ಆಗಸ್ಟ್ 30, 2023 ಕರ್ನಾಟಕದ ಇತಿಹಾಸದಲ್ಲಿ ಒಂದು ಐತಿಹಾಸಿಕ ದಿನವಾಗಿ ದಾಖಲಾಯಿತು. ಯಾಕೆಂದರೆ, ಕರ್ನಾಟಕದ ನಾಲ್ಕನೇ ಗ್ಯಾರೆಂಟಿ ಯೋಜನೆಯಾಗಿ (Guarantee Scheme) ಕರ್ನಾಟಕದ ಮಹಿಳೆಯರೆಲ್ಲರೂ ಮಹತ್ವಕಾಂಕ್ಷೆಯಿಂದ ಕಾಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಜಾರಿಯಾದ ದಿನವಿದು.
ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಲು ಮತ್ತು ಬಡ ಕುಟುಂಬಗಳಿಗೆ ನೆರವಾಗಲು ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬದ ಯಜಮಾನಿ ಖಾತೆಗೆ ಪ್ರತಿ ತಿಂಗಳು 2000 ಸಹಾಯಧನವನ್ನು ಕೊಡುವುದಾಗಿ ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಆಶ್ವಾಸನೆ ಪ್ರಕಾರ ಆಗಸ್ಟ್ 30 ಬುಧವಾರದಂದು ಯೋಜನೆಗೆ ಚಾಲನೆ ನೀಡಿದೆ.
ಮೈಸೂರಿನ (Mysore) ಮಹಾರಾಜ ಕಾಲೇಜು ಆವರಣದಲ್ಲಿ ಬೃಹತ್ ಸಮಾರಂಭವನ್ನು ಏರ್ಪಡಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಿ ಈ ಕಾರ್ಯಕ್ರಮ (Gruhalakshmi launch) ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಭಾಗಿಯಾಗಿದ್ದರು.
ಅಲ್ಲದೇ ಈ ಸಂಭ್ರಮವನ್ನು ರಾಜ್ಯದ 11,000 ಕಡೆಗಳಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಕೂಡ ಸಂಭ್ರಮಿಸಲಾಗಿದೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಡಿಜಿಟಲ್ ಬಟನ್ ಒತ್ತಿದ (Digital button press) ಕೂಡಲೇ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಅನೇಕ ಫಲಾನುಭವಿಗಳ ಖಾತೆಗೆ 2,000 ಸಹಾಯಧನ ವರ್ಗಾವಣೆಯಾಗಿ SMS ಸಂದೇಶ ಕೂಡ ಹೋಗಿದೆ.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿರ್ಮಾಣಕ್ಕೆ 4 ಲಕ್ಷ ಸಹಾಯಧನ ಬಿಡುಗಡೆ, ಆಸಕ್ತ ರೈತರು ಅರ್ಜಿ ಸಲ್ಲಿಸಿ.!
ಗೃಹಲಕ್ಷ್ಮಿ ಯೋಜನೆಗೆ 1.28 ಕೋಟಿ ಕುಟುಂಬದ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆ.ಪ್ರಸಕ್ತ ವರ್ಷದಲ್ಲಿ 17,500 ಕೋಟಿ ಬಜೆಟ್ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ರೀತಿ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಪೈಕಿ ಲಕ್ಷಾಂತರ ಮಹಿಳೆಯರ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ನೆನ್ನೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ ಕೂಡಲೇ AX-GOKWCD ಕಡೆಯಿಂದ SMS ಹೋಗಿದೆ.
ಆದರೆ ಈ ಸಂದೇಶ ಪಡೆದಿಲ್ಲ ಮತ್ತು ಈ ರೀತಿ SMS ಪಡೆದಿದ್ದರೂ ಕೂಡ ಖಾತೆಗೆ ಹಣ ಕೂಡ ವರ್ಗಾವಣೆಯಾಗಿಲ್ಲ, ಹೀಗಾಗಿ ಅನೇಕರು ಗಾಬರಿಕೊಂಡಿದ್ದಾರೆ. ನಮಗೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನವು ಸಿಗುವುದಿಲ್ಲವೇ ಎನ್ನುವ ಗೊಂದಲದಲ್ಲಿದ್ದಾರೆ. ಈ ರೀತಿ ಚಿಂತೆ ಪಡುವ ಅಗತ್ಯ ಇಲ್ಲ ಯಾಕೆಂದರೆ ಕೋಟ್ಯಾಂತರ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ SMS ಕಳುಹಿಸಿದರೆ ಸರ್ವರ್ ಸಮಸ್ಯೆ ಅಥವಾ ನೆಟ್ವರ್ಕ್ ಸಮಸ್ಯೆ (Server and network issue) ಉಂಟಾಗಿ ತಲುಪದೇ ಇರಬಹುದು ಅಥವಾ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇದು ವಿಳಂಬ ಕೂಡ ಆಗಿರಬಹುದು.
SMS ನಲ್ಲಿ ಅಭಿನಂದನೆಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ ಅನುಮೋದಿಸಲಾಗಿದೆ, ಆಗಸ್ಟ್ 2023 ರಿಂದ 2000 ಸಹಾಯಧನವನ್ನು ನಿಮ್ಮ ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಧನ್ಯವಾದಗಳು, ಕರ್ನಾಟಕ ಸರ್ಕಾರ ಎನ್ನುವ ಮಾಹಿತಿ ಇರುತ್ತದೆ ಈ ರೀತಿ SMS ಪಡೆದಿದ್ದರು ಕೂಡ ಹಣ ಖಾತೆಗೆ ವರ್ಗಾವಣೆ ಆಗಲು ಎರಡು ಮೂರು ದಿನಗಳು ಆಗಬಹುದು ಇನ್ನು SMS ಪಡೆಯದೇ ಇದ್ದವರು ಗಾಬರಿಕೊಳ್ಳುವ ಅಗತ್ಯ ಇಲ್ಲ.
ಸೆಪ್ಟೆಂಬರ್ 5ರ ಒಳಗಡೆ ನೂರಕ್ಕೆ ನೂರರಷ್ಟು ಎಲ್ಲಾ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೂ ಕೂಡ ಹಣ ವರ್ಗಾವಣೆ ಆಗುತ್ತದೆ ಎನ್ನುವ ಗ್ಯಾರಂಟಿಯನ್ನು ಸರ್ಕಾರ ನೀಡಿದೆ. ಹೀಗಾಗಿ ಕಾದು ನೋಡೋಣ.