ಭಾರತೀಯ ರೈಲ್ವೆ ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ ವೇತನ 29,200/-

 

WhatsApp Group Join Now
Telegram Group Join Now

ಭಾರತೀಯ ರೈಲ್ವೆ ಮಂಡಳಿ (RRB) ವತಿಯಿಂದ ಪ್ರತಿ ವರ್ಷ ಕೂಡ ನೇಮಕಾತಿ ನಡೆಯುತ್ತದೆ. ದೇಶದ ಲಕ್ಷಾಂತರ ಸರ್ಕಾರಿ ಹುದ್ದೆ ಆಕಾಂಕ್ಷಿಗಳು ಈ ನೇಮಕಾತಿ ಅಧಿಸೂಚನೆಗಾಗಿ ಕಾಯುತ್ತಿರುತ್ತಾರೆ. ಈಗ ಇವರೆಲ್ಲರಿಗೂ ಸಿಹಿ ಸುದ್ದಿ ಇದೆ ಅದೇನೆಂದರೆ, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ (Recruitment) ಅರ್ಹರಿದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

ನೋಟಿಫಿಕೇಷನ್ ಗಳಲ್ಲಿ ಕೇಳಲಾಗಿರುವ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ನಾವು ಸಹ ಈ ಅಂಕಣದಲ್ಲಿ ನೇಮಕಾತಿ ಕುರಿತ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಒಂದು ವರ್ಷದಲ್ಲಿ ಒಂದು ರೇಷನ್ ಕಾರ್ಡ್’ಗೆ ಇಷ್ಟು ಗ್ಯಾಸ್ ಮಾತ್ರ ಬುಕ್ ಮಾಡಲು ಅವಕಾಶ.! ಕೇಂದ್ರದ ಹೊಸ ನಿಯಮ.!

ನೇಮಕಾತಿ ಇಲಾಖೆ:- ಭಾರತೀಯ ರೈಲ್ವೆ ಇಲಾಖೆ
ಹುದ್ದೆ ಹೆಸರು:- ಟೆಕ್ನಿಷಿಯನ್
ಒಟ್ಟು ಹುದ್ದೆಗಳ ಸಂಖ್ಯೆ:- 9144 ಹುದ್ದೆಗಳು
ಹುದ್ದೆಗಳ ವಿವರ:-
* ಟೆಕ್ನಿಷಿಯನ್ (ಗ್ರೇಡ್ 1) ಸಿಗ್ನಲ್ – 1092
* ಟೆಕ್ನಿಷಿಯನ್ (ಗ್ರೇಡ್ 3) – 8052

ಉದ್ಯೋಗ ಸ್ಥಳ:-
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಭಾರತದಾದ್ಯಂತ ಯಾವುದೇ ಸ್ಥಳದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು

ವೇತನ ಶ್ರೇಣಿ:-
* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ – ರೂ.29200 ರಿಂದ ಆರಂಭ
* ಟೆಕ್ನಿಷಿಯನ್ (ಗ್ರೇಡ್ 3) – ರೂ.19900 ರಿಂದ ಆರಂಭ
* ಇತರೆ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ.

ಈ ಸುದ್ದಿ ಓದಿ:-ಹಣ ಡಬಲ್ ಮಾಡುವ ಕಿಸಾನ್ ವಿಕಾಸ್ ಪತ್ರ, ಅಂಚೆ ಕಚೇರಿಯ ಈ ಯೋಜನೆಯಲ್ಲಿ 5 ಲಕ್ಷ ಹಾಕಿದ್ರೆ 10 ಲಕ್ಷ ಗ್ಯಾರಂಟಿ.!

ಶೈಕ್ಷಣಿಕ ವಿದ್ಯಾರ್ಹತೆ:-

* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ  B.Sc (ಫಿಸಿಕ್ಸ್/ ಇಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಇನ್ಫಾರ್ಮೆಷನ್ ಟೆಕ್ನಾಲಜಿ/ ಇನ್ಟ್ರುಮೆಂಟೆಂಷನ್) ಅಥವಾ ಡಿಪ್ಲೊಮಾ (ಇಂಜಿನಿಯರಿಂಗ್) ಉತ್ತೀರ್ಣರಾಗಿರಬೇಕು.

* ಟೆಕ್ನಿಷಿಯನ್ (ಗ್ರೇಡ್ 3) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ SSLC ಜೊತೆಗೆ ಆಯಾ ಟ್ರೇಡ್ ಗಳಲ್ಲಿ ITI ಕೂಡ ಉತ್ತೀರ್ಣರಾಗಿರಬೇಕು.

ವಯೋಮಿತಿ:-

* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 36 ವರ್ಷಗಳು
* ಟೆಕ್ನಿಷಿಯನ್ (ಗ್ರೇಡ್ 3) ಹುದ್ದೆಗಳಿಗೆ ಗರಿಷ್ಠ ವಯೋಮಿತಿ 33 ವರ್ಷಗ‌ಳು

ವಯೋಮಿತಿ ಸಡಿಲಿಕೆ:-

* SC / ST ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

ಅರ್ಜಿ ಸಲ್ಲಿಸುವ ವಿಧಾನ:-

* RRB ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ, ನೋಟಿಫಿಕೇಶನ್ ಓದಿಕೊಂಡು ಅರ್ಥೈಸಿಕೊಳ್ಳಿ
* ಅರ್ಜಿ ಸಲ್ಲಿಸಲು ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ವ ವಿವಗಳನ್ನು ಭರ್ತಿ ಮಾಡಿ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ಅವುಗಳ ಸಂಖ್ಯೆ ನಮೂದಿಸಿ
* ಅರ್ಜಿ ಸಲ್ಲಿಕೆ ಒಮ್ಮೆಲೆ ಯಶಸ್ವಿಯಾದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ

ಅರ್ಜಿ ಶುಲ್ಕ:-

* ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್/ UPI ಆಧಾರಿತವಾಗಿ ಶುಲ್ಕ ಪಾವತಿಸಬಹುದು.
* SC / ST, ಮಾಜಿ ಸೈನಿಕ, ಮಹಿಳಾ, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತ, EBC ಅಭ್ಯರ್ಥಿಗಳಿಗೆ – ರೂ.250
* ಉಳಿದ ಅಭ್ಯರ್ಥಿಗಳಿಗೆ – ರೂ.500
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೆ ಇ-ರಶೀದಿ ಪಡೆದುಕೊಳ್ಳಬೇಕು.

ಆಯ್ಕೆ ವಿಧಾನ:-

* ಕಂಪ್ಯೂಟರ್ ಆಧಾರಿತ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ವೈದ್ಯಕೀಯ ಪರೀಕ್ಷೆ
* ಸಂದರ್ಶನ.

ಈ ಸುದ್ದಿ ಓದಿ:-ವಾಟರ್ ಆಪಲ್ ಕೃಷಿ ಮಾಡಿ ಯಶಸ್ವಿಯಾದ ರೈತ 5 ಮರದಲ್ಲಿ 6 ಲಕ್ಷ ಲಾಭ ಇಲ್ಲಿದೆ ನೋಡಿ ಪೂರ್ತಿ ವಿವರ…

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 09 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 08 ಏಪ್ರಿಲ್, 2024

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now