ಈಗ ಶಿಕ್ಷಣ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳು ಕೂಡ ಡಿಜಿಟಲೀಕರಣಗೊಳ್ಳುತ್ತಿವೆ. ಖಾಸಗಿ ಮಾತ್ರವಲ್ಲದೇ ಸರ್ಕಾರಿ ವಲಯದ ಅನೇಕ ಕೆಲಸ ಕಾರ್ಯಗಳು ಕೂಡ ಆನ್ಲೈನ್ ಮೂಲಕ ಮಾಡಿಕೊಳ್ಳುವ ಅವಕಾಶ ಸಿಗುತ್ತಿದೆ. ಈ ಮೂಲಕ ಜನಸಾಮಾನ್ಯ ಸಮಯ ಉಳಿತಾಯ ಬಗ್ಗೆ ವ್ಯರ್ಥ ತಿರುಗಾಟಕ್ಕೆ ಕಡಿವಾಣ ಕೂಡ ಬಿದ್ದಿದೆ.
ಈ ಹಿಂದೆ ಜನರು ತಮ್ಮ ಕೆಲಸ ಮಾಡಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿತ್ತು ಜನರು ಈಗ ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಯಾವುದೇ ಅಪ್ಲಿಕೇಶನ್ ಹಾಕಿ ಸೇವೆ ಪಡೆಯಬಹುದಾಗಿದೆ ಮತ್ತು ತಮ್ಮ ಯಾವುದೇ ವಹಿವಾಟನ್ನು ಕೂಡ ಮನೆಯಿಂದಲೇ ಮಾಡಬಹುದಾಗಿದೆ.
ಈ ಸುದ್ದಿ ಓದಿ:- ಇನ್ಮುಂದೆ ಜಮೀನು, ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ.! ರೈತರಿಗಾಗಿ ಹೊಸ ಸೇವೆ ಆರಂಭ…
ಈ ಅನುಕೂಲತೆಯಿಂದ ಹೇಗೆ ಆನ್ಲೈನ್ ನಲ್ಲಿ ಮನೆಯಲ್ಲಿಯೇ ಕುಳಿತು ನಾವು ಡಿಜಿಟಲ್ ರೂಪದ ವೋಟರ್ ಐಡಿ (Voter ID) ಪಡೆಯಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಎಲ್ಲರಿಗೂ ಗೊತ್ತಿರುವಂತೆ ಮತದಾರರ ಗುರುತಿನ ಚೀಟಿ ಒಂದು ಅಗತ್ಯ ದಾಖಲೆಯಾಗಿದೆ ಇದು ಅನೇಕ ಕಡೆಗಳಲ್ಲಿ ಆಧಾರ್ ಕಾರ್ಡ್ ರೀತಿ ಗುರುತಿನ ಚೀಟಿಗೆ ದಾಖಲೆಯಾಗಿ ಬಳಕೆಯಾಗುತ್ತದೆ.
ಮತದಾರ ಪಟ್ಟಿಯಲ್ಲಿ ನಮ್ಮ ಹೆಸರು ಸೇರ್ಪಡೆ ಮಾಡಿದಾಗ ಭಾರತದ ಚುನಾವಣಾ ಪ್ರಾಧಿಕಾರವು (ECI) ಗುರುತಿಗಾಗಿ ನೀಡಿದ ಈ ದಾಖಲೆಯನ್ನು ನಾವು ಬಹಳ ಜೋಪಾನವಾಗಿ ಇಟ್ಟುಕೊಳ್ಳಬೇಕು. ಕೆಲವೊಂದು ಸಂದರ್ಭದಲ್ಲಿ ಇದು ಕಳೆದು ಹೋಗುತ್ತದೆ ಅಥವಾ ಹಾಳಾಗುತ್ತದೆ.
ಈ ಸುದ್ದಿ ಓದಿ:- ಫೆಬ್ರವರಿ 29 ರೊಳಗೆ ಈ ಕೆಲಸ ಮಾಡದೇ ಇದ್ರೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗಲಿದೆ.!
