ಒಂದು ಮಷೀನ್ ನಿಂದ ಹಲವಾರು ಲಾಭಗಳು, ವರ್ಷದ 12 ತಿಂಗಳು ನಡೆಯುವ ಬಿಸಿನೆಸ್ ದಿನಕ್ಕೆ ಕಡಿಮೆ ಎಂದರೂ 4,000 ಲಾಭ ಫಿಕ್ಸ್.!

ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ಸಿಕ್ಕರೆ ಸಾಕು ಎಂದು ಹಲವರು ಕಾಯುತ್ತಿರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ಯಾಕೆಂದರೆ, ಮನೆ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಸಮಯ ಸಿಕ್ಕಾಗ ಕೆಲಸ ಮಾಡಬಹುದು ಎಂದು ಮತ್ತು ಇಂತಹ ಅವಕಾಶಗಳಿಗೇನೂ ಕಡಿಮೆ ಇಲ್ಲ.

WhatsApp Group Join Now
Telegram Group Join Now

ಟೈಲರಿಂಗ್, ಕಸೂತಿ ಕೆಲಸ, ನೇಯ್ಗೆ, ಕೇಟರಿಂಗ್ ಸೇರಿ ನೂರಾರು ಈ ರೀತಿಯ ಆಪ್ಷನ್ ಗಳು ಹೆಣ್ಣು ಮಕ್ಕಳಿಗೆ ಇದೆ. ಆದರೆ ಒಂದು ಸಮಸ್ಯೆ ಏನೆಂದರೆ ಇದೆಲ್ಲವೂ ಅವರ ಕೌಶಲ್ರಗಳನ್ನು ಅವಲಂಬಿಸಿದೆ ಅವರಿಗೆ ಈ ವಿಚಾರಗಳಲ್ಲಿ ನಾಲೆಡ್ಜ್ ಇದ್ದರೆ ಮಾತ್ರ ಅವರು ಇವುಗಳಲ್ಲಿ ಸಾಧಿಸಬಹುದು.

ಹಾಗಾದರೆ ಏನು ತಿಳಿದಿಲ್ಲ ಮತ್ತು ಹೆಚ್ಚಿಗೆ ವಿದ್ಯಾಭ್ಯಾಸವು ಇಲ್ಲ ಇಂಥವರಿಗೆ ಆಪ್ಷನ್ ಇಲ್ಲವೇ ಎಂದರೆ ಖಂಡಿತ ಇದೆ ಹೆಣ್ಣು ಮಕ್ಕಳೇ ಆಗಲಿ ಅಥವಾ ಬಿಸಿನೆಸ್ ಆಗಿ ಪರಿವರ್ತಿಸಿಕೊಂಡು ಹೆಚ್ಚು ಹಣ ಮಾಡಬೇಕು ಎಂದು ಬಯಸುವ ಗಂಡು ಮಕ್ಕಳಿಗೆ ಆಗಲಿ ಅಥವಾ ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ಇಲ್ಲೇ ಕೆಲಸ ಮಾಡಬೇಕು ಎಂದು ಬಯಸುವ ಜನತೆಗೆ ಆಗಲಿ ಎಲ್ಲರಿಗೂ ಅನುಕೂಲವಾಗುವಂತಹ ಒಂದು ಬಿಸಿನೆಸ್ ಬಗ್ಗೆ ಈ ಅಂಕಣದಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ.

ಈ ಸುದ್ದಿ ಓದಿ:- ಈ ಡಾಕ್ಯುಮೆಂಟ್ ಅಪ್ಡೇಟ್ ಮಾಡಿಸದೇ ಇದ್ದರೆ 7ನೇ ಕಂತಿನ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಜಮೆ ಆಗಲ್ಲ.!

ಇದು ಮಿಷಿನ್ ಆಧಾರಿತ ಕೆಲಸವಾಗಿದೆ. ಹಾಗಾಗಿ ನಿಮಗೆ ಈ ವಿಚಾರವಾಗಿ ನಾಲೆಡ್ಜ್ ಇಲ್ಲದೆ ಇದ್ದರೂ ಮಿಷನ್ ಆಪರೇಟ್ ಮಾಡಲು ಗೊತ್ತಿದ್ದರೆ ಸಾಕು ಅಚ್ಚುಕಟ್ಟಾಗಿ ಅದು ಅದರ ಕೆಲಸ ಮಾಡುತ್ತದೆ. ನೀವು ಅದನ್ನು ಮೈನ್ಟೈನ್ ಮಾಡಿದರೆ ಮತ್ತು ಮಾರ್ಕೆಟಿಂಗ್ ಮಾಡಿಕೊಂಡರೆ ನಿಮಗೆ ಕೈ ತುಂಬಾ ಹಣ ಕೂಡ ಸಿಗುತ್ತದೆ ಯಾರ ಕೈ ಕೆಳಗೆ ದುಡಿಯದೇ ಸ್ವಂತ ದುಡಿಮೆ ಮಾಡುತ್ತಿದ್ದೇನೆ ಎನ್ನುವ ಬಹಳ ದೊಡ್ಡ ಸಮಾಧಾನವು ಸಿಗುತ್ತದೆ.

