ಸ್ವಂತ ಜಮೀನು ಹೊಂದಿರುವ ರೈತನಿಗೆ (Farmer) ಆತನ ಜಮೀನಿನ ಪಹಣಿ ಪತ್ರ (RTC) ಒಂದು ಅಗತ್ಯ ದಾಖಲೆಯಾಗಿದೆ. ರೈತನಿಗೆ ಹಲವಾರು ಸಂದರ್ಭಗಳಲ್ಲಿ ಪಹಣಿ ಪತ್ರ ಬೇಕಾಗುತ್ತದೆ. ಈ ಪಹಣಿ ಪತ್ರಗಳಲ್ಲಿ ಒಟ್ಟು 16 ಕಾಲಂ ಗಳು ಇರುತ್ತವೆ. ಈ ಕಾಲಂಗಳಲ್ಲಿ ರೈತನ ಜಮೀನಿಗೆ ಸಂಬಂಧಿಸಿದ ಹಾಗೆ ಸಂಪೂರ್ಣ ಮಾಹಿತಿ ಇರುತ್ತದೆ.
ಈಗಿನ ಕಾಲದಲ್ಲಿ ಕಂಪ್ಯೂಟರ್ ಜನರೇಟರ್ ಪಹಣಿ ಪತ್ರ ಬರುತ್ತಿದೆ ಆದರೆ ಹಿಂದಿನ ಕಾಲದಲ್ಲಿ ಇದೆಲ್ಲ ಕೈಬರಹದಲ್ಲಿ ಇರುತ್ತಿದ್ದವು ಈ ರೀತಿ ಕೈ ಬರಹದಲ್ಲಿ ಬರೆಸಿದ ಪತ್ರಗಳಲ್ಲಿ ಸಾಕಷ್ಟು ತಪ್ಪುಗಳು ಆಗಿರುವುದು ಸಹಜ. ಮುಖ್ಯವಾಗಿ ಪಹಣಿ ಪತ್ರದಲ್ಲಿ ಸರ್ವೆ ನಂಬರ್ ಅಥವಾ ಹಿಸ್ಸಾ ನಂಬರ್ ಎನ್ನುವುದು ಬಹಳ ಮುಖ್ಯವಾದ ಅಂಶ ಇದು ತಪ್ಪಾಗಿದ್ದರೆ ರೈತ ಅನೇಕ ಸಂಕಷ್ಟ ಗಳಿಗೆ ಈಡಾಗುತ್ತಾನೆ.
ತನ್ನ ಪಹಣಿ ಪತ್ತದಲ್ಲಿರುವ ಮಾಹಿತಿ ಹಾಗೂ ಸರ್ವೆ ಇಲಾಖೆಯಲ್ಲಿರುವ ಮಾಹಿತಿ ಹೊಂದಾಣಿಕೆ ಆಗದೆ ಇದ್ದಾಗ ರೈತನಿಗೆ ಸರ್ಕಾರದಿಂದ ಸಿಗಬೇಕಾದ ಅನೇಕ ಸೌಲಭ್ಯಗಳು ಸಿಗುವುದಿಲ್ಲ. ರೈತನು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಅಥವಾ ಸಹಕಾರಿ ಬ್ಯಾಂಕ್ ಗಳಲ್ಲಿ ಕೃಷಿಗೆ ಸಂಬಂಧಪಟ್ಟ ಹಾಗೆ ಲೋನ್ ಗಳನ್ನು ಅಥವಾ ಸಬ್ಸಿಡಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಇವುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಬೇಕು (Land Records Pahani correction). ಈ ರೀತಿ ಜಮೀನಿನ ಪಹಣಿ ಪತ್ರವನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಆದರೆ ಇದೊಂದು ಸುಧೀರ್ಘವಾದ ಪ್ರೋಸೆಸ್ ಆಗಿದೆ ಇದಕ್ಕಾಗಿ ಅನೇಕ ದಾಖಲೆಗಳನ್ನು ಕೂಡ ರೈತನು ಸಲ್ಲಿಸಬೇಕು.
