ಗ್ಯಾರೆಂಟಿ ಯೋಜನೆಗಳಲ್ಲಿ (Gyaranty Schemes) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಯಶಸ್ವಿಯಾಗಿ ಐದು ತಿಂಗಳು ಪೂರೈಸಿದೆ. ಈ ಯೋಜನೆ ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದಲ್ಲಿ ಮುಖ್ಯಸ್ಥೆ ಸ್ಥಾನದಲ್ಲಿರುವ ಮಹಿಳೆಯು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2000 ಸಹಾಯಧನವನ್ನು ಪಡೆಯುತ್ತಿದ್ದಾರೆ.
ಇದುವರೆಗೆ ಐದು ಕಂತಿನ ಹಣ ಅರ್ಹ ಫಲಾನುಭವಿಗಳಿಗೆ DBT ಮೂಲಕ ವರ್ಗಾವಣೆಯಾಗಿದ್ದು, 6ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಹಣವು ಕೂಡ ಸರ್ಕಾರದಿಂದ ವರ್ಗಾವಣೆಯಾಗಿದ್ದು ಫಲಾನುಭವಿಗಳ ಖಾತೆಗೆ ತಲುಪುವುದಷ್ಟೇ ಬಾಕಿ ಇದೆ. ಆದರೆ ಇದನ್ನು ನಡುವೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಮಸ್ಯೆಯಾಗಿತ್ತು ಯೋಜನೆಗೆ ಇದುವರೆಗೂ ನೋಂದಾಯಿಸಿ ಕೊಂಡಿರುವ.
1.20 ಕೋಟಿ ಮಹಿಳೆಯರಲ್ಲಿ ಲಕ್ಷಾಂತರ ಮಹಿಳೆಯರಿಗೆ ಇನ್ನೂ ಸಹ ಒಂದು ಕಂತಿನ ಹಣ ಕೂಡ ಪಡೆಯಲು ಸಾಧ್ಯವಾಗಿಲ್ಲ, ಇನ್ನು ಕೆಲವರು ಮಹಿಳೆಯರು ಮೊದಲ ಮತ್ತು ಎರಡನೇ ತಿಂಗಳ ಹಣವನ್ನು ಪಡೆದಿದ್ದರು ನಂತರ ಅವರ ಖಾತೆಗೆ ಹಣ ಬರುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಡಿಸೆಂಬರ್ ತಿಂಗಳಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Camp) ಕೂಡ ಏರ್ಪಡಿಸಲಾಗಿತ್ತು.
ಈ ಸುದ್ದಿ ಓದಿ:- ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಗೆ ಹೋಗದೆ ಮನೆಯಲ್ಲಿ ಕುಳಿತು ಬದಲಾಯಿಸುವ ವಿಧಾನ.!
ಹೀಗಿದ್ದರೂ ಕೂಡ ಇನ್ನೂ ಅನೇಕ ಮಹಿಳೆಯರಿಗೆ ಹಣ ತಲುಪಿತ್ತಿಲ್ಲ. ಇದಕ್ಕೆಲ್ಲ ಕಾರಣ ಏನು? ಪರಿಹಾರ ಹೇಗೆ? ಎನ್ನುವ ಉಪಯುಕ್ತ ಮಾಹಿತಿಯನ್ನು ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ ಈಗಾಗಲೇ ಸಮಸ್ಯೆ ಪರಿಹರಿಸಿಕೊಂಡಿದ್ದರೆ 6ನೇ ಕಂತಿನ ಹಣ ಪಡೆಯುವ ಸಮಯದಲ್ಲಿ ಬಾಕಿ ಇರುವ ಎಲ್ಲಾ ಕಂತುಗಳ ಹಣ ಕೂಡ ಸಿಗಲಿದೆ, ಬಲವಾದ ಮೂಲಗಳ ಮಾಹಿತಿ ಪ್ರಕಾರ ಫೆಬ್ರವರಿ ತಿಂಗಳ ಎರಡನೇ ವಾರದಿಂದ ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ 6ನೇ ಕಂತಿನ ಹಣ ವರ್ಗಾವಣೆ ಆಗಲಿದೆ.
ಕಾರಣಗಳು ಮತ್ತು ಪರಿಹಾರಗಳು:-
1. ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆ ಇರುವುದು:-
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ಯಾವುದೇ ಬ್ಯಾಂಕ್ ಖಾತೆ ದಾಖಲೆ ಕೇಳಿರಲಿಲ್ಲ. ನೇರವಾಗಿ ಮಹಿಳೆಯರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ. ಆದರೆ ಕೆಲವು ಮಹಿಳೆಯರು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮತ್ತು ಮುಖ್ಯವಾಗಿ NPCI ಮ್ಯಾಪಿಂಗ್ ಮಾಡಿಸದೆ ಇರುವುದು DBT ಮೂಲಕ ಹಣ ವರ್ಗಾವಣೆ ಮಾಡಲು ಸಮಸ್ಯೆ ತಂದಿದೆ.
