ಕೇಂದ್ರ ಸರ್ಕಾರದಡಿಯಲ್ಲಿ ಕಾರ್ಯ ನಿರ್ವಹಿಸುವಂತಹ ಅಂಚೆ ಕಛೇರಿಗಳು (Post office) ಈಗ ಅಂಚೆ ಬ್ಯಾಂಕ್ ಗಳಾಗಿ ಕೂಡ ಕಾರ್ಯನಿರ್ವಹಿಸುತ್ತಿವೆ. ಈ ಅಂಚೆ ಬ್ಯಾಂಕ್ ಗಳಲ್ಲಿ ನಮ್ಮ ಆದಾಯವನ್ನು ಉತ್ತಮಗೊಳಿಸಿಕೊಳ್ಳಲು ಹಲವು ವಿಧವಾದ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಿದ್ದು ಪ್ರಸ್ತುತವಾಗಿ 13ಕ್ಕೂ ಹೆಚ್ಚು ಯೋಜನೆಗಳಿವೆ.
ಇದರಲ್ಲಿ ಹಿರಿಯ ನಾಗರಿಕರಿಗೆ SCSS, ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ SSY, ಮಹಿಳೆಯರಿಗೆ ಠೇವಣಿ ಮೇಲೆ ಅಧಿಕ ಬಡ್ಡಿದರ ನೀಡುವ ಕಳೆದ ಬಜೆಟ್ ನಲ್ಲಿ ಘೋಷಿಸಲಾದ ಮಹಿಳಾ ಸಮ್ಮಾನ್ ಯೋಜನೆ, ದುಡಿಯುವ ವರ್ಗಕ್ಕೆ RD, 1,2,3 & 5 ವರ್ಷದ FD ಸ್ಕೀಮ್ಸ್ , ಪ್ರತಿ ತಿಂಗಳ ಜೀವನ ನಿರ್ವಹಣೆಗಾಗಿ ಹಣದ ಅವಶ್ಯಕತೆ ಇರುವವರು ಒಂದೇ ಹೂಡಿಕೆಯಲ್ಲಿ ಪ್ರತಿ ತಿಂಗಳು ಆದಾಯ ಪಡೆಯಬಹುದಾದ POMIS, ಹಣವನ್ನು ದುಪ್ಪಟ್ಟು ಮಾಡುವಂತಹ KVP ಹೀಗೆ ಆಯಾ ವರ್ಗಕ್ಕೆ ಅನುಗುಣವಾಗಿ ವಿಶೇಷ ಯೋಜನೆಗಳಿವೆ.
ಈ ಸುದ್ದಿ ಓದಿ:- HDFC ಬ್ಯಾಂಕಿನಿಂದ ಬಂಪರ್ ಆಫರ್, ಕೇವಲ 10 ನಿಮಿಷದಲ್ಲಿ ಸಿಗಲಿದೆ 10 ಲಕ್ಷದವರೆಗೆ ಸಾಲ.!
ಸುಕನ್ಯಾ ಸಮೃದ್ಧಿ ಯೋಜನೆ ಎನ್ನುವುದು ದೇಶದ ಗಮನ ಸೆಳೆದಿರುವ ಹೆಣ್ಣು ಮಕ್ಕಳಿಗಾಗಿಯೇ ಇರುವ ಇದುವರೆಗಿನ ಯೋಜನೆಗಳಲ್ಲಿ ಅತೀ ಹೆಚ್ಚಿನ ಬಡ್ಡಿದರವನ್ನು ನೀಡುವಂತಹ ಯೋಜನೆಯಾಗಿದೆ. ಆದರೆ 10 ವರ್ಷ ಮೇಲ್ಪಟ್ಟವರು ಪುರುಷರು ಅಥವಾ ನಿವೃತ್ತಿ ಸಮಯದ ಬಗ್ಗೆ ಯೋಚನೆ ಮಾಡುವವರು ಅಥವಾ ಈಗ ದುಡಿಯಲು ಆರಂಭಿಸಿದವರು.
ಮನೆ ಕಟ್ಟಿಸುವ ಆಸ್ತಿ ಖರೀದಿಸುವ ಇಂತಹ ದೊಡ್ಡ ಯೋಜನೆಯನ್ನು ಹೊಂದಿದ್ದವರಿಗೆ ಅತ್ಯಂತ ಸೂಕ್ತವಾದ ಚಿಕ್ಕ ಮೊತ್ತದ ಹಣವನ್ನು ದೀರ್ಘಾವಧಿವರೆಗೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವಂತಹ ಅಂಚೆ ಕಚೇರಿಯ ಮತ್ತೊಂದು ಯೋಜನೆಯಾದ PPF ಯೋಜನೆ ಬಗ್ಗೆ ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- LPG ಗ್ಯಾಸ್ ಬಳಸುವವರಿಗೆ ಪ್ರಮುಖ ಸುದ್ದಿ.! ಈ ರೀತಿ ಸಿಲಿಂಡರ್ ಬಳಸುವ ಮುನ್ನ ಎಚ್ಚರ.!
ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು ರೂ.12,500 ಹೂಡಿಕೆ ಮಾಡಿದರೆ ಸಾಕು ಮೆಚ್ಯುರಿಟಿ ಅವಧಿಯಲ್ಲಿ ಒಂದು ಕೋಟಿಗಿಂತಲೂ ಹೆಚ್ಚು ಹಣ ಪಡೆಯಬಹುದು. ದೀರ್ಘಾವಧಿ ಯೋಜನೆಗಳಿಗೆ ಹೆಸರುವಾಸಿಯಾದ ಈ PPF ಯೋಜನೆ ಬಗ್ಗೆ ಅಗತ್ಯ ಮಾಹಿತಿಗಳನ್ನು ತಿಳಿದುಕೊಂಡು ನಿಮ್ಮ ಹಣವನ್ನು ಈ ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಯೋಜನೆಯ ಹೆಸರು:- ಪಬ್ಲಿಕ್ ಪ್ರಾವಿಡಂಟ್ ಫಂಡ್ (PPF)
ಯೋಜನೆ ಕುರಿತ ಪ್ರಮುಖ ಸಂಗತಿಗಳು:-
* ಅಂಚೆ ಕಚೇರಿಯಲ್ಲಿ ಮಾತ್ರವಲ್ಲದೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 18 ವರ್ಷ ತುಂಬಿದ ಭಾರತೀಯ ನಾಗರಿಕನು ಈ ಯೋಜನೆಗೆ ಖಾತೆ ತೆರೆಯಬಹುದು.
* ಕನಿಷ್ಠ ರೂ.100 ಠೇವಣಿ ಇಡುವ ಮೂಲಕ PPF ಖಾತೆ ತೆರೆಯಬಹುದು.
* ವಾರ್ಷಿಕವಾಗಿ ಕನಿಷ್ಠ ರೂ.500 ರೂ. ಠೇವಣಿ ಇಡುವ ಮೂಲಕ ಖಾತೆ ಚಾಲ್ತಿಯಲ್ಲಿ ಇಡಬಹುದು.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!
* ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿ ವಾರ್ಷಿಕ 1.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಇದೆ.
* ಈ ಖಾತೆಗೆ ವಾರ್ಷಿಕ ಒಂದೇ ಬಾರಿ 1.5 ಲಕ್ಷ ರೂ. ಅಥವಾ 12 ಕಂತುಗಳಲ್ಲಿ ಪಾವತಿ ಮಾಡಲು ಅವಕಾಶವಿದೆ.
* PPF ಖಾತೆಯಡಿ ಠೇವಣಿ ಇಟ್ಟ ಮೊತ್ತಕ್ಕೆ ಪ್ರಸ್ತುತ ವಾರ್ಷಿಕ ಶೇ 7.1ರ ಬಡ್ಡಿ ದರವಿದೆ. ಪ್ರತಿ ವರ್ಷ ಶಿಸ್ತಿನಿಂದ ಹಣ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಅವಧಿಗಾಗುವಾಗ 1 ಕೋಟಿ ರೂ. ವರೆಗೆ ಗಳಿಸಲೂ ಈ ಖಾತೆಯಲ್ಲಿ ಅವಕಾಶವಿದೆ.
* 15 ವರ್ಷಗಳ ಲಾಕ್ ಇನ್ ಸಮಯ ಮುಗಿದ ನಂತರವೂ ಖಾತೆಯನ್ನು ಮುಂದುವರಿಸಲು ಅವಕಾಶವಿದೆ.
ಉದಾಹರಣೆಯೊಂದಿಗೆ ಹೇಳುವುದಾದರೆ, 30ನೇ ವಯಸ್ಸಿನಲ್ಲಿ ಒಬ್ಬ ವ್ಯಕ್ತಿ PPF ಖಾತೆ ತೆರೆದರೆ 15 ವರ್ಷಗಳ ಲಾಕ್ ಇನ್ ಅವಧಿಯ ನಂತರ ಮತ್ತೆ ಅದನ್ನು 15 ವರ್ಷಗಳ ವರೆಗೆ ವಿಸ್ತರಣೆ ಮಾಡುವುದಾದರೆ ಒಟ್ಟು 30 ವರ್ಷದ ಹೂಡಿಕೆಗೆ ವರ್ಷಕ್ಕೆ ರೂ.1.5 ಲಕ್ಷ ಹೂಡಿಕೆ ಮಾಡಿದರೆ ವಾರ್ಷಿಕ ಬಡ್ಡಿ ಶೇ 7.10 ಅನ್ವಯ ಒಟ್ಟು ರೂ.1.54 ಕೋಟಿ ಆಗಲಿದೆ.