಪ್ರತಿಕ್ರಿಯಿಸಿದ್ದಾರೆ.
ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಬಿಗ್ ಶಾಕ್, ಇನ್ಮುಂದೆ ಉಚಿತ ಪ್ರಯಾಣ ಮಾಡಲು ಹಣ ಕೊಡಲೇಬೇಕು.!