ಸ್ಟೇ ಆರ್ಡರ್ (Stay order) ನ್ನು ಕನ್ನಡದಲ್ಲಿ ತಡೆಯಾಜ್ಞೆ ಎಂದು ಕರೆಯಬಹುದು. ಕೋರ್ಟ್ ಭಾಷೆಯಲ್ಲಿ ಸ್ಟೇ ಆರ್ಡರ್ ಎಂದರೆ ಏನು ಎಂದು ನೋಡುವುದಾದರೆ ಯಾವುದೇ ಒಂದು ಕೆಲಸ ಕಾರ್ಯ ನಡೆಯುತ್ತಿರುವುದನ್ನು ತಡೆಯುವುದಕ್ಕಾಗಿ ತರುವ ಆರ್ಡರ್ ಒಬ್ಬ ವ್ಯಕ್ತಿಗೆ ಸೇರಿದ ಆಸ್ತಿಯಲ್ಲಿ ಯಾವುದೋ ಮೂರನೇ ವ್ಯಕ್ತಿ ಬಂದು ಕಟ್ಟಡಗಳನ್ನು ನಿರ್ಮಿಸಿಕೊಳ್ಳುವುದು ಅಥವಾ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಲು ಮುಂದಾಗುವುದು.
ಆ ವ್ಯಕ್ತಿಯ ಸ್ವಾಧೀನಕ್ಕೆ ತೊಂದರೆ ಕೊಡುವುದು, ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುವುದು ಈ ರೀತಿಯಾಗಿ ತೊಂದರೆ ಕೊಡುತ್ತಿದ್ದಾಗ ಸ್ಟೇ ಆರ್ಡರ್ ಅನ್ನು ಕೋರ್ಟಿನಿಂದ ತರಬಹುದು. ಮೊದಲಿಗೆ ಆ ವ್ಯಕ್ತಿಗೆ ನೇರವಾಗಿ ಹೋಗಿ ಈ ರೀತಿ ನಮ್ಮ ಜಮೀನಿಗೆ ಅಥವಾ ಆಸ್ತಿಗೆ ಅಥವಾ ಜಾಗಕ್ಕೆ ಸೇರಿದ ಪ್ರದೇಶದಲ್ಲಿ ಈ ರೀತಿಯಾಗಿ ನೀವು ಏನನ್ನು ಮಾಡುವಂತಿಲ್ಲ, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳು ಕೂಡ ನಮ್ಮ ಪರವಾಗಿ ಇವೆ.
ನೀವೇನಾದರೂ ಈ ರೀತಿ ಮುಂದುವರೆದರೆ ನಾವು ಕೂಡ ಕಾನೂನು ಪ್ರಕಾರವಾಗಿ ಇದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ವಾರ್ನಿಂಗ್ ಕೊಡಬೇಕು ಅಂತ ಸಮಯದಲ್ಲೇ ಸಾಮಾನ್ಯವಾಗಿ ಗಲಾಟೆಗಳು ನಡೆದೇ ನಡೆಯುತ್ತವೆ. ಜಗಳ ಹೊಡೆದಾಟ ಆದಾಗ ನೀವು ಪೊಲೀಸ್ ಸ್ಟೇಷನ್ ಅಲ್ಲಿ ಈ ಕುರಿತು ಕಂಪ್ಲೇಂಟ್ (Police complaint) ಕೂಡ ಕೊಡಬಹುದು
ಹಾಗೂ ಆ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಒಂದು ಲೀಗಲ್ ನೋಟಿಸ್ (legal notice ) ಕೂಡ ಮೂರನೇ ವ್ಯಕ್ತಿಗೆ ಕಳುಹಿಸಬಹುದು. ಇದಕ್ಕೂ ಕೂಡ ಬಗ್ಗದೆ ಆತ ಮುಂದುವರೆದಾಗ ಕೋರ್ಟಿಗೆ ಹೋಗಿ ಅರ್ಜಿ ಸಲ್ಲಿಸುವ ಮೂಲಕ ನೀವು ಇದಕ್ಕೆ ಸ್ಟೇ ಆರ್ಡರ್ ತಂದು ಆ ಕಾರ್ಯಗಳು ನಡೆಯದಂತೆ ತಡೆಯಬಹುದು.
ಸ್ಟೇ ಆರ್ಡರ್ ತರಲು ಬೇಕಾಗುವ ದಾಖಲೆಗಳು:-
● ನೀವು ಒಂದು ಅರ್ಜಿಯನ್ನು ಬರೆದು ಅದರಲ್ಲಿ ಯಾವ ಕಾರಣಕ್ಕಾಗಿ ಸ್ಟೇ ಆರ್ಡರ್ ತರುತ್ತಿದ್ದೀರಾ ಎನ್ನುವುದರ ಕುರಿತು ಕಾರಣವನ್ನು ಕೂಡ ವಿವರಿಸಿರಬೇಕು.
● ನಿಮ್ಮ ಪರ್ಮಿಷನ್ ವಿರುದ್ಧವಾಗಿ ನಿಮ್ಮ ಜಾಗದಲ್ಲಿ ನಡೆಯುತ್ತಿರುವ ಕೆಲಸ ಕಾರ್ಯದ ಕುರಿತು ಒಂದು ಫೋಟೋ ಅಥವಾ ವಿಡಿಯೋ ತುಣುಕನ್ನು ಕೂಡ ಸಾಕ್ಷಿಯಾಗಿ ನೀವು ಇಟ್ಟುಕೊಳ್ಳಬೇಕು. ಮುಂದೆ ಇದನ್ನು ಕೋರ್ಟ್ ಕೇಳಿದಾಗ ಸಲ್ಲಿಸಬೇಕಾಗುತ್ತದೆ ಅಥವಾ ನಿಮ್ಮ ಸುರಕ್ಷತೆಗಾಗಿ ನೀವು ಇದನ್ನು ಸುದ್ದಿಮಾಧ್ಯಮಗಳಲ್ಲಿ ಪ್ರಿಂಟ್ ಕೂಡ ಮಾಡಿಸಬಹುದು.
● ಆ ಪ್ರಾಪರ್ಟಿ ನಿಮ್ಮ ಹೆಸರಿನಲ್ಲಿ ಇದೇ ಎನ್ನುವುದಕ್ಕೆ ದಾಖಲೆಗಳು
● ಆ ಪ್ರಾಪರ್ಟಿ ಬಗ್ಗೆ ನಿಮ್ಮ ವ್ಯಾಪ್ತಿಗೆ ಒಳಪಟ್ಟ ನ್ಯಾಯಗಳಲ್ಲಿ ದಾವೆ ಸಲ್ಲಿಸಿದರೆ ಅದಕ್ಕೆ ಸಂಬಂಧಿಸಿದ ಪುರಾವೆ ಹಾಗೂ ಅದರ ಆದೇಶ ಪತ್ರ ಕೂಡ ಬೇಕಾಗುತ್ತದೆ.
● ನೀವು ತಡೆಯಲು ಹೋದಾಗ ಹೊಡೆದಾಟಗಳಾಗಿ ಪೊಲೀಸ್ ಕೇಸ್ ಆಗಿದ್ದರೆ ಅದರ ದಾಖಲೆ ಹಾಗೂ ನೀವು ಕಳಿಸಿದ್ದ ಲೀಗಲ್ ನೋಟಿಸ್ ಪ್ರತಿ.
● ಅಫಿಡವಿಟ್ ಮತ್ತು ಸಾಕ್ಷಿಗಳ ಹೇಳಿಕೆ.
ಹೆಣ್ಣು ಮಕ್ಕಳು ತೀರಿಕೊಂಡ ನಂತರ ಅವರ ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗುತ್ತ.?
ನೀವು ಸಲ್ಲಿಸಿರುವ ಎಲ್ಲಾ ದಾಖಲೆಗಳು ಸರಿ ಇದ್ದಾಗ ಮಾತ್ರ ನಿಮಗೆ ಸ್ಟೇ ಆರ್ಡರ್ ಸಿಗುವುದು. ಆರ್ಡರ್ ಎನ್ನುವುದು ಆ ಕೆಲಸ ಕಾರ್ಯಗಳನ್ನು ಶಾಶ್ವತವಾಗಿ ತಡೆಯುವುದು ಅಲ್ಲ ಫೈನಲ್ ಜಡ್ಜ್ಮೆಂಟ್ ಕಾಪಿ ಬರುವವರೆಗೂ ಕೂಡ ಯರೂ ಆ ಜಾಗದಲ್ಲಿ ಕೆಲಸ ಕಾರ್ಯಗಳನ್ನು ನಡೆಸಬಾರದು ಎನ್ನುವುದನ್ನು ತಡೆಯುವುದು ಅಷ್ಟೇ. ಈ ರೀತಿ ಸ್ಟೇ ಆರ್ಡರ್ ತಂದ ನಂತರವೂ ಕೂಡ ಕಾನೂನಿನ ಹೋರಾಟಗಳು ನಡೆಯುತ್ತವೆ.
ಕೋರ್ಟಿನಲ್ಲಿ ಇದಕ್ಕೆ ನಿಜವಾದ ಮಾಲೀಕರು ಯಾರು ಎಂದು ಸಾಬೀತಾಗುವುದು ಕೂಡ ಬಾಕಿ ಇರುತ್ತದೆ. ಅನೇಕರು ತಿಳಿದುಕೊಂಡಿರುವ ರೀತಿ ಸ್ಟೇ ಆರ್ಡರ್ ಹಾಗೂ ಇಂಜೆಕ್ಷನ್ ಆರ್ಡರ್ ಎರಡೂ ಕೂಡ ಒಂದೇ ಅಲ್ಲ. ಇಂಜೆಕ್ಷನ್ ಆರ್ಡರ್ (Injuction order) ಪಡೆದುಕೊಳ್ಳಲು ದಾಖಲೆಗಳ ತನಿಖೆ ಅವಶ್ಯಕತೆ ಇರುತ್ತದೆ ನಂತರ ಆರ್ಡರ್ ಬರುತ್ತದೆ.
ಇದಕ್ಕೆ ಕೆಲ ಸಮಯ ಹಿಡಿಯುತ್ತದೆ, ಹಾಗಾಗಿ ಅಲ್ಲಿಯವರೆಗೂ ಆಗುವ ನ’ಷ್ಟವನ್ನು ತಪ್ಪಿಸಲು ಸ್ಟೇ ಆರ್ಡರ್ ನೀಡಲಾಗಿರುತ್ತದೆ. ಸ್ಟೇ ಆರ್ಡರ್ ವಿರುದ್ಧ ನಡೆದುಕೊಂಡಾಗ ನ’ಷ್ಟ ಅನುಭವಿಸುತ್ತಾರೆ ಆದರೆ ಇಂಜೆಕ್ಷನ್ ಆರ್ಡರ್ ವಿರುದ್ಧ ನಡೆದುಕೊಂಡಾಗ ಶಿ’ಕ್ಷೆಯನ್ನು ಅನುಭವಿಸಬೇಕಾಗುತ್ತದೆ.