ಅಷ್ಟಕ್ಕೂ ಇದು ಯಾವುದು ಎಂದರೆ ನೀವು ಅಂಗಡಿಗಳಲ್ಲಿ ನೋಡಿರಬಹುದು ಜೀರಿಗೆ ಮೆಣಸು ಸಾಸಿವೆ ಇವುಗಳ ಸ್ಯಾಷೆ ಇರುತ್ತದೆ, ಇವುಗಳು ಮಾತ್ರವಲ್ಲದೆ ಶಾಂಪೂ ಕಂಫರ್ಟ್ ಟೀ ಪುಡಿ ಇತ್ಯಾದಿಗಳನ್ನು ಕೂಡ ಸ್ಯಾಷೆ ಮಾಡಿ ಸಣ್ಣ ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತಾರೆ. ಇದನ್ನೇ ನೀವು ಗ್ರೋಸರಿಯಿಂದ ಸೇರಿ ಎಲ್ಲಾ ಪ್ರಾಡಕ್ಟ್ ಗಳಿಗೂ ಅಪ್ಲೈ ಮಾಡಬಹುದು ಮಸಾಲೆಗಳಿಗೆ ಸಾಂಬಾರ್ ಪುಡಿಗಳಿಗೆ ಅಥವಾ ಸ್ನಾಕ್ಸ್ ಗಳಿಗೆ ಈ ರೀತಿ ಎಲ್ಲ ಪ್ರಾಡಕ್ಟ್ ಗಳಿಗೂ ಈ ಸಣ್ಣ ಸಣ್ಣ ಪೊಟ್ಟಣಗಳ ಅವಶ್ಯಕತೆ ಇರುತ್ತದೆ.

ಇದನ್ನು ತಯಾರಿಸುವ ಮಿಷನ್ ಖರೀದಿಸಿದರೆ ಸಾಕು ನಿಮ್ಮ ಮನೆಯಲ್ಲಿ ಇರುವ ವಿದ್ಯುತ್ ಸಪ್ಲೈ ಬಳಸಿಕೊಂಡು ನೀವು ಇದನ್ನು ಮಾಡಬಹುದು. ಒಂದು ವಾಷಿಂಗ್ ಮಿಷನ್ ಹಿಡಿಯುವಷ್ಟು ಜಾಗ ಮಾತ್ರ ಇದು ಹಿಡಿಯುತ್ತದೆ. ಉದಾಹರಣೆಗೆ ಹೀಗೆ ಯೋಚಿಸಿ, ನೀವು 10Kg ಕಡಲೆ ಬೆಳೆ ತಂದಿದ್ದೀರಾ ಅದನ್ನು ನೀಟಾಗಿ 100 ಗ್ರಾಂ ನ ಪ್ಯಾಕ್ ಗಳಾಗಿ ಮಾಡಬೇಕು ಇದು ಎಷ್ಟು ಸಮಯ ಹಿಡಿಯುತ್ತದೆ.

ಈ ಸುದ್ದಿ ಓದಿ:- ಈ ಡಾಕ್ಯುಮೆಂಟ್ ಅಪ್ಡೇಟ್ ಮಾಡಿಸದೇ ಇದ್ದರೆ 7ನೇ ಕಂತಿನ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಜಮೆ ಆಗಲ್ಲ.!

ಒಂದು ವೇಳೆ ನೀವು ಈ ಮಿಷನ್ ಖರೀದಿಸಿದರೆ ಇದರಲ್ಲಿ ಕಡಲೆಬೇಳೆ ಹಾಕಲು ಒಂದು ವ್ಯವಸ್ಥೆ ಇರುತ್ತದೆ ಮತ್ತು ಅದನ್ನು ಡಿಜಿಟಲ್ ನಲ್ಲಿ ಎಷ್ಟು ಗ್ರಾಂ ಪ್ಯಾಕ್ ಗಳಾಗಿರಬೇಕು ಎಂದು ತೂಕವನ್ನು ಸೆಲೆಕ್ಟ್ ಮಾಡಬೇಕು. ಅಷ್ಟು ಮಾಡಿ ಮಿಷಿನ್ ಆನ್ ಮಾಡಿದರೆ 100 ಗ್ರಾಂ ನ ಚಿಕ್ಕ ಚಿಕ್ಕ ಪೊಟ್ಟಣಗಳು ಸೀಲ್ ಆಗಿ ಹೊರಗೆ ಬರುತ್ತವೆ.

ನೀವು ನಿಮ್ಮದೇ ಬ್ರಾಂಡ್ ಓಪನ್ ಮಾಡುವ ಇಂಟರೆಸ್ಟ್ ಇದ್ದರೂ ಕೂಡ ಅದನ್ನು ಸಹ ಮಾಡಬಹುದು ಅಥವಾ ಬರೀ ಪಾಲಿಬ್ಯಾಗ್ ಮಾಡಿ ಮಾರಾಟ ಮಾಡುವುದಾದರೂ ಇದನ್ನು ಬಳಸಬಹುದು ಈ ರೀತಿ ಮಾಡಿ ದಿನಕ್ಕೆ ಕನಿಷ್ಠ ರೂ.4000 ಗಳಿಸಬಹುದು. ವರ್ಷಪೂರ್ತಿ ನಡೆಯುವ ಬಿಸಿನೆಸ್ ಆಗಿರುವುದರಿಂದ ಯಶಸ್ಸು ಖಂಡಿತ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now