ಒಬ್ಬ ರೈತನ ಜಮೀನಿನ ಪಹಣಿ ಪತ್ರ ತಪ್ಪಾಗಿದ್ದರೆ ಅದನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಮತ್ತು ಇದು ಹೇಗೆ ಜರುತ್ತದೆ, ಯಾವ ದಾಖಲೆಗಳನ್ನು ಕೊಡಬೇಕು ಎನ್ನುವ ವಿಷಯವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಪ್ರತಿಯೊಬ್ಬ ರೈತನಿಗೂ ಕೂಡ ಅಗತ್ಯವಿರುವ ಮಾಹಿತಿ ಇದಾಗಿದ್ದು ಆ ಕಾರಣಕ್ಕಾಗಿ ಈ ವಿಷಯವನ್ನು ಇತರ ಜೊತೆ ಹಂಚಿಕೊಳ್ಳಿ.
ಪಹಣಿ ಪತ್ರ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು:-
● ಚಾಲ್ತಿಯಲ್ಲಿರುವ ಈ ವರ್ಷದ ಪಹಣಿ ಪತ್ರ
● ಹಳೆಯ ಕಾಲದಲ್ಲಿ ಬರೆದಿರುವ ಕೈಬರಹದ ಪಹಣಿ ಪತ್ರ
● ಆಕಾರ್ ಬಂದ್
● ರೈತನ ಜಮೀನಿನ ನಕ್ಷೆ
● ಜಮೀನಿಗೆ ಸಂಬಂಧಿಸಿದ ಎಲ್ಲಾ ಮೋಟೇಶನ್ ಪ್ರತಿಗಳು
● ರೈತನ ಆಧಾರ್ ಕಾರ್ಡ್
● ಇವುಗಳಿಗೆ ಕೆಲ ದಾಖಲೆಗಳು ತಹಶೀಲ್ದಾರ್ ಆಫೀಸ್ ನಲ್ಲಿ ಮತ್ತು ಕೆಲ ದಾಖಲೆಗಳು ಭೂಮಿ ಕೇಂದ್ರಗಳಲ್ಲಿ ಸಿಗುತ್ತದೆ ರೈತರು ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.
ತಿದ್ದುಪಡಿ ವಿಧಾನ:-
● ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಕಚೇರಿಗಳಿಂದ ಪಡೆದು ರೈತನು ಪಹಣಿಪತ್ರ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿ ತಹಶೀಲ್ದಾರ್ ಕಚೇರಿಯಲ್ಲಿರುವ Inward Centre ಗೆ ಕೊಡಬೇಕು.
● ಅರ್ಜಿ ಹಾಗೂ ದಾಖಲೆಗಳನ್ನು ಪರಿಶೀಲನೆಗಾಗಿ ಮತ್ತು ಮುಂದಿನ ಕ್ರಮಕ್ಕಾಗಿ ಸರ್ವೇ ಆಫೀಸಿಗೆ ಕಳುಹಿಸಲಾಗುತ್ತದೆ.
● ಸರ್ವೆ ಆಫೀಸ್ ಅಧಿಕಾರಿಗಳು ಅರ್ಜಿ ಪರಿಶೀಲನೆ ಮಾಡಿ ಕಡತ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತಾರೆ.
● ಆ ಅಧಿಕಾರಿಗಳು ಅರ್ಜಿಯಲ್ಲಿರುವ ಎಲ್ಲ ದಾಖಲೆಗಳನ್ನು ಮತ್ತು ಕಚೇರಿಯಲ್ಲಿರುವ ಹಳೆ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ಅಗತ್ಯ ಬಿದ್ದಲ್ಲಿ ಜಮೀನಿಗೂ ಕೂಡ ಭೇಟಿಕೊಟ್ಟು ಅವಳ ನಡೆಸಿದ ಪರಿಶೀಲನೆ ಆಧಾರದ ಮೇಲೆ ವರದಿ ಬರೆದು ಭೂಮಿ ಕೇಂದ್ರಕ್ಕೆ ಕಳುಹಿಸಿಕೊಡುತ್ತಾರೆ.
● ನಿಮ್ಮ ಅರ್ಜಿ ಅನುಮೋದನೆ ಆಗಿದ್ದರೆ ಭೂಮಿ ಕೇಂದ್ರದಲ್ಲಿ ನೀವು ಕೋರಿಕೊಂಡ ರೀತಿ ಪಹಣಿ ಪತ್ರದಲ್ಲಿ ತಿದ್ದುಪಡಿ ಆಗಿರುತ್ತದೆ.