ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುತ್ತದೆ, 1 ಲಕ್ಷ ಹಣಕ್ಕೆ 2 ಲಕ್ಷ ರಿಟರ್ನ್ಸ್ ಪಡೆಯಬಹುದು.!

ಅಂಚೆ ಕಚೇರಿಗಳು (Post office) ಈಗ ಜನಸಾಮಾನ್ಯರ ನಂಬಿಕಾರ್ಹ ಹಣಕಾಸಿನ ಸಂಸ್ಥೆಯಾಗಿದೆ. ಈಗ ದೇಶದಲ್ಲಿ ಸರ್ಕಾರ ಹಾಗೂ ಸರ್ಕಾರೇತರವಾಗಿ ಇರುವ ಬ್ಯಾಂಕ್ ಗಳಲ್ಲಿ ಸಿಗುವ ಬಹುತೇಕ ಎಲ್ಲಾ ಅನುಕೂಲತೆಗಳನ್ನು ಕೂಡ ಈ ಅಂಚೆ ಕಚೇರಿ ಸರ್ವಿಸ್ ನಲ್ಲೂ ಕೂಡ ಪಡೆಯಬಹುದು. ಅಂಚೆ ಕಚೇರಿಯಲ್ಲಿ ವಿಶೇಷವಾದ ಕೆಲವು ಹೂಡಿಕೆ ಯೋಜನೆಗಳು ಕೂಡ ಇದ್ದು ಇದನ್ನು ಬಡವರು ಹಾಗೂ ಸಾಮಾನ್ಯ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾಗಿದೆ.

WhatsApp Group Join Now
Telegram Group Join Now

ಅಂಚೆ ಕಚೇರಿಯಲ್ಲಿರುವ ಇಂತಹ ಯೋಚನೆಗಳ ಪೈಕಿ ಕಿಸಾನ್ ವಿಕಾಸ್ ಪತ್ರ (Kisan Vikas Patra Scheme) ಎನ್ನುವ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಡಬಲ್ ಹಣವನ್ನು ವಾಪಸ್ಸು ಪಡೆಯಬಹುದು ಈ ಯೋಜನೆ ಕುರಿತ ಕೆಲ ಪ್ರಮುಖ ಅಂಶಗಳನ್ನು ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ATM ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ಈ ಕಾರ್ಡ್ ಇದ್ದವರಿಗೆ ಸಿಗಲಿದೆ 10 ಲಕ್ಷ, ಸಾಕಷ್ಟು ಜನರಿಗೆ ಈ ವಿಚಾರ ಗೊತ್ತೆ ಇಲ್ಲ…!

● ಈ ಯೋಜನೆಗಳನ್ನು ಭಾರತೀಯ ನಾಗರಿಕರು ಮಾತ್ರ ಖರೀದಿಸಬಹುದು.
● ವಯಸ್ಸು 18 ವರ್ಷದಿಂದ ಮೇಲಿರಬೇಕು.
● ಈ ಯೋಜನೆ ಖರೀದಿಸಲು ಬೇಕಾಗುವ ದಾಖಲೆಗಳು

1. ಕಿಸಾನ್ ವಿಕಾಸ್ ಪತ್ರ ಅರ್ಜಿ ಫಾರಂ
2. KYC ಗಾಗಿ ಆಧಾರ್ ಕಾರ್ಡ್ , ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮುಂತಾದ ಯಾವುದಾದರೂ ಒಂದು ಗುರುತಿನ ಚೀಟಿ
3 ಜನ್ಮ ದಿನಾಂಕದ ಪುರಾವೆಗಾಗಿ ಯಾವುದಾದರೂ ಒಂದು ದಾಖಲೆ
4. ಇತ್ತೀಚಿನ ಭಾವಚಿತ್ರ
5. ನೀವು ಹೂಡಿಕೆ ಮಾಡುವ ಮತದ ಹಣ ಅಥವಾ ಚೆಕ್

ನಿಮ್ಮ ಜಮೀನು ಮನೆ ಅಥವಾ ಆಸ್ತಿಯನ್ನು ಬೇರೆಯವರು ಆಕ್ರಮಿಸಿಕೊಂಡಿದ್ರೆ ಅಥವಾ ಒತ್ತುವರಿ ಮಾಡಿಕೊಂಡಿದ್ರೆ ಅದನ್ನು ಬಿಡಿಸಿಕೊಳ್ಳುವುದು ಹೇಗೆ.? ಕಾನೂನು ಹೇಳೋದೇನು ನೋಡಿ.!

● ಪ್ರಸ್ತುತವಾಗಿ ಈ ಯೋಜನೆ ಅಡಿ 7.50% ಬಡ್ಡಿದರ ನಿಗದಿಯಾಗಿದೆ ಹಾಗೂ ಪ್ರತಿ ತ್ರೈಮಾಸಿಕಕ್ಕೊಮ್ಮೆ ಈ ಬಡ್ಡಿದರವು ಪರಿಷ್ಕೃತಗೊಳ್ಳುತ್ತಿರುತ್ತದೆ.
● ಕನಿಷ್ಠ 1000 ರೂ. ಇಂದ ಕೂಡ ಈ ಯೋಜನೆಯಡಿ ಹೂಡಿಕೆ ಮಾಡಬಹುದು, ಗರಿಷ್ಠ ಯಾವುದೇ ಮಿತಿ ಇಲ್ಲ.

● ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೆಸರೇ ಇರುವಂತೆ ನೀವು ಹಣವನ್ನು ಹೂಡಿಕೆ ಮಾಡಿ ನಿಮ್ಮ ಹೂಡಿಕೆ ಮೊತ್ತದ ಹಣಕ್ಕೆ ಖಾತ್ರಿಗಾಗಿ ಒಂದು ಪತ್ರವನ್ನು ಪಡೆಯುತ್ತೀರಿ. ನಿಮ್ಮ ಹೆಸರಿನಲ್ಲಿ ಈಗಾಗಲೇ ಈ ಅಕೌಂಟ್ ಓಪನ್ ಆಗಿದ್ದರೆ ಇನ್ನು ಕೆಲವು ದಿನಗಳು ಬಿಟ್ಟು ಮತ್ತೊಮ್ಮೆ ನಿಮ್ಮ ಬಳಿ ಹಣ ಬಂದಾಗ ನೀವು ಇದೇ ಅಕೌಂಟಿಗೆ ಆ ಹಣವನ್ನು ಕೂಡ ಹೂಡಿಕೆ ಮಾಡಿ ಸೇರಿಸುವುದಕ್ಕೆ ಆಗುವುದಿಲ್ಲ. ಆದರೆ ಆ ಮತ್ತೊಮ್ಮೆ ನೀವು ಮತ್ತೊಂದು ಕಿಸಾನ್ ವಿಕಾಸ್ ಪತ್ರ ಅಕೌಂಟ್ ಓಪನ್ ಮಾಡಿಸಬಹುದು.

ಮನೆ ಅಥವಾ ಜಮೀನಿನ ಆಸ್ತಿ ಪತ್ರ ಕಳೆದು ಹೋದರೆ ಮರಳಿ ಪಡೆಯುವ ವಿಧಾನ ಇಲ್ಲಿದೆ ನೋಡಿ.!

● ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಇಲಾಖೆಯ ಈ ಯೋಜನೆಗಳನ್ನು ಖರೀದಿಸುವುದರಿಂದ ಆಗುವ ಅನುಕೂಲತೆಗಳಲ್ಲಿ ಮೊದಲನೆಯದೇನೆಂದರೆ ನಿಮ್ಮ ಹಣಕಾಸಿಗೆ ಸರ್ಕಾರವೇ ಗ್ಯಾರಂಟಿಯಾಗಿರುತ್ತದೆ. ಆರ್ಥಿಕ ಭದ್ರತೆ ಕಾರಣದಿಂದಾಗಿ ಬಹುತೇಕರು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.
● ಈ ಯೋಜನೆಯ ಮೆಚುರಿಟಿ ಅವಧಿ 113 ತಿಂಗಳುಗಳು.

● ಪ್ರಿ ಮೇಚ್ಯೂರ್ ವಿಥ್ ಡ್ರಾವೆಲ್ (Pre mature withdrawal) ಮಾಡಲು ಯಾವುದೇ ರೀತಿಯ ಪೆನಾಲ್ಟಿ ಚಾರ್ಜಸ್ ಅಪ್ಲೈ ಮಾಡುವುದಿಲ್ಲ, ಆದರೆ ಒಂದು ಕಂಡೀಶನ್ ಇದೆ. ಈ ಯೋಜನೆಯನ್ನು ಖರೀದಿಸಿದ 30 ತಿಂಗಳ ಅವಧಿ ಒಳಗೆ ಪ್ರೀ ಮೆಚ್ಯುರ್ ಮಾಡಿಕೊಳ್ಳಲು ಅವಕಾಶ ಇಲ್ಲ. ಒಂದು ವೇಳೆ ಖರೀದಿಸಿದ ವ್ಯಕ್ತಿಯು ಮೃ’ತಪಟ್ಟರೆ ಅಥವಾ ಕಾನೂನಿನಿಂದ ಆರ್ಡರ್ ಇದ್ದಲ್ಲಿ ಆ ಸಮಯದಲ್ಲಿ ಮಾತ್ರ ಪಡೆದುಕೊಳ್ಳಲು ಅವಕಾಶ ಇದೆ.

ಈ ತಿಂಗಳು ಕೆಲವು ಜಿಲ್ಲೆಗಳಿಗೆ ಮಾತ್ರ ಅನ್ನಭಾಗ್ಯ ಯೋಜನೆಯ ಅಕ್ಕಿ & ಹಣ ಸಿಗೋದು.! ಯಾವ ಜಿಲ್ಲೆಗೆ ಸಿಗಲಿದೆ ಯಾವ ಜಿಲ್ಲೆಯ ಜನರಿಗೆ ಬರಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಒಂದು ಅಂಚೆ ಕಛೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಇದನ್ನು ಟ್ರಾನ್ಸ್ಫರ್ ಕೂಡ ಮಾಡಿಸಿಕೊಳ್ಳಬಹುದು.
● ಕೆಲವು ಬ್ಯಾಂಕಗಳು ಹಾಗೂ ಹಣಕಾಸು ಸಂಸ್ಥೆಯಲ್ಲಿ ಕಿಸಾನ್ ವಿಕಾಸ್ ಪತ್ರದ ಡಾಕ್ಯುಮೆಂಟ್ ಅದರ ಮೇಲೆ ಸಾಲ ಸೌಲಭ್ಯ ಕೂಡ ಸಿಗುತ್ತದೆ.
● ನಾಮಿನಿ ಫೆಸಿಲಿಟಿ ಕೂಡ ಇದ್ದು ಯೋಜನೆ ಖರೀದಿಸಿದವರು ಮ’ರ’ಣ ಹೊಂದಿದಾಗ ಕಾನೂನು ಪ್ರಕಾರವಾಗಿ ಸೇರಬೇಕಾದ ಮೊತ್ತ ವಾರಸುದಾರರಿಗೆ ಸೇರುತ್ತದೆ.

● ಈ ಯೋಜನೆಯ ಹೂಡಿಕೆ ತೆರಿಗೆ ವಿನಾಯಿತಿಗೆ ಒಳಪಡುವುದಿಲ್ಲ ಆದರೆ ಬಡ್ಡಿದರ ಹೆಚ್ಚಾಗಿರುವುದರಿಂದ ಒಂದೊಳ್ಳೆ ಮೊತ್ತದ ಲಾಭ ಖಂಡಿತ ಸಿಗುತ್ತದೆ.
● ನೀವು ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿ ಕಿಸಾನ್ ವಿಕಾಸ್ ಪತ್ರ ಖರೀದಿಸುವುದರಿಂದ 113 ತಿಂಗಳು ಮುಗಿದ ನಂತರ ನಿಮಗೆ 2 ಲಕ್ಷ ಹಣ ರಿಟರ್ನ್ಸ್ ಬರುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now