ಈ ರೀತಿ ನೀವು ನಿಮ್ಮ ವೋಟರ್ ಐಡಿ ಕಳೆದುಕೊಂಡಿದ್ದರೆ ಅಥವಾ ವೋಟರ್ ಐಡಿ ಇದ್ದರೂ ಈಗ ನೀಡುತ್ತಿರುವ ಡಿಜಿಟಲ್ ರೂಪದ ವೋಟರ್ ಐಡಿ (Digitalized Voter ID) ಪಡೆದುಕೊಳ್ಳಬೇಕು ಎಂದು ಬಯಸುತ್ತಿದ್ದರೆ ನಾವು ಹೇಳುವ ಈ ವಿಧಾನವನ್ನು ಸರಳವಾಗಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಮನೆ ಬಾಗಿಲಿಗೆ ಡಿಜಿಟಲೈಸ್ಡ್ ವೋಟರ್ ಐಡಿ ಪಡೆಯಬಹುದು.
ಆನ್ ಲೈನ್ ನಲ್ಲಿ ಆರ್ಜಿ ಸಲ್ಲಿಸುವ ವಿಧಾನ:-
* ಭಾರತ ಸರ್ಕಾರದ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಆರಂಭಿಸಿರುವ Voter helpline app ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.
* ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಒಮ್ಮೆ ಡೌನ್ಲೋಡ್ ಮಾಡಿಕೊಂಡರೆ ನಾಲ್ಕು ಜನರ ಡಿಜಿಟಲ್ ವೋಟರ್ ಐಡಿ ಪಡೆದುಕೊಳ್ಳಲು ಅಪ್ಲೈ ಮಾಡಬಹುದು.
* ವೋಟರ್ ರಿಜಿಸ್ಟ್ರೇಷನ್ (Voter Registration) ಎನ್ನುವ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ನಂತರ ನ್ಯೂ ವೋಟರ್ ರಿಜಿಸ್ಟ್ರೇಷನ್ (new Voter ID registration) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಸೈಟ್ ಖರೀದಿಗೆ ಸಿಗಲಿದೆ ಸಾಲ.! ಬಡ್ಡಿ ಎಷ್ಟು.? ಎಷ್ಟು ಸಾಲ ಸಿಗುತ್ತೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
* ನಿಮ್ಮ ಸಂಖ್ಯೆ ಕೇಳುತ್ತದೆ ಮೊಬೈಲ್ ಸಂಖ್ಯೆಯನ್ನು ಹಾಕಿ, ಆ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ ಲಾಗಿನ್ (Login) ಆಗಿ.
* ಲಾಗಿನ್ ಆದ ನಂತರ ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳುತ್ತಿದ್ದಿರೋ ಅಥವಾ ಈಗಾಗಲೇ ವೋಟರ್ ಐಡಿ ಇದ್ದು ಡಿಜಿಟಲ್ ಮಾಡಿಕೊಳ್ಳಲು ಬಯಸುತ್ತಿದ್ದೀರೋ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು ಅದಕ್ಕೆ ಅನುಸಾರವಾಗಿ ಇರುವ ಮಾಹಿತಿಗಳನ್ನು ಭರ್ತಿ ಮಾಡಬೇಕು.
* ಈಗಾಗಲೇ ವೋಟರ್ ಐಡಿ ಇದ್ದರೆ ವೋಟರ್ ಐಡಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಎಂಟ್ರಿ ಮಾಡಬೇಕು. ನೀವು ನಿಮ್ಮ ಪಾಲಕರ ವೋಟರ್ ಐಡಿ ಡಿಜಿಟಲ್ ಮಾಡುವುದಿದ್ದರೆ, ಅದಕ್ಕೆ ರೇಷನ್ ಕಾರ್ಡ್ ಹಾಗೂ ಮೊದಲಾದ ಗುರುತಿನ ಪುರಾವೆಯನ್ನು ಸಲ್ಲಿಸಬೇಕು.
ಈ ಸುದ್ದಿ ಓದಿ:- ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದ್ರೆ ಡುಪ್ಲಿಕೇಟ್ DL ಪಡೆಯಲು ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!
* ಈ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಮೊಬೈಲ್ ನಲ್ಲಿ ಅಪ್ಲಿಕೇಶನ್ ಹಾಕಿ ನಂತರ ಡಿಕ್ಲರೇಷನ್ ನಲ್ಲಿ ಎಲ್ಲಾ ಮಾಹಿತಿಗಳು ಸರಿ ಇವೆ ಎನ್ನುವುದನ್ನು ಚೆಕ್ ಮಾಡಿ ಸಬ್ಮಿಟ್ ಮಾಡಿದರೆ ಸಾಕು ಕೆಲವೇ ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಅಂಚೆ ಮೂಲಕ ಡಿಜಿಟಲ್ ರೂಪದ ವೋಟರ್ ಐಡಿ ಬರುತ್ತದೆ.