ರಾಜ್ಯದ ಈ 114 ತಾಲೂಕಿನ ಜನರಿಗೆ 10Kg ಪಡಿತರ ಅಕ್ಕಿ ನೀಡುವುದಾಗಿ ಮಹತ್ವದ ಘೋಷಣೆ ಮಾಡಿದ ಆಹಾರ ಸಚಿವರು.!

ಕೊರೋನಾ (Corona) ಸಾಂಕ್ರಾಮಿಕದ ಬಳಿಕ ಎರಡು ವರ್ಷ ನೆರೆಯ ಹಾವಳಿಯನ್ನು (flood) ಅನುಭವಿಸಿದ್ದ ರಾಜ್ಯದಲ್ಲಿ ಈ ವರ್ಷ ಬರದ (drought) ವಾತಾವರಣ ಸೃಷ್ಟಿಯಾಗಿದೆ. ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆ ಬೀಳಬೇಕಿದ್ದ ಸಮಯದಿಂದಲೂ ಕೂಡ ನಿರೀಕ್ಷಿತ ಪ್ರಮಾಣದ ಮಳೆ ರಾಜ್ಯದಲ್ಲಿ ಬಿದ್ದಿಲ್ಲ ಹೀಗಾಗಿ ರೈತರ (farmers) ಜೀವನ ಸಂ’ಕ’ಷ್ಟದಲ್ಲಿ ಸಿಲುಕಿದೆ.

WhatsApp Group Join Now
Telegram Group Join Now

ಆಗಸ್ಟ್ ತಿಂಗಳಿನಲ್ಲಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗುತ್ತದೆ ಎಂದು ಊಹಿಸಲಾಗಿತ್ತು ಆದರೆ ಈ ನಿರೀಕ್ಷೆ ಕೂಡ ಹುಸಿಯಾಗಿದೆ. ಈಗಾಗಲೇ ನಾವೆಲ್ಲ ಸೆಪ್ಟೆಂಬರ್ ಮೊದಲ ವಾರವನ್ನು ಕಳೆಯುತ್ತಿದ್ದೇವೆ, ಆಸೆಗಣ್ಣುಗಳಿಂದ ಆಕಾಶದತ್ತ ನೋಡುತ್ತಾ ಭೂಮಿಯನ್ನು ಹದಗೊಳಿಸಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಕಾಯುತ್ತಿರುವ ರೈತನಿಗೆ ಮಳೆರಾಯನ ದರ್ಶನವಾಗದೆ ದಿಕ್ಕು ತೋಚುತ್ತಿಲ್ಲ.

ರೇಷನ್ ಕಾರ್ಡ್ ತಿದ್ದು ಪಡಿಯಲ್ಲಿ ದೊಡ್ಡ ಬದಲಾವಣೆ, ಯಾವ ಜಿಲ್ಲೆಗೆ ಯಾವ ದಿನಾಂಕ ನಿಗದಿ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಇನ್ನೊಂದೆಡೆ ಕಾವೇರಿ ಕಡಲಿನ ಪ್ರದೇಶದವರಿಗೆ ತಮಿಳುನಾಡಿಗೆ ನೀರು ಬಿಡುತ್ತಿರುವುದಕ್ಕಾಗಿ ರಾಜ್ಯ ಸರ್ಕಾರದ ಮೇಲೆ ಅಸಮಾಧಾನ ಮೂಡುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ (Central government guidlines) ನೀಡಿರುವ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಎಷ್ಟು ತಾಲೂಕುಗಳು ಬರಪೀಡಿತವಾಗಿದೆ (drought prone thaluk) ಎನ್ನುವ ವರದಿ ಕೂಡ ತಯಾರಾಗಿದೆ.

ಆಗಸ್ಟ್ 18ನೇ ತಾರೀಕಿನವರೆಗೆ ತಯಾರಿಸಿದ ವರದಿ ಪ್ರತಿ ಪ್ರಕಾರ 113 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ನಿರ್ಧರಿಸಲಾಗಿದೆ. ಹೆಚ್ಚುವರಿಯಾಗಿ ಈ ಪಟ್ಟಿಗೆ ಇನ್ನೂ 73 ತಾಲೂಕುಗಳ ಹೆಸರು ಕೂಡ ಸೇರಲಿದೆ, ಮುಂದಿನ ದಿನಗಳಲ್ಲಿ ಇದರ ಘೋಷಣೆಯಾಗುವ ಸಾಧ್ಯತೆ ಕೂಡ ಇದೆ.

ರೇಷನ್ ಕಾರ್ಡ್ ತಿದ್ದುಪಡಿ / ಹೊಸ ಸದಸ್ಯರ ಸೇರ್ಪಡೆಗೆ ಇನ್ಮೇಲೆ ಈ ದಾಖಲೆಗಳ ಕಡ್ಡಾಯ ಸರ್ಕಾರದಿಂದ ಜಾರಿ ಆಯ್ತು ಹೊಸ ಆದೇಶ.!

ಇತ್ತೀಚೆಗೆ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ (Revenue Krishana bairegowda) ಅವರು ಕೇಂದ್ರದ ಸೂಚನೆಯಂತೆ ನಾವು ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ತಯಾರಿಸಿದ್ದೇವೆ. ಮಳೆ ಕೊರತೆ ಉಂಟಾಗಿರುವ ಪ್ರದೇಶ ಹಾಗೂ ಬೆಳೆ ಸಮೀಕ್ಷೆ ಮುಂತಾದವುಗಳನ್ನು ಕೂಡ ಪರಿಶೀಲಿಸಿ ಉಳಿದ ತಾಲೂಕುಗಳನ್ನು ಕೂಡ ಈ ಪಟ್ಟಿಗೆ ಸೇರಿಸಿ ಶೀಘ್ರದಲ್ಲಿ ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ.

ಸಾಧ್ಯವಾದಷ್ಟು ಕೇಂದ್ರ ಸರ್ಕಾರದ ಪರಿಹಾರದ ಜೊತೆ ರಾಜ್ಯ ಸರ್ಕಾರದಿಂದಲೂ ಕೂಡ ಬರ ಪರಿಹಾರದ ಸಹಾಯಧನ ಸಿಗುವಂತೆ ಮಾಡುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಇವೆರಡರ ಜೊತೆ ರಾಜ್ಯ ಸರ್ಕಾರದ ವತಿಯಿಂದ ಈ ತಾಲೂಕುಗಳಿಗೆ ಪಡಿತರ ವ್ಯವಸ್ಥೆಯಲ್ಲಿ ಅನುಕೂಲತೆ ಮಾಡಿಕೊಡುವ ಸಿದ್ಧತೆ ನಡೆದಿದೆ. ಈಗಾಗಲೇ ಬರಪೀಡಿತ ಪ್ರದೇಶದ ರೈತರು ಕೃಷಿ ಮಾಡಲಾಗದೆ.

ಇನ್ಮುಂದೆ ಬಸ್ ಗಳಲ್ಲಿ ಕಂಡಕ್ಟರ್ ಜೊತೆ ಚಿಲ್ಲರೆ ಜಗಳ ಬಂದ್ ಸರ್ಕಾರದಿಂದ ಹೊಸ ಯೋಜನೆ ಜಾರಿ.!

ಹಾಗಾಗಿ ಆ ಕುಟುಂಬಕ್ಕೆ ಬೇಕಾದ ಆಹಾರವನ್ನು ಒದಗಿಸುವ ಉದ್ದೇಶದಿಂದ ಈಗ ರಾಜ್ಯ ಸರ್ಕಾರ ಕೈಗೊಂಡಿರುವ ಅನ್ನಭಾಗ್ಯ ಯೋಚನೆಯಡಿ (Annabhagya Scheme ration) ಪಡಿತರವನ್ನು 10Kg ನೀಡಲು ಪ್ರಯತ್ನಿಸುತ್ತೇವೆ ಎನ್ನುವ ಮಾಹಿತಿಯನ್ನು ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (Food and Civil Supply minister K.H Muniyappa) ಅವರು ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭರವಸೆ ಕೊಟ್ಟಂತೆ ಎಲ್ಲಾ ಸದಸ್ಯರಿಗೂ 10Kg ಪಡಿತರ ವಿತರಣೆಯಾಗಬೇಕಿತ್ತು. ಆದರೆ ದಾಸ್ತಾನು ಕೊರತೆ ಉಂಟಾಗಿರುವ ಕಾರಣದಿಂದಾಗಿ ಜುಲೈ ತಿಂಗಳಿಂದ ಪ್ರತಿ ಸದಸ್ಯನಿಗೆ 5 kgಅಕ್ಕಿ ಹಾಗೂ ಹೆಚ್ಚುವರಿ ಅಕ್ಕಿಯ ಬದಲು 170 ರೂಪಾಯಿಯಂತೆ ಹಣವನ್ನು ಆ ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.

 ಗೃಹಲಕ್ಷ್ಮಿ ಯೋಜನೆ ಹಣ ಜಮೆ ಆಗಿಲ್ಲವೇ, ಈ ಸಣ್ಣ ಕೆಲಸ ಮಾಡಿ ಖಾತೆಗೆ ಹಣ ಬರುತ್ತದೆ.!

ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ಶತ ಪ್ರಯತ್ನ ಪಡುತ್ತಿದೆ. ಆದರೆ ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣ ವ್ಯವಸ್ಥೆಯಾಗುವವರೆಗೂ ಇದೇ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿತ್ತು. ಈಗ ಬರಪೀಡಿತ ಪ್ರದೇಶದ ತಾಲೂಕುಗಳಿಗಾದರೂ ಹೆಚ್ಚು ಹಣದ ಬದಲು ಪಡಿತರವನ್ನೇ ವಿತರಣೆ ಮಾಡಿದರೆ ಪರಿಸ್ಥಿತಿ ಎಷ್ಟೋ ಸುಧಾರಿಸುತ್ತದೆ ಎಂದು ಅರಿತುಕೊಂಡಿರುವ ರಾಜ್ಯ ಸರ್ಕಾರವು ಇಂತಹದೊಂದು ಕ್ರಮ ಕೈಗೊಳ್ಳಲು ಮುಂದಾಗಿದೆ. ಹಾಗಾಗಿ ಈ ಕುರಿತ ಮಾಹಿತಿಯನ್ನು ಮಾನ್ಯ ಆಹಾರ ಸಚಿವರು ಹಂಚಿಕೊಂಡಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now