ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಹೊಂದಿರುವ ಆಸ್ತಿಯನ್ನು ಎರಡು ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ. ಪಿತ್ರಾರ್ಜಿತವಾಗಿ ಪಡೆದ ಆಸ್ತಿ ಮತ್ತು ಸ್ವಯಾರ್ಜಿತವಾಗಿ ಆತನೇ ಸಂಪಾದನೆ ಮಾಡಿದ ಆಸ್ತಿ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಎಲ್ಲರಿಗೂ ಕೂಡ ಕನಿಷ್ಠ ಮಟ್ಟದ ಮಾಹಿತಿ ಇದ್ದೇ ಇರುತ್ತದೆ ನಮ್ಮ ಪೂರ್ವಿಕರಿಂದ ಅಂದರೆ ಅಜ್ಜನಿಂದ ತಂದೆಗೆ, ತಂದೆಯಿಂದ ನಮಗೆ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎನ್ನುತ್ತೇವೆ.
ಈ ಪಿತ್ರಾರ್ಜಿತ ಆಸ್ತಿಯು ತಂದೆಯ ಮರಣದ ನಂತರ ಅಥವಾ ತಂದೆಗೆ ಮರಣದ ಮುನ್ನ ಕುಟುಂಬದ ಸದಸ್ಯರ ನಡುವೆ ವಿಭಾಗವಾಗುತ್ತದೆ. ತಂದೆಯ ಆಸ್ತಿಯು ಎಲ್ಲ ಮಕ್ಕಳಿಗೂ ಕೂಡ ಸಮಾನವಾಗಿ ಹಂಚಿಕೆ ಆಗುತ್ತದೆ. 2005ರಕ್ಕೂ ಮುನ್ನ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇರಲಿಲ್ಲ, ಆದರೆ 2005ರಲ್ಲಿ ತಿದ್ದುಪಡಿ ಆದ ಹಿಂದೂ ಉತ್ತರಾದಿತ್ವದ ಕಾಯ್ದೆಯ ನಂತರ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಸಮಾನ ಅಧಿಕಾರವುಳ್ಳವರಾಗಿದ್ದಾರೆ.
ಹಾಗಾಗಿ ಆಸ್ತಿಯ ಕುರಿತು ಮಾತ್ರ ಅಲ್ಲದೇ ಆಸ್ತಿಯ ಮೇಲೆ ಬೀಳುವ ತೆರಿಗೆ ಕುರಿತು ಕೂಡ ಪ್ರತಿಯೊಬ್ಬರೂ ಮಾಹಿತಿ ತಿಳಿದುಕೊಳ್ಳಲೇ ಬೇಕು. ಪಿತ್ರಾರ್ಜಿತ ಆಸ್ತಿಯನ್ನು ವಿಭಾಗವಾದ ಸಮಯದಲ್ಲಿ ಪಡೆಯುವಾಗ ಆಸ್ತಿಯ ಮೇಲೆ ಯಾವುದೇ ರೀತಿಯ ತೆರಿಗೆ ಬೀಳುತ್ತದೆ ಎಂದರೆ ಪಿತ್ರಾರ್ಜಿತ ಆಸ್ತಿಯನ್ನು ಕ್ಯಾಪಿಟಲ್ ಗೇಮ್ಸ್ ಎಂದು ಹೇಳಲಾಗುತ್ತದೆ.
ಅನುವಂಶಿಕ ತೆರಿಗೆ ಭಾರತದಲ್ಲಿ ಅನ್ವಯ ಆಗುವುದಿಲ್ಲ ಹಾಗಾಗಿ ಈ ಕಾರಣದಿಂದಾಗಿ ತಾತಾ ಅಥವಾ ತಂದೆಯಿಂದ ಪಿತ್ರಾರ್ಜಿತವಾಗಿ ಆಸ್ತಿ ವಿಭಾಗದ ಮೂಲಕ ನಮ್ಮ ಹೆಸರಿಗೆ ಆಗುವಾಗ ಯಾವುದೇ ರೀತಿಯ ತೆರಿಗೆ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಆದರೆ ನೀವು ಇದನ್ನು ಮಾರಾಟ ಮಾಡುವ ಸಮಯದಲ್ಲಿ ತೆರಿಗೆ ಅನ್ವಯಿಸುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.
ಎಲ್ಲರಿಗೂ ಗೊತ್ತಿರುವ ರೀತಿಯಲ್ಲಿ ಆಸ್ತಿ ಮಾರಾಟ ಮಾಡುವಾಗ ತೆರಿಗೆ ಬಿದ್ದೇ ಬೀಳುತ್ತದೆ. ಸ್ವಯಾರ್ಜಿತ ಆಸ್ತಿ ಮಾರಾಟ ಮಾಡಿದರು ಕೂಡ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಲೇಬೇಕು ಹಾಗೆಯೇ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡುವಾಗಲೂ ತೆರಿಗೆ ಪಾವತಿ ಮಾಡಬೇಕು. ಇದು ನೀವು ನಿಮ್ಮ ಪಿತ್ರಾರ್ಜಿತ ಆಸ್ತಿಯ ಮೇಲೆ ಎಷ್ಟು ವರ್ಷಗಳ ಕಾಲ ಅಧಿಕಾರವನ್ನು ಹೊಂದಿದ್ದೀರಿ ಎನ್ನುವುದರ ಮೇಲೆ ಅದು ನಿರ್ಧಾರ ಆಗುತ್ತದೆ.
ನೀವೇನಾದರೂ ನಿಮ್ಮ ತಂದೆಯಿಂದ ಅಥವಾ ತಾತನಿಂದ ಪಡೆದ ಆಸ್ತಿಯನ್ನು ಅದು ನಿಮ್ಮ ಹೆಸರಿಗೆ ಬಂದ ನಂತರ ಎರಡು ವರ್ಷಗಳ ಒಳಗೆ ಮಾರಾಟ ಮಾಡಿದರೆ ಅದು ಅಲ್ಪಾವಧಿ ಕ್ಯಾಪಿಟಲ್ ಗೇನ್ಸ್ ವ್ಯಾಪ್ತಿಗೆ ಬರುತ್ತದೆ ಆ ಸಮಯದಲ್ಲಿ ಬೀಳುವ ತೆರಿಗೆ ಪ್ರಮಾಣ ಕೂಡ ಕಡಿಮೆ ಇರುತ್ತದೆ ಸಾಮಾನ್ಯವಾಗಿ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಮೇಲೆ ಹೆಚ್ಚಿನ ತೆರಿಗೆ ಬೀಳುತ್ತದೆ.
ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಹೊಸ ರೂಲ್ಸ್ ಜಾರಿ.!
ನೀವು ನಿಮ್ಮ ತಂದೆಯಿಂದ ಅಥವಾ ತಾತನಿಂದ ಅಥವಾ ಈ ರೀತಿ ಪಿತ್ರಾರ್ಜಿತ ಮೂಲದಿಂದ ಪಡೆದ ಆಸ್ತಿಯ ಮೇಲೆ ಎರಡು ವರ್ಷಕ್ಕಿಂತ ಹೆಚ್ಚಿನ ಕಾಲ ಅಧಿಕಾರ ಹೊಂದಿದ್ದೇ ಆದಲ್ಲಿ ನಿಮ್ಮ ಮಾರಾಟದ ಮೇಲೆ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಆಧಾರದ ಮೇಲೆ ತೆರಿಗೆ ಬೀಳುತ್ತದೆ. ಸದ್ಯಕ್ಕೆ ಭಾರತದಲ್ಲಿ ಈ ರೀತಿ ಪಿತ್ರಾರ್ಜಿತವಾಗಿ ಪಡೆದು ಎರಡು ವರ್ಷದ ಕ್ಕಿಂತ ಹೆಚ್ಚಿನ ಕಾಲ ಒಡೆತನದಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡುವವರು 20.8% ಟ್ಯಾಕ್ಸ್ ಪಾವತಿ ಮಾಡಬೇಕು. ಈ ಮಾಹಿತಿಯು ಪ್ರತಿಯೊಬ್ಬರಿಗೂ ಅನುಕೂಲ ಬರುತ್ತದೆ ಹಾಗಾಗಿ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.