ಮತ್ತೆ ಇನ್ನು ಅನೇಕ ಮಹಿಳೆಯರ ಬ್ಯಾಂಕ್ ಖಾತೆಗಳು ಇನ್ ಆಕ್ಟಿವ್ (Inactive) ಆಗಿವೆ. ಕೆಲವು ಮಹಿಳೆಯರು ಖಾತೆಗೆ ಹಣ ಜಮೆ ಆಗುತ್ತಿದ್ದರು ಆ ಖಾತೆಯ ದಾಖಲೆಗಳಲ್ಲಿ ಕಳೆದುಕೊಂಡು ಹಣ ಪಡೆಯಲು ಸಮಸ್ಯೆ ಪಡೆದಿದ್ದಾರೆ ಈ ರೀತಿ ಸಮಸ್ಯೆ ಇದ್ದವರು ಹತ್ತಿರದ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ (Post Office Saving Account) ತೆರೆಯುವುದರಿಂದ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಸೂಚಿಸಲಾಗಿದೆ. ಯಾಕೆಂದರೆ ಸರ್ಕಾರದಿಂದ ಯಾವುದೇ ಅನುದಾನ ಬಂದರೂ ಮೊದಲು ಪ್ರೈಮರಿ ಅಕೌಂಟ್ ಆಗಿ ಅಂಚೆ ಕಚೇರಿಯಲ್ಲಿ ಖಾತೆ ಇದ್ದರೆ ಅದೇ ಖಾತೆಗೆ ಹಣ ಹೋಗುತ್ತದೆ.
ಈ ಸುದ್ದಿ ಓದಿ:-ವಾಹನ ಮಾಲೀಕರಿಗೆ ಮಹತ್ವದ ಸುದ್ದಿ, HSRP ನಂಬರ್ ಪ್ಲೇಟ್ ಇಲ್ಲದೇ ಇದ್ದರೆ ಇನ್ಮುಂದೆ ದಂಡ ಗ್ಯಾರಂಟಿ, ನಿಮ್ಮ ಮೊಬೈಲ್ ಮೂಲಕವೇ ಅಪ್ಲೈ ಮಾಡಿ.!
2. ರೇಷನ್ ಕಾರ್ಡ್ ಆಕ್ಟಿವ್ ಆಗಿ ಇಲ್ಲದಿರುವುದು:-
ಅನೇಕರು 2016ರ BPL ರೇಷನ್ ಕಾರ್ಡ್ ಅರ್ಹತಾ ಮಾನದಂಡಗಳನ್ನು ಮೀರಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ ರೇಷನ್ ಕಾರ್ಡ್ ಪಡೆದಿದ್ದಾರೆ, ಇದನ್ನು ಪರಿಶೀಲಿಸಿ ಪ್ರತಿ ತಿಂಗಳು ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳಲ್ಲಿ ಸದಸ್ಯರಾಗಿರುವುದು ಮತ್ತು ಇನ್ನಿತರ ತೊಂದರೆಗಳಾಗಿರುವುದನ್ನು ಸರಿಪಡಿಸಲು ರೇಷನ್ ಕಾರ್ಡ್ ಗೆ e-KYC ಮಾಡಿಸುವುದನ್ನು ಕಡ್ಡಾಯ ಪಡಿಸಲಾಗಿದೆ.
ಈ ನಿಯಮಗಳಲ್ಲಿ ವ್ಯತ್ಯಾಸವಾಗಿರುವ ರೇಷನ್ ಕಾರ್ಡ್ ಗಳನ್ನು ಪ್ರತಿ ತಿಂಗಳು ಆಹಾರ ಇಲಾಖೆ ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದಾರೆ ಮತ್ತು ರದ್ದುಪಡಿಸುತ್ತಿದ್ದಾರೆ. ಈ ರೀತಿ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿಲ್ಲ ಎಂದರೂ ನಿಮಗೆ ಆ ತಿಂಗಳ ರೇಷನ್ ಕಾರ್ಡ್ ಆಧಾರಿತ ಯಾವುದೇ ಅನುದಾನ ಸಿಗುವುದಿಲ್ಲ. ಮಾಹಿತಿ ಕಣಜ (Mahiti Kanaja) ವೆಬ್ಸೈಟ್ನಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಏನಾಗಿದೆ ಎಂದು ತಿಳಿದುಕೊಂಡು ಸಮಸ್ಯೆ ಇದ್ದರೆ ಸರಿಪಡಿಸಿಕೊಳ್ಳಿ.
ಈ ಸುದ್ದಿ ಓದಿ:- ಅಕ್ರಮ-ಸಕ್ರಮ ಮತ್ತು ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ…
3. ಅರ್ಜಿ ಸಲ್ಲಿಕೆ ಯಶಸ್ವಿಯಾಗದೆ ಇರುವುದು:-
ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ವೇಳೆ ಸರ್ವರ್ ಒತ್ತಡ ಮತ್ತು ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದ ಅನೇಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಶಸ್ವಿಯಾಗಿಲ್ಲ. ಒಂದು ವೇಳೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗದ ಕಾರಣ ನಿಮಗೆ ಹಣ ಬರದೆ ಇರಬಹುದು ಹತ್ತಿರದ ಗ್ರಾಮ ಒನ್ ಸೇವಾಕೇಂದ್ರಕ್ಕೆ ಹೋಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಿ.