ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಸಂಬಂಧಿಸಿದಂತೆ ಇದ್ದ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಡಿಸೆಂಬರ್ ತಿಂಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Caml) ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದ್ದರು.
ಅಂತೆಯೇ ಆಯ್ದ ದಿನಾಂಕಗಳಂದು ಗ್ರಾಮ ಪಂಚಾಯಿತಿ ಸದಸ್ಯರು, ಹತ್ತಿರದ ಅಂಚೆ ಕಛೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾಗಿಯಾಗಿ ಸಮಸ್ಯೆ ಪರಿಹರಿಸಿಕೊಡಲು ಪ್ರಯತ್ನಿಸಿದ್ದಾರೆ.
ಆದರೆ ಇನ್ನೂ ಕೂಡ ಅನೇಕ ಮಹಿಳೆಯರಿಗೆ ಒಂದು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಆಗಿಲ್ಲ, ಕೆಲವರಿಗೆ ಒಂದೆರಡು ಕಂತಿನ ಹಣ ಬಂದು ನಿಂತು ಹೋಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಏನು ಮತ್ತು ಒಂದೂ ಕಂತಿನ ಹಣ ಬರದೆ ಇದ್ದವರಿಗೆ ಒಟ್ಟಿಗೆ ಎಲ್ಲಾ ಕಂತುಗಳ ಹಣ ಬರಲಿದೆಯಾ? ಯಾವ ಸಮಸ್ಯೆಗಳಿಂದ ಈ ರೀತಿ ಆಗಿರಬಹುದು? ಇದಕ್ಕೆ ಪರಿಹಾರ ಏನು? ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:-ಅಂಚೆ ಕಚೇರಿಯ ಹೊಸ ಯೋಜನೆ.! ಕೇವಲ 500 ರೂಪಾಯಿ ಹೂಡಿಕೆ ಮಾಡಿ 66 ಲಕ್ಷ ಪಡೆಯಿರಿ.!
* ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ:- ಗೃಹಲಕ್ಷ್ಮಿ ಅರ್ಜಿ ಹಾಕಿದ ಸಮಯದಲ್ಲಿ ಬ್ಯಾಂಕ್ ಖಾತೆ ಮಾಹಿತಿ ಪಡೆದುಕೊಂಡಿಲ್ಲ. ನೇರವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ.
ಆದರೆ ಅನೇಕ ಮಹಿಳೆಯರಿಗೆ ತಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ದಾಖಲೆಗಳು ಕಳೆದು ಹೋಗಿವೆ ಹೀಗಾಗಿ ಅವರು ಗೊಂದಲದಲ್ಲಿದ್ದಾರೆ, ಇನ್ನು ಕೆಲವರ ಬ್ಯಾಂಕ್ ಖಾತೆಗಳೇ ಇನ್ ಆಕ್ಟಿವ್ ಆಗಿವೆ, ಕೆಲವು ಮಹಿಳೆಯರ ಖಾತೆಗಳು ಆಕ್ಟಿವ್ ಆಗಿದ್ದರು ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರದ ಕಾರಣ DBT ಮೂಲಕ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ.
ಹೀಗಾಗಿ ಮಹಿಳೆಯರು ಕೂಡ ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋಗಿ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಗಾಗಿ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು ಮತ್ತು ಖಾತೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಬೇಕು ಅಥವಾ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆ ತೆರೆದರೆ ಸರ್ಕಾರದ ಯಾವುದೇ ಹಣವಾದರೂ ಪ್ರೈಮರಿ ಅಕೌಂಟ್ (ಅಂಚೆ ಕಛೇರಿ ಖಾತೆ) ಹೋಗುತ್ತದೆ.
ಈ ಸುದ್ದಿ ಓದಿ:-ನಿಮ್ಮ ಜಮೀನು ಹೊಲ ಗದ್ದೆಗಳ ಸರ್ವೇ ಸ್ಕೆಚ್ಚ್, ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯವ ವಿಧಾನ.!
* ರೇಷನ್ ಕಾರ್ಡ್ ಇ-ಕೆವೈಸಿ:- ಸರ್ಕಾರವು ರೇಷನ್ ಕಾರ್ಡ್ e-KYC ಮಾಡಿಸದೆ ಇದ್ದಲ್ಲಿ ಅಂತಹ ರೇಷನ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಮತ್ತು ಈ ಪ್ರಕ್ರಿಯೆ ಪೂರ್ತಿಗೊಳಿಸಿದ ನಂತರವಷ್ಟೇ ನಿರ್ಬಂಧ ತೆರವು ಗೊಳಿಸುವುದು ಎನ್ನುವ ಸೂಚನೆ ನೀಡಿದೆ. ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಂಡಿದ್ದರೆ ಆ ತಿಂಗಳ ಗೃಹಲಕ್ಷ್ಮಿ ಹಣ ಬರುವುದಿಲ್ಲ, ಕೂಡಲೇ ಇದನ್ನು ಸರಿಪಡಿಸಿ.
* ದಾಖಲೆಗಳಲ್ಲಿ ವ್ಯತ್ಯಾಸವಾಗಿರುವುದು:- ಗೃಹಲಕ್ಷ್ಮಿ ಹಣ ಪಡೆಯಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಈ ಮೂರು ದಾಖಲೆಗಳಲ್ಲೂ ಹೆಸರು ಒಂದೇ ತರ ಇರಬೇಕು ಒಂದು ವೇಳೆ ವ್ಯತ್ಯಾಸಗಳಿದ್ದರೆ ಕೂಡಲೇ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಿ ಇಲ್ಲವಾದಲ್ಲಿ ನಿಮಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ.
ಇದರಲ್ಲಿ ಏನು ಸಮಸ್ಯೆ ಆಗಿದೆ ಎಂದು ನಿಮಗೆ ತಿಳಿಯದೆ ಇದ್ದರೆ ಅಥವಾ ಎಲ್ಲ ಸರಿ ಇದ್ದು ಹಣ ಬರದೆ ಇದ್ದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ಕೊಟ್ಟು CDPO ಅಧಿಕಾರಿಗಳಿಗೆ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಪತ್ರದ ಜೆರಾಕ್ಸ್ ಜೊತೆಗೆ ಮನವಿ ಸಲ್ಲಿಸಿ, ಅವರು ಪರಿಶೀಲನೆ ನಡೆಸಿ ಪರಿಹಾರ ಸೂಚಿಸುತ್ತಾರೆ.
ಈ ಸುದ್ದಿ ಓದಿ:-ಈ ದಾಖಲೆ ಇದ್ರೆ ಮಾತ್ರ ಇನ್ಮುಂದೆ ಪಿಂಚಣಿ ಹಣ ಸಿಗೋದು.!
ಅರ್ಹರಾಗಿದ್ದರು ಕೂಡ ತಾಂತ್ರಿಕ ಸಮಸ್ಯೆಗಳಿಂದ ಹಣ ಪಡೆಯಲಾಗದಿದ್ದರೆ ಒಟ್ಟಿಗೆ ಎಲ್ಲಾ ಕಂತುಗಳ ಹಣ ಕೂಡ ಬರಲಿದೆ ಮತ್ತು ಫೆಬ್ರವರಿ ತಿಂಗಳ 15ನೇ ತಾರೀಕಿನ ಒಳಗೆ ಎಲ್ಲಾ ಮಹಿಳೆಯರಿಗೂ 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬರಲಿದೆ.