ಆಸ್ತಿ ಪತ್ರಗಳು (property documents) ಅತಿ ಅಮೂಲ್ಯವಾದ ದಾಖಲೆಗಳು ಆಸ್ತಿ ಪತ್ರವನ್ನು ಕಳೆದುಕೊಂಡರೆ (document missing) ಬಹಳ ಕ’ಷ್ಟ ಪಡಬೇಕಾಗುತ್ತದೆ. ನಿಮ್ಮ ಆಸ್ತಿಗಳ ಮೇಲೆ ಸಾಲ ಪಡೆದುಕೊಳ್ಳುವಾಗ (to Bank loan) ನಿಮ್ಮ ಆಸ್ತಿಯನ್ನು ವಿಭಾಗ ಮಾಡುವಾಗ ಅಥವಾ ಪರಬಾರೆ ಮಾಡುವಾಗ (to sale) ಅಥವಾ ಸರ್ಕಾರಿ ಸೌಲಭ್ಯಗಳನ್ನು (to government facilities profit) ನಿಮ್ಮ ಆಸ್ತಿಯ ಆಧಾರದ ಮೇಲೆ ಪಡೆದುಕೊಳ್ಳುವಾಗ ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಹಾಗಾಗಿ ಇವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಜೊತೆಗೆ ನಿಮ್ಮ ದಾಖಲೆ ಏನಾದರೂ ಕಳವಾದರೆ ಅ’ಪಾ’ಯ ತಪ್ಪಿದ್ದಲ್ಲ. ಯಾಕೆಂದರೆ ಈ ದಾಖಲೆಗಳು ಯಾರಿಗಾದರೂ ಸಿಕ್ಕಾಗ ಅವರು ಅದರ ದುರ್ಬಳಕೆ ಮಾಡಿಕೊಳ್ಳಬಹುದು. ಅಥವಾ ಬೇಕೆಂದಲೇ ನಿಮ್ಮ ಶತ್ರುಗಳು ನಿಮ್ಮ ಆಸ್ತಿಯ ದಾಖಲೆಗಳನ್ನು ಕಳ್ಳತನ ಮಾಡಿಸಿ ಖೊಟ್ಟಿ ದಾಖಲೆ ಸೃಷ್ಟಿಸಿ ಅನ್ಯ ಮಾರ್ಗದ ಮೂಲಕ ನಿಮಗೆ ತಿಳಿಯದೆ ನಿಮ್ಮ ಆಸ್ತಿಯನ್ನು ಮಾರಾಟ ಮಾಡಿಬಿಡಬಹುದು ಆದ್ದರಿಂದ ಈ ವಿಚಾರವಾಗಿ ಎಚ್ಚರಿಕೆಯಿಂದಿರಿ.
ಹಾಗಿದ್ದರೂ ಕೂಡ ನಿಮ್ಮ ಕೈ ತಪ್ಪಿ ಯಾವುದಾದರೂ ಒಂದು ಸಂದರ್ಭದಲ್ಲಿ ನೀವು ನಿಮ್ಮ ಆಸ್ತಿಗಳ ಮೂಲ ದಾಖಲೆಗಳನ್ನು ಕಳೆದುಕೊಂಡಿದ್ದರೆ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಭಯಪಡುವ ಅಗತ್ಯ ಇಲ್ಲ. ಈಗ ನಾವು ಹೇಳುವ ಈ ವಿಧಾನದ ಮೂಲಕ ನೀವು ನಿಮ್ಮ ಆಸ್ತಿಯ ಮೂಲದಾಖಲೆ ನಕಲಿ ಪ್ರತಿಗಳನ್ನು ವಾಪಾಸ್ ಪಡೆಯಬಹುದು. ಇಶು ಮೂಲ ದಾಖಲೆಗಳಂತೇ ಎಲ್ಲೆಡೆ ಮಾನ್ಯವಾಗುತ್ತವೆ.
ಆಸ್ತಿ ಪತ್ರವನ್ನು ಮರಳಿ ಪಡೆದುಕೊಳ್ಳುವುದನ್ನು ಕುರಿತು ಪ್ರಮುಖ ವಿಷಯಗಳು:-
● ಆಸ್ತಿಪತ್ರ ಕಳೆದು ಹೋದರೆ ತಕ್ಷಣವೇ ಮೊದಲಿಗೆ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ (police complaint) ಕೊಟ್ಟು ಅದರ ರಿಸಿಪ್ಟ್ ಪಡೆದುಕೊಳ್ಳಿ. ಯಾರಾದರೂ ನಿಮ್ಮ ದಾಖಲೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎನ್ನುವುದಕ್ಕೆ ಮುಂಜಾಗ್ರತೆ ಕ್ರಮವಾಗಿ ದೂರು ಸಲ್ಲಿಸುವುದು ಒಳ್ಳೆಯದು.
● ದೂರು ಕೊಟ್ಟ ನಂತರ ಹೊಸ ಆಸ್ತಿ ಧೃಡೀಕರಣ ಪತ್ರಕ್ಕಾಗಿ ಉಪ ನೋಂದಣಾಧಿಕಾರಿ ಕಚೇರಿಗೆ (Sub register office) ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆ ದೂರಿನ ರಸೀದಿ, ಹಾಗೂ ನಿಮ್ಮ ಆಸ್ತಿಗಳನ್ನು ಗುರುತಿಸಬಹುದಾದ ಅದಕ್ಕೆ ಸಂಬಂಧಿಸಿದ ಪಹಣಿ ಪತ್ರದ ಪ್ರತಿಗಳು (RTC copy to indentification) ಅಥವಾ ಇನ್ಯಾವುದೇ ದಾಖಲೆಗಳು ನಿಮ್ಮ ಬಳಿ ಇದ್ದರೆ ಅದನ್ನು ಕೂಡ ಸಲ್ಲಿಸಬೇಕು.
● ನಿಮ್ಮ ಅರ್ಜಿಯನ್ನು ಸ್ವೀಕರಿಸಿ ನಿಗದಿತ ಅರ್ಜಿ ಶುಲ್ಕವನ್ನು (Fee) ಪಡೆದುಕೊಂಡು ನಿಮಗೆ ಉಪನೋಂದಾಣಿಧಿಕಾರಿ ಕಚೇರಿ ಸಿಬ್ಬಂದಿಗಳು ರಶೀದಿ ಕೊಡುತ್ತಾರೆ
● ಅದಾದ 3-7 ಕೆಲಸದ ದಿನಗಳ ಒಳಗೆ ನಿಮಗೆ ನಿಮ್ಮ ಮನವಿಯಂತೆ ಹೊಸ ದಾಖಲೆ ಪತ್ರಗಳನ್ನು ಕೊಡುತ್ತಾರೆ.
● ಸಕಾಲ (SAKALA) ಯೋಜನೆ ಅಡಿ ನಿಮ್ಮ ಅರ್ಜಿಗಳನ್ನು ಸ್ವೀಕರಿಸಿ, ಏಳು ದಿನದ ಒಳಗಡೆ ನಿಮ್ಮ ದಾಖಲೆಗಳನ್ನು ಕೊಡಲಾಗುತ್ತದೆ.
ಎಲ್ಲಾ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್, ಪಿಂಚಣಿ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.!
● ಆಸ್ತಿಪತ್ರ ಹರಿದು ಹೋಗಿದ್ದರೆ ಅಥವಾ ನೀರಿನಲ್ಲಿ ಬಿದ್ದು ಹಾಳಾಗಿದ್ದರೆ ಇಂತಹ ಸಂದರ್ಭಗಳನ್ನು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವ ಅಗತ್ಯ ಇಲ್ಲ, ನೇರವಾಗಿ ಸಬ್ ರಿಜಿಸ್ಟ್ರಾರ್ ಆಫೀಸ್ ಗೆ ಹೋಗಿ ಸರಳವಾದ ರೀತಿ ಅರ್ಜಿ ಸಲ್ಲಿಸುವ ಮೂಲಕ ಆಸ್ತಿಯ ಮೂಲ ದೃಢೀಕರಣ ದಾಖಲೆ ಪತ್ರಗಳ ನಕಲನ್ನು ಪಡೆದುಕೊಳ್ಳಬಹುದು.
● ಆಸ್ತಿಪತ್ರದಲ್ಲಿ ಹಲವಾರು ವಿಧವಿದೆ. ಹಾಗಾಗಿ ನೀವು ಯಾವುದನ್ನು ಪಡೆಯುತ್ತಿದ್ದೀರ ಎನ್ನುವುದರ ಮೇಲೆ ಅದರ ಶುಲ್ಕ ನಿಗದಿ ಆಗುತ್ತದೆ, 100ರೂ. – 500ರೂ. ಸ್ವೀಕರಿಸಲಾಗುತ್ತದೆ.
● ಕಾವೇರಿ ತಂತ್ರಾಂಶದ ಮೂಲಕ ಈಗ ನೀವು ಆನ್ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಸಿ ಆಸ್ತಿಪತ್ರಗಳ ಮೂಲ ದಾಖಲೆ ಪಡೆದುಕೊಳ್ಳಬಹುದು.
ವೆಬ್ಸೈಟ್ ವಿಳಾಸ:- www.kaverionline.karnataka.